ಮತ್ತೊಮ್ಮೆ ತೆರೆ ಕಾಣಲಿರುವ ವಿಷ್ಣುದಾದ ಅಭಿನಯದ ಥ್ರಿಲ್ಲರ್ ಸಿನಿಮಾ

0
728

ಇವರ ನಡಿಗೆಯೇ ಸಿಂಹದ ನಡೆ. ತಮ್ಮ ಕೈಯಲ್ಲಿ ಧರಿಸಿರುವ ಖಡ್ಗವನ್ನು ತಿರುಗಿಸುತ್ತಾ ನಡೆದರೆ ನೋಡೋಕೆ ಒಂದು ಚೆಂದ. ಹೌದು. ಸ್ಯಾಂಡಲ್ ವುಡ್ ನಲ್ಲಿ ಡಾ. ವಿಷ್ಣುವರ್ಧನ್ ಅಂದ್ರೆ ಅದೇನೋ ಒಂಥರಾ ಅಚ್ಚುಮೆಚ್ಚು. ಈ ಕಾಲಕ್ಕೂ ಎಲ್ಲರು ಅವರನ್ನು ನೆನೆಯುತ್ತಾರೆ. ವಿಷ್ಣುದಾದ ಅಂದ್ರೆ ಸಾಕು ಅಭಿಮಾನಗಳ ಮೈ ರೋಮಾಂಚವಾಗುತ್ತದೆ. ಇಂಥ ಕಲಾವಿದ ಎಲ್ಲರಿಂದ ಅಗಲಿದಾಗ ಇಡೀ ನಾಡಿಗೆ ಸೂತಕದ ಛಾಯೆ ಆವರಿಸಿತ್ತು. ಆದರೆ ಈಗಲೂ ಇವರ ಅಭಿಮಾನಿಗಳು ನೆನೆಯುತ್ತಲೇ ಇರುತ್ತಾರೆ. ಇನ್ನು ನಾಗರಹಾವು ಸಿನಿಮಾ ಮೂಲಕ, ನಾಯಕನಾಗಿ ಚಂದನವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ದಾದಾ, ಸಾಕಷ್ಟು ಸೂಪರ್ ಡೂಪರ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಅನೇಕ ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಿದೆ. ಅದರಲ್ಲಿ ಅವರ ನಿಷ್ಕರ್ಷ ಸಿನಿಮಾ ಕೂಡ ಒಂದು. ಈಗ ಅದೇ ಸಿನಿಮಾ ಮತ್ತೊಮ್ಮೆ ತೆರೆ ಕಾಣಲಿದೆಯಂತೆ.

ಮತ್ತೊಮ್ಮೆ ತೆರೆ ಕಾಣಲಿರುವ ನಿಷ್ಕರ್ಷ

ವಿಷ್ಣುದಾದ ಅಭಿನಯದ ಎಲ್ಲ ಸಿನಿಮಾಗಳು ಮರೆಯಲಾಗದಂತಹ ಚಿತ್ರಗಳು. ಈ ಕ್ಷಣಕ್ಕೂ ಅವರ ಎಲ್ಲ ಸಿನಿಮಾಗಳನ್ನು ಅಭಿಮಾನಿಗಳು ನೋಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವಂತೂ ಎಲ್ಲರ ಮನ ಗೆದ್ದಿವೆ. ಅದರಲ್ಲಿ ನಿಷ್ಕರ್ಷ ಸಿನಿಮಾ ಕೂಡ ಒಂದು. ಹೌದು. ವಿಷ್ಣು ಅಭಿನಯದ ನಿಷ್ಕರ್ಷ ಸಿನಿಮಾ ನಿಜಕ್ಕೂ ಒಂದು ಥ್ರಿಲರ್ ಸಿನಿಮಾ. ಈ ಸಿನಿಮಾ ಈಗ ಮತ್ತೆ ತೆರೆ ಕಾಣಲು ಸಜ್ಜಾಗುತ್ತಿದೆ. ಹೌದು. ಸೃಷ್ಠಿ ಫಿಲಂಸ್ ನಿರ್ಮಾಣದಡಿ ಈ ಸಿನಿಮಾ ತೆರೆಕಂಡಿತ್ತು. ಇನ್ನು ಒಂದೇ ಲೊಕೇಶನ್​ನಲ್ಲಿ ಚಿತ್ರಿತಗೊಂಡ ಈ ಕನ್ನಡದ ಸಿನಿಮಾ ಇಡೀ ದೇಶದಲ್ಲಿ ಬಾರಿ ಸದ್ದು ಮಾಡಿತ್ತು. ಇನ್ನು ಈ ಚಿತ್ರಕ್ಕಾಗಿ 3 ರಾಜ್ಯ ಪ್ರಶಸ್ತಿಗಳನ್ನು ಬಂದಿವೆ. ಇದೀಗ ಈ ಸಿನಿಮಾ ಮತ್ತೊಮ್ಮೆ ಎಲ್ಲರನ್ನು ರಂಜಿಸಲು ಬರುತ್ತಿದೆ.

3 ರಾಜ್ಯ ಪ್ರಶಸ್ತಿ ಪಡೆದಿರುವ ನಿಷ್ಕರ್ಷ ಸಿನಿಮಾ

ಅಂದಿನ ಕಾಲದಲ್ಲಿ ಇದೊಂದು ಸೂಪರ್ ಹಿಟ್ ಸಿನಿಮಾ. ಹಾಗಾಗಿ ಈ ಸಿನಿಮಾ 3 ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಹೌದು. ಸೆಪ್ಟೆಂಬರ್ 20 ರಂದು ನಿಷ್ಕರ್ಷ ಸಿನಿಮಾ ರಾಜ್ಯದಾದ್ಯಂತ ಮತ್ತೊಮ್ಮೆ ಬಿಡುಗಡೆ ಮಾಡುವಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ನಿಷ್ಕರ್ಷ ಸಿನಿಮಾದಲ್ಲಿ ಅನಂತ್​ನಾಗ್​, ಬಿ.ಸಿ ಪಾಟೀಲ್​, ರಮೇಶ್​ ಭಟ್​, ಅಂಜನಾ, ಅವಿನಾಶ್​, ಪ್ರಕಾಶ್​ ರೈ, ಸುಮನ್​ ನಗರಕರ್​ ಅಭಿನಯಿಸಿದ್ದಾರೆ. ಜೊತೆಗೆ ಚಿತ್ರಕ್ಕೆ ಗುಣಸಿಂಗ್​ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಿನಲ್ಲಿ ವಿಷ್ಣು ಅಭಿಮಾನಿಗಳಿಗೆ ಇದೊಂದು ಅತಿ ಹೆಚ್ಚಿನ ಸಂತಸದ ಸುದ್ದಿಯಾಗಿದೆ.

ಒಟ್ಟಿನಲ್ಲಿ ನಮ್ಮ ವಿಷ್ಣುದಾದ ಅಭಿನಯದ ನಿಷ್ಕರ್ಷ ಸಿನಿಮಾ ಮತ್ತೊಮ್ಮೆ ತೆರೆ ಕಾಣಲು ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದೆ. ವಿಷ್ಣು ಅಭಿಮಾನಿಗಳು ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಯಾಕಂದ್ರೆ ತಮ್ಮ ನೆಚ್ಚಿನ ನಾಯಕನ ಸಿನಿಮಾ ಮರು ಬಿಡುಗಡೆಯಾಗುತ್ತಿರೋದ್ರಿಂದ, ಆ ದಿನ ಅವರಿಗೆ ಮರೆಯಲಾಗದ ದಿನವಾಗಿದೆ.

LEAVE A REPLY

Please enter your comment!
Please enter your name here