ಕ್ರಿಕೆಟ್ ಶೈಲಿಯಲ್ಲಿ ಯುವರಾಜ್ ಸಿಂಗ್ ಬಾಟಲ್ ಕ್ಯಾಪ್ ಚಾಲೆಂಜ್

0
518

ಒಂದಲ್ಲ ಒಂದು ರೀತಿಯಲ್ಲಿ ಸೆಲೆಬ್ರಿಟಿ ಗಳು ಸದ್ದು ಮಾಡುತ್ತಲೇ ಇರುತ್ತಾರೆ. ಆದರೆ ಈಗ ಬಾಟಲ್ ಕ್ಯಾಪ್ ಚಾಲೆಂಜ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಈಗಾಗಲೇ ಹಮ್ ಫಿಟ್ ಹೇ ತೊ ಇಂಡಿಯಾ ಫಿಟ್ ಎನ್ನುವ ಒಂದು ಅಭಿಯಾನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೇಶಾದ್ಯಂತ ಈ ಚಾಲೆಂಜ್ ಬಹಳ ಜನಪ್ರಿಯವಾಗಿತ್ತು, ಅನೇಕ ನಟ ನಟಿಯರು ಈ ಮೂಲಕ ತಮ್ಮ ಫಿಟ್ನೆಸ್ ಅನ್ನು ನಿರೂಪಿಸಿದ್ದರು. ಈಗ ಇಂತಹದೇ ಒಂದು ಚಾಲೆಂಜ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಓಪನ್ ಕ್ಯಾಪ್ ಚಾಲೆಂಜ್ ಅನ್ನು ಎಲ್ಲರೂ ಸ್ವೀಕರಿಸುತ್ತಿದ್ದಾರೆ.

ಷರತ್ತನ್ನು ಸ್ವೀಕರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು

ಓಪನ್ ಕ್ಯಾಪ್ ಚಾಲೆಂಜ್ ಎಂದರೆ ಏನು? ಒಂದು ಬಾಟಲ್ ನ ಮುಚ್ಚಳವನ್ನು ಕಾಲಿನಿಂದ ಮುಚ್ಚಳಕ್ಕೆ ಒದ್ದು ಅದನ್ನು ಕೆಳಗೆ ಬೀಳಿಸುವುದೇ ಚಾಲೆಂಜ್. ಕಾಲನ್ನು ಎತ್ತರಕ್ಕೆ ಎತ್ತುವುದೇ ಒಂದು ದೊಡ್ಡ ಟಾಸ್ಕ್ ಆಗಿದೆ. ಕಾಲನ್ನು ಎತ್ತರಕ್ಕೆ ತಂದ ನಂತರ ಕೇವಲ ಮುಚ್ಚಳ ಬೀಳುವ ಹಾಗೆ ಮಾತ್ರ ಹೊಡೆಯಬೇಕು. ಬಾಟಲ್ ಅದೇ ಜಾಗದಲ್ಲಿ ಇರಬೇಕು ಆದರೆ ತೋಪೆನ್ ಮಾತ್ರ ಉರುಳಿಸಬೇಕು. ಅನೇಕ ಜನರು ಇದನ್ನು ಟ್ರೈ ಮಾಡುತ್ತಿದ್ದಾರೆ. ಹಾಲಿವುಡ್ ನಿಂದ ಶುರುವಾದ ಈ ಚಾಲೆಂಜ್ ನ ಬಿಸಿ ಸ್ಯಾಂಡಲ್ ವುಡ್ ಗು ಈಗ ತಟ್ಟಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಈ ಷರತ್ತನ್ನು ಸ್ವೀಕರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಗಣೇಶ್ ಅರ್ಜುನ್ ಸರ್ಜಾ, ಧ್ರುವಾ ಸರ್ಜಾ ಚಾಲೆಂಜ್ ಸ್ವೀಕರಿಸಿದ್ದರು

ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ಫಿಟ್ ಇರುವ ಗಣಿ ಬಾಟಲ್ ಕ್ಯಾಪ್ ಅನ್ನು ಕಾಲಿನಿಂದ ಒದ್ದು ಬಿಸಾಡಿದ್ದಾರೆ. ಜಿಮ್ ಮಾಡುವ ವೇಳೆಯಲ್ಲಿ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದಾರೆ. ಜಿಮ್ ನಲ್ಲಿ ಹಲವಾರು ವರ್ಕ್ ಔಟ್ ಮಾಡುವ ಗಣೇಶ್ ಬಹಳ ಸುಲಭವಾಗಿ ಈ ಚಾಲೆಂಜ್ ಅನ್ನು ಕಂಪ್ಲೀಟ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಖ್ಯಾತ ನಟರಾದ ಅರ್ಜುನ್ ಸರ್ಜಾ ಕೂಡ ಈ ಷರತ್ತನ್ನು ಸ್ವೀಕರಿಸಿ ನಾನು ಇಂತಹದೊಂದು ಸಾಹಸವನ್ನು ಮಾಡಬಲ್ಲೆ ಎಂದು ನಿರೂಪಿಸಿದ್ದಾರೆ. ಚಂದನವನದಲ್ಲಿ ಮೊದಲು ಈ ಸ್ಟಂಟ್ ಅನ್ನು ಟ್ರೈ ಮಾಡಿದ್ದು ಅರ್ಜುನ್ ಸರ್ಜಾ. ಸರ್ಜಾ ವಂಶದ ಮತ್ತೊಂದು ಕುಡಿಯಾದ ಚಿರಂಜೀವಿ ಸರ್ಜಾ ಅವರ ಹೆಸರು ಸಹ ಬಾಟಲ್ ಕ್ಯಾಪ್ ಓಪನ್ ಚಾಲೆಂಜ್ ಪೂರ್ಣಗೊಳಿಸಿದ ಲಿಸ್ಟ್ ಗೆ ಸೇರ್ಪಡೆಯಾಗುತ್ತದೆ.

ಕ್ರಿಕೆಟ್ ಶೈಲಿಯಲ್ಲಿ, ಯುವರಾಜ್ ಸಿಂಗ್ ಬಾಟಲ್ ಕ್ಯಾಪ್ ಚಾಲೆಂಜ್

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಈ ಬಾಟಲ್ ಸಹಾಸವನ್ನು ಮಾಡಿದ್ದರು. ಹರಿಪ್ರಿಯಾ ಬಾಟಲ್ ಗೆ ಕೇವಲ ಮುತ್ತು ಕೊಡುವ ಮೂಲಕ ಮುಚ್ಚಳವನ್ನು ತೆಗೆದಿದ್ದು ವಿಶೇಷವಾಗಿದೆ.ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿಗೆ ವಿದಾಯವನ್ನು ಹೇಳಿದ್ದರು. ಓಪನ್ ಬಾಟಲ್ ಚಾಲೆಂಜ್ ಅನ್ನು ತಮ್ಮ ಕ್ರಿಕೆಟ್ ಶೈಲಿಯಲ್ಲಿ ಮಾಡಿ ಬೇರೆ ಕ್ರಿಕೆಟ್ ಆಟಗಾರ ಹೆಸರನ್ನು ಸೂಚಿಸಿದ್ದಾರೆ. ಹೌದು, ಯುವಿ ಕೈ ಅಲ್ಲಿ ಬ್ಯಾಟ್ ಅನ್ನು ಹಿಡಿದು ಹಾಕುವ ಬೌಲ್ ಅನ್ನು ಹೊಡೆಯುವ ಮೂಲಕ ಬಾಟಲ್ ಕ್ಯಾಪ್ ಉರುಳಿಸಿದ್ದಾರೆ.

ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದು, ಸಚಿನ್ ತೆಂಡೂಲ್ಕರ್, ಬ್ರೈನ್ ಲಾರಾ, ಶಿಖರ್ ಧವನ್, ಗೆಲ್ ಅವರನ್ನು ಟ್ಯಾಗ್ ಮಾಡಿ ನೀವು ಕೂಡ ಈ ಚಾಲೆಂಜ್ ಅನ್ನು ಸ್ವೀಕರಿಸಿ. ಎಡಗೈ ಬ್ಯಾಟ್ಸ್ಮೆನ್ ರಲ್ಲಿ ಯಾರು ಇದನ್ನು ಸ್ವೀಕರಿಸುತ್ತೀರಾ ಎಂದು ಕೊನೆದಾಗಿ ಬರೆದಿದ್ದಾರೆ.

LEAVE A REPLY

Please enter your comment!
Please enter your name here