ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಡೆ ಅವರು ರಾಜ್ ವಿಷ್ಣು ಬಗ್ಗೆ ಮಾತನಾಡಿದ್ದಾರೆ

0
1323

ಧರ್ಮಸ್ಥಳ ಒಂದು ಶಕ್ತಿಯುತವಾದ ದೇವಾಲಯ ಇಲ್ಲಿ ಅನೇಕ ಭಕ್ತರು ಬಂದು ಶ್ರೀ ಮಂಜುನಾಥನ ದರ್ಶನ ಪಡೆದು ಪುನೀತರಾಗುತ್ತಾರೆ. ಸಿನಿರಂಗದ ಕಲಾವಿದರು ಸಹ ಧರ್ಮಸ್ಥಳ ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿದ್ದರು. ಕನ್ನಡ ಚಿತ್ರರಂಗದ ಮೇರು ನಟರಾದ ಡಾಕ್ಟರ್ ರಾಜ್ ಕುಮಾರ್ ಹಾಗು ವಿಷ್ಣುವರ್ಧನ್ ಅವರಿಗೆ ಈ ಕ್ಷೇತ್ರದ ಮೇಲೆ ಅಪಾರವಾದ ಅಭಿಮಾನ ಇದೆ ಎಂದು ವೀರೇಂದ್ರ ಹೆಗ್ಡೆ ಅವರು ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ರಾಜ್ ಕುಮಾರ್ ಅವರು ಧರ್ಮಸ್ಥಳಕ್ಕೆ ಆಗಮಿಸಿದಾಗ ಬಹಳ ಭಕ್ತಿ ಇಂದ ದೇವರನ್ನು ಆರಾಧಿಸುತ್ತಿದ್ದರು, ಅವರ ಒಂದು ಚಿತ್ರ ಕೂಡ ಇಲ್ಲೇ ಚಿತ್ರೀಕರಣ ಆಗಿತ್ತು ಎಂದು ವೀರೇಂದ್ರ ಹೆಗ್ಡೆ ಅವರು ಮಾತನಾಡಿದ್ದಾರೆ.

ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿ ಆಗಿ ಬಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಯಶ್, ಪುನೀತ್ ರಾಜ್ ಕುಮಾರ್, ರಾಘಣ್ಣ  ಕೂಡ ಹೆಗ್ಡೆ ಅವರ ಬಗ್ಗೆ ಮಾತನಾಡುವ ಮೂಲಕ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ವಿಷ್ಣುವರ್ಧನ್ ಅವರು ನನಗೆ ತುಂಬಾ ಗೌರವ ಕೊಡುತ್ತಿದ್ದರು, ವಿಷ್ಣು ಧರ್ಮಸ್ಥಳಕ್ಕೆ ಬಂದಾಗ ನಾನು ಅವರಿಗೆ ಕುರ್ಚಿಯ ಬಳಿ ಕುಳಿತುಕೊಳ್ಳಿ ಎಂದಾಗ ಇಲ್ಲ ಅಂತಾ ಹೇಳಿ ಕಾಲು ಹತ್ತಿರನೇ ಕೂಡುತ್ತಿದ್ದರು ಎಂದು ಹೆಗ್ಡೆ ಅವರು ತಿಳಿಸಿದ್ದಾರೆ.

raaj vishnu

ಹೀಗೆ ಮಾತನಾಡುತ್ತಾ ನನ್ನ ಹತ್ತಿರ ಹೆಚ್ಚಿನ ಸಮಯ ಕಳೆಯುತ್ತಿದ್ದರು, ನಿಮ್ಮಗೆ ಊಟಕ್ಕೆ ಟೈಮ್ ಆಯ್ತು ಹೋಗಿ ಎಂದಾಗ ಇಲ್ಲ ನೀವು ಮಾತನಾಡಿ ಗುರುಗಳೆ ನಾನು ಕೇಳುತ್ತಾ ಇಲ್ಲೇ ಇರುತ್ತೀನಿ ಅಂತಾ ಇಲ್ಲೇ ಇದ್ದು ಬಿಡುತ್ತಿದ್ದರು ಎಂದು ಹೆಗ್ಡೆ ಅವರು ಮಾತನಾಡಿದ್ದಾರೆ. ಸಿನಿಮಾ ಕಲಾವಿದರು ಇಲ್ಲಿ ಬರುತ್ತಾರೆ ಆದರೆ ಯಾರು ಸಹ ಗರ್ವದಿಂದ ನಡೆದುಕೊಳ್ಳೋದಿಲ್ಲ ಬಹಳ ಶಿಸ್ತಿನಿಂದ, ಭಕ್ತಿಯಿಂದ, ಸಮಾಧಾನದಿಂದ ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ ಎಂದು ಹೆಗ್ಡೆ ಅವರು ಹೇಳಿದ್ದಾರೆ.

virendra heggade

ಸಾಧಕರ ಸೀಟ್ ಅಲ್ಲಿ ಕೂತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಬಗ್ಗೆ ಯಶ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಇವರೆಲ್ಲರೂ ಧರ್ಮಸ್ಥಳದ ಪುಣ್ಯ ಕೆಲಸಗಳ ಬಗ್ಗೆ ಮಾತನಾಡಿ ಮೆಚ್ಚಿಕೊಂಡಿದ್ದಾರೆ. ಹೆಗ್ಡೆ ಅವರು ಕಾರ್ಯಕ್ರಮಕ್ಕೆ ಬರಬೇಕೆನ್ನುವುದು ಬಹಳ ಜನರ ಆಸೆ ಆಗಿತ್ತು, ಹೆಗ್ಡೆ ಅವರು ನಡೆದು ಬಂದ ದಾರಿಯ ಕುರಿತು ನಮ್ಮಗೆ ಈ ಕಾರ್ಯಕ್ರಮದ ಮುಖಾಂತರ ಗೊತ್ತಾಯಿತು.

LEAVE A REPLY

Please enter your comment!
Please enter your name here