ಇಲ್ಲ ಸಲ್ಲದ ನೆವ ಹುಡುಕಿ ಚಾಲಕನ ಮೇಲೆ ದರ್ಪವನ್ನು ತೋರಿಸಿರುವ ಪೊಲೀಸ್ ಅಧಿಕಾರಿಗಳು

0
686

ಟ್ರಾಫಿಕ್ ನ ನೂತನ ನಿಯಮ ಜಾರಿಯಾಗಿರುವುದು ನಿಮಗೆಲ್ಲ ಗೊತ್ತೇ ಇದ. ಇನ್ನು ಈ ನಿಯಮದಿಂದಾಗಿ ಸಾಕಷ್ಟು ಜನರು ತಮ್ಮ ನಕಾರಾತ್ಮಕವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಸಂಚಾರಿ ಪೊಲೀಸರು ಸಹ ಜನ ಸಾಮಾನ್ಯರ ಜೊತೆಗೆ ಸರಿಯಾಗಿ ನಡೆದುಕೊಂಡಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ನೀವು ವಿಡಿಯೋಗಳನ್ನು ವೀಕ್ಷಿಸಿರಬಹುದು. ಈಗ ಇಂತಹದೆ ಒಂದು ಘಟನೆ ನಡೆದಿದೆ. ಸಂಚಾರಿ ಪೊಲೀಸರು ನನಗೆ ತಪ್ಪು ಚಾಲನೆ ನೀಡಿರುವ ಸಲುವಾಗಿ ಒಬ್ಬ ಚಾಲಕ ತನ್ನ ಕುಟುಂಬದ ಸಮೇತ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾನೆ. ಮುಂದೆ ಓದಿ

 ಟ್ರಾಫಿಕ್ ನಿಯಮ ಉಲ್ಲಂಘಿಸುವ ಸಲುವಾಗಿ ರಶೀದಿಯನ್ನು ನೀಡಿದ್ದರು

ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದು ಒಂದು ತಿಂಗಳು ಕಳೆಯುತ್ತ ಬಂದಿದ್ದು, ಸಂಚಾರಿ ಪೋಲೀಸರ ದರ್ಪ ಮಾತ್ರ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಈ ಚಾಲಕ ರಸ್ತೆಯಲ್ಲಿ ಕೂತು ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ, ದೆಹಲಿಯ ದ್ವಾರಕಾ ಸೆಕ್ಟರ್ 1 ರಲ್ಲಿ ಚಾಲಕ ಟ್ರಾಫಿಕ್ ನಿಯಮ ಉಲ್ಲಂಘಿಸುವ ಸಲುವಾಗಿ ರಶೀದಿಯನ್ನು ನೀಡಿದ್ದರು, ದಂಡದ ರಶೀದಿ ತೆಗೆದುಕೊಳ್ಳದ ಚಾಲಕ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ ದೂರನ್ನು ನೀಡಿದ್ದರು. ಪೋಲೀಸರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎನ್ನುವ ಆರೋಪವನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ಚಾಲನ್ ನಲ್ಲಿಯೂ ಸಹ ತಪ್ಪು ಕಾರಣಕ್ಕಾಗಿ ರಶೀದಿಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಚಾಲಕ ದೂರನ್ನು ನೀಡಿದ್ದಾರೆ.

ನ್ಯಾಯ ಒದಗಿಸುವ ಸಲುವಾಗಿ ಧರಣಿಗೆ ಕುಳಿತುಕೊಂಡಿದ್ದರು

ಪೊಲೀಸರು ಚಾಲಕನ ವಾಹನದ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ಟೋಬರ್ 2 ರಿಂದ ಈ ಚಾಲಕರು ಮನೆಯಲ್ಲೇ ಇದ್ದರು. ಆದರೆ ಭಾನುವಾರ ದಿನದನು ಚಾಲಕ ತಮ್ಮ ಕುಟುಂಬಸ್ಥರ ಸಮೇತ ನಡು ಬೀದಿಯಲ್ಲಿ ಧರಣಿಗೆ ನ್ಯಾಯ ಒದಗಿಸುವ ಸಲುವಾಗಿ ಧರಣಿಗೆ ಕುಳಿತುಕೊಂಡಿದ್ದರು. ನ್ಯಾಯ ಬೇಕೇ ಬೇಕೆಂದು ಘೋಷಣೆ ಕೂಗಲು ಶುರು ಮಾಡಿದ್ದರು. ರಸ್ತೆಯ ಮದ್ಯೆ ತಮ್ಮ ಪತ್ನಿಯ ಜೊತೆಗೆ ಇಬ್ಬರು ಮಕ್ಕಳೊಂದಿಗೆ ಪ್ರತಿಭಟನೆ ಕೂತಿರುವದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಈ ವಿಷಯವನ್ನು ತಿಳಿದ ಪೊಲೀಸರು ಚಾಲಹನನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದರು.

ಬಲವಂತವಾಗಿ ಎಳೆದುಕೊಂಡು ಹೋಗಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ

ಆದರೆ ಚಾಲಕ ಪೋಲೀಸರ ಮಾರು ಕೇಳದಿದ್ದಾಗ ಅವರ ಕುಟುಂಬ ಸಮೇತ ಬಲವಂತಾಗಿ ಎಳೆದುಕೊಂಡು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದರು. ನಾನು ಕೇವಲ ಏಳು ಸೆಕೆಂಡ್ ಇರವಾಗ ಮಾತ್ರ ಸಿಗ್ನಲ್ ಜಂಪ್ ಮಾಡಿದ್ದೇನೆ.

ಇನ್ನು ಚಾಲಕ ಪೋಲೀಸರ ಮಾತು ಕೆಳದಿದ್ದಾಗ ಅವರ ಪತ್ನಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ದಂಡದ ವಿಷಯದ ಅಂಗವಾಗಿ ಪೊಲೀಸರು ಹಲ್ಲೆಯನ್ನು ಮಾಡುತ್ತಿದ್ದಾರೆ ಎಂದು ಪೋಲೀಸರ ವಿರುದ್ಧ ಮನೀಶ್ ಎನ್ನುವ ಚಾಲಕ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here