ಮಗಳ ವಿಚಾರವಾಗಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ರಾಕಿ ಬಾಯ್

0
1204
yash and fans

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹೌದು. ಕೆಜಿಎಫ್ ಸಿನಿಮಾ ಬಂದ ನಂತರ ಯಶ್ ಹೊರ ದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಆದರೆ ಇತ್ತೀಚೆಗೆ ಯಶ್ ಪ್ರಸಿದ್ಧಿಯಾಗುವುದಕ್ಕಿಂತ ಹೆಚ್ಚು, ಅವರ ಮುದ್ದು ಮಗಳು ಆಯ್ರಾ ಹೆಚ್ಚು ಪ್ರಖ್ಯಾತಿ ಆಗುತ್ತಿದ್ದಾಳೆ. ಹೌದು. ಯಾವುದೇ ಕಾರ್ಯಕ್ರಮದಲ್ಲಾದರೂ, ಯಾವುದೇ ಪಾರ್ಟಿಗಳಲ್ಲಾದರೂ ಆರ್ಯಾ ಬಗೆಗಿನ ಮಾತುಕತೆ ನಡೆಯುತ್ತಲೇ ಇರುತ್ತದೆ. ಅಲ್ಲದೆ ಯಶ್ ಅಭಿಮಾನಿಗಳು ಪ್ರತಿದಿನ ಆರ್ಯಾ ನೋಡಲು ಯಶ್ ಮನೆ ಬಳಿ ಬರುತ್ತಿದ್ದಾರೆ. ಹೀಗಾಗಿ ಯಶ್ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ರಾಕಿ ಬಾಯ್

ಇಷ್ಟುದಿನ ಯಶ್ ಹಾಗು ರಾಧಿಕಾ ಪಂಡಿತ್ ಗೆ ವಿಚಾರವಾಗಿ ಹಾಗು ಸಿನಿಮಾ ವಿಚಾರವಾಗಿ ಅನೇಕ ಸುದ್ದಿಗಳು ಹೊರ ಬೀಳುತ್ತಿದ್ದವು. ಆದರೆ ಆರ್ಯಾ ಹುಟ್ಟಿದ ಮೇಲೆ ಯಶ್ ಹಾಗು ರಾಧಿಕಾಗಿಂತ ಅವರ ಮಗಳ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅಲ್ಲದೆ ಹೋದಲೆಲ್ಲಾ ಆರ್ಯಾ ಆರ್ಯಾ… ಎನ್ನುವ ಹೆಸರನ್ನು ಅಭಿಮಾನಿಗಳು ಕೂಗುತ್ತಲೇ ಇರುತ್ತಾರೆ. ಅಲ್ಲದೆ ಅನೇಕ ಉಡುಗೊರೆಗಳೊಂದಿಗೆ ಆರ್ಯಾಳನ್ನು ಭೇಟಿಯಾಗಲು ಪ್ರತಿದಿನ ಯಶ್ ಮನೆ ಬಳಿ ಹೋಗುತ್ತಲೇ ಇರುತ್ತಾರೆ. ಹಾಗಾಗಿ ಇದನ್ನೆಲ್ಲಾ ನೋಡಿದ ಯಶ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಾಧನೆ ಮಾಡಿದರೆ ಮಾತ್ರ ಅವರನ್ನು ಹೊಗಳಿ

ಇತ್ತೀಚೆಗೆ ಕರುನಾಡು ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್​ ಪಾಲ್ಗೊಂಡಿದ್ದರು. ಆಗ ವೇದಿಕೆಯ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಆಯ್ರಾ ಬಗ್ಗೆ ಕೇಳಿದ್ದಾರೆ. ಈ ವೇಳೆ ಪ್ರೇಕ್ಷಕರಿಂದ ಆಯ್ರಾ ಎನ್ನುವ ಘೊಷಣೆಗಳು ಮೊಳಗಿದವು. ಇದಕ್ಕೆ ಅಸಮಾಧಾನಗೊಂಡ ಯಶ್​, ನಾನು ಎಲ್ಲೇ ಹೋದರೂ ಆಯ್ರಾ ಬಗ್ಗೆ ಕೇಳುತ್ತಾರೆ. ನಮ್ಮ ಮನೆ ಬಳಿಯೂ ಅವಳನ್ನು ನೋಡಲು ಬರುತ್ತಾರೆ. ಆದರೆ, ಇದು ಸರಿಯಲ್ಲ. ಈ ತಪ್ಪನ್ನು ಎಂದಿಗೂ ಮಾಡಲು ಹೋಗಬೇಡಿ. ಅದು ಎಷ್ಟೇ ದೊಡ್ಡ ಸೆಲೆಬ್ರಿಟಿಯ ಮಗಳಾಗಲಿ. ಅವರು ಏನಾದರೂ ಸಾಧನೆ ಮಾಡಿದ ನಂತರವೇ ಅವರನ್ನು ಹೊಗಳಿ. ಅಲ್ಲಿವರೆಗೆ ಅವರು ಸಾಮಾನ್ಯರು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ತಮ್ಮ ಹೀರೊ ಮಗಳನ್ನು ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಜೊತೆಗೆ ಅವಳನ್ನು ಭೇಟಿ ಆಗಲು ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಹಾಗಾಗಿ ಯಶ್ ತಮ್ಮ ಅಭಿಮಾನಿಗಳಿಗೆ ಈ ರೀತಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here