ವಿಷ್ಣುದಾದ ಅಭಿನಯಿಸಬೇಕಿದ್ದ ಸಿನಿಮಾ ದರ್ಶನ್ ಪಾಲಾಗಿದ್ದಾದರೂ ಹೇಗೆ?

0
567

ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್ ಸರ್ದಾರನಂತೆ ಮೆರೆಯುತ್ತಿದ್ದಾರೆ. ಹೌದು. ಸಾಲು ಸಾಲು ಸಿನಿಮಾಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊಂದಿರುವ ದರ್ಶನ್ ಸದ್ಯಕ್ಕೆ ಒಡೆಯ, ರಾಬರ್ಟ್ ಹಾಗು ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು. ಮೊನ್ನೆಯಷ್ಟೇ ಗಂಡುಗಲಿ ಮದಕರಿ ನಾಯಕ ಸಿನಿಮಾದ ಮುಹೂರ್ತ ನಡೆದಿದ್ದು, ಚಿತ್ರದುರ್ಗದಲ್ಲಿ ಅದ್ದೂರಿ ಚಾಲನೆ ಚಿತ್ರಕ್ಕೆ ನೀಡಲಾಗಿದೆ. ಇನ್ನು ದೊಡ್ಡ ಮೊತ್ತದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಚಿತ್ರದ ಕೆಲವೊಂದು ಸತ್ಯಗಳನ್ನು ಈಗ ನಿರ್ದೇಶಕರು ತಿಳಿಸಿದ್ದಾರೆ. ಹೌದು. ಮೊದಲು ಈ ಚಿತ್ರ ಮಾಡಬೇಕಿದ್ದು ಸಾಹಸಸಿಂಹ ವಿಷ್ಣುವರ್ಧನ್ ಅಂತೆ. ವಿಷ್ಣುದಾದ ಅಭಿನಯಿಸಿಬೇಕಿದ್ದ ಸಿನಿಮಾ ಆಗ ತೆರೆ ಕಾಣುವುದು ಕಷ್ಟವಾಗಿತ್ತು. ಹಾಗಾಗಿ ಆ ಸಿನಿಮಾ ಈಗ ತೆರೆ ಮೇಲೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಸಾಹಸಸಿಂಹ ಅಭಿನಯಿಸಬೇಕಿದ್ದ ಸಿನಿಮಾದಲ್ಲಿ ದರ್ಶನ್

ಅದ್ದೂರಿಯಾಗಿ ಸೆಟ್ಟೇರುತ್ತಿರುವ ಗಂಡುಗಲಿ ಮದಕರಿ ಸಿನಿಮಾ ಬಗ್ಗೆ ಚಿತ್ರತಂಡ ಸಿಕ್ಕಾಪಟ್ಟೆ ಕನಸು ಹೊತ್ತಿದೆ. ಯಾಕಂದ್ರೆ ಇದು ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಅವರ ಕನಸಿನ ಚಿತ್ರವಾಗಿದೆ. ಆದ್ರೆ ಈ ಚಿತ್ರದಲ್ಲಿ ಮೊದಲು ಸಾಹಸಸಿಂಹ ವಿಷ್ಣುವರ್ಧನ್ ನಟಿಸಬೇಕಿತ್ತಂತೆ. ಇನ್ನು ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಅವರೇ ಸ್ವತಃ ತಿಳಿಸಿದ್ದಾರೆ. ಹೌದು. ಎಲ್ಲಾ ಅಂದುಕೊಂಡಂತ್ತೆ ಆಗಿದ್ದರೆ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಅನೇಕ ವರ್ಷಗಳ ಹಿಂದೆಯೆ ಸೆಟ್ಟೇರಬೇಕಿತ್ತು. ಆಗಲೆ ಸ್ಕ್ರಿಪ್ಟ್ ಕೂಡ ಸಿದ್ಧ ಮಾಡಿ ಇಟ್ಟುಕೊಂಡಿದ್ದೆನು. ಆದ್ರೆ ಆ ಸಮಯಕ್ಕೆ ಚಿತ್ರ ಸೆಟ್ಟೇರಲಿಲ್ಲ ಎಂದು ಅವರು ಹೇಳಿದ್ದಾರೆ.

ಆ ಸಮಯದಲ್ಲಿ ಬಜೆಟ್ ಸಮಸ್ಯೆ ಎದುರಾಗಿತ್ತು

ಇನ್ನು ಸಿಕ್ಕಾಪಟ್ಟೆ ಕನಸನ್ನು ಹೊತ್ತಿದ್ದ ಸಿನಿಮಾ ಆ ಕಾಲದಲ್ಲಿ ರಿಲೀಸ್ ಆಗದೆ ಇರುವುದಕ್ಕೆ ಮುಖ್ಯ ಕಾರಣವೆಂದರೆ ಅದು ಬಜೆಟ್. ಹೌದು. ದೊಡ್ಡ ಮಟ್ಟದ ಸಿನಿಮಾ ನಿಂತು ಹೋಗಲು ಕಾರಣ ಬಜೆಟ್ ಸಮಸ್ಯೆ. ಬಹು ಕೋಟಿ ವೆಚ್ಚ ಮಾಡುವುದು ಅಂದು ಬಾರಿ ದೊಡ್ಡ ಸಮಸ್ಯೆಯಾಗಿತ್ತು. ಅಲ್ಲದೆ ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕಾಗಿ ರಾಜೇಂದ್ರ ಸಿಂಗ್ ಬಾಬು ಸುಮಾರು ಒಂದೂವರೆ ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿದ್ದರಂತೆ. ಅಲ್ಲದೆ ಅಂದು ಪತ್ರಿಕೆಗಳಲ್ಲಿ ಜಾಹಿರಾತು ಕೂಡ ಪ್ರಸಾರವಾಗಿತ್ತು. ಇನ್ನು ಚಿತ್ರದ ಬಗ್ಗೆ ಎಲ್ಲಾ ಪ್ಲಾನ್ ಮಾಡಿ ನೋಡಿದ ನಂತರ ಬಜೆಟ್ ದೊಡ್ಡ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಚಿತ್ರಕ್ಕೆ ಸುಮಾರು 27 ರಿಂದ 30 ಕೋಟಿ ಆಗಿತ್ತಂತೆ. ಆ ಕಾಲಕ್ಕೆ ಅದು ಅತೀ ದೊಡ್ಡ ಬಜೆಟ್ ಆಗಿದ್ದರಿಂದ ಸಿನಿಮಾ ಅಲ್ಲಿಗೆ ನಿಂತು ಹೋಗಿತ್ತು.

ಕನಸನ್ನು ಈಡೇರಿಸಿಕೊಳ್ಳುತ್ತಿರುವ ನಿರ್ದೇಶಕ

ಸಿನಿಮಾಗೆ ದೊಡ್ಡ ಬಜೆಟ್ ಆಗುತ್ತದೆ ಎಂದು ಅಲ್ಲಿಗೆ ನಿಂತಿದ್ದ ಸಿನಿಮಾ ಈಗ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಹೌದು. ರಾಜೇಂದ್ರ ಸಿಂಗ್ ಬಾಬು ಅವರು ಈಗ ಸಿನಿಮಾ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದು, ಸಿನಿಮಾ ತೆರೆ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ದರ್ಶನ್ ನಾಯಕನಾಗಿ ನಟಿಸಿದರೆ, ಚಿತ್ರಕ್ಕೆ ರಾಕಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಆದ್ರೆ ಇನ್ನು ಚಿತ್ರಕ್ಕೆ ನಾಯಕಿ ಬಗ್ಗೆ ನಿಖರವಾದ ಮಾಹಿತಿ ತಿಳಿಸಿಲ್ಲ. ಮೂಲಗಳ ಪ್ರಕಾರ ದಕ್ಷಿಣ ಖ್ಯಾತಿಯ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದರೂ, ಇನ್ನು ಅದು ಪಕ್ಕಾ ಆಗಿಲ್ಲ. ಆದ್ರೆ ಸಿನಿಮಾದ ಚಿತ್ರೀಕರಣಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಒಟ್ಟಿನಲ್ಲಿ ಅಂದು ಸಾಹಸಿಂಹನ ಅಭಿನಯದಲ್ಲಿ ತೆರೆ ಕಾಣಬೇಕಿದ್ದ ಸಿನಿಮಾ, ಬಜೆಟ್ ವಿಷಯವಾಗಿ ಅರ್ಧಕ್ಕೆ ನಿಂತಿತ್ತು. ಆದ್ರೆ ಈಗ ಅದೇ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ತೆರೆ ಮೇಲೆ ಮೂಡಿ ಬರುತ್ತಿದೆ. ಜೊತೆಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here