ಅತ್ಯಾಚಾರಿಗಳ ಎನ್ಕೌಂಟರ್ ವಿಚಾರಕ್ಕೆ ಉಪ್ಪಿ ಟ್ವೀಟ್. ಕಿಡಿಕಾರುತ್ತಿರುವ ನೆಟ್ಟಿಗರು

0
609
uppi and priyanka

ತೆಲಂಗಾಣದಲ್ಲಿ ನಡೆದಿದ್ದ ಪ್ರಿಯಾಂಕಾ ರೆಡ್ಡಿಯ ಅತ್ಯಾಚಾರ ಹಾಗು ಹತ್ಯೆ ಖಂಡಿಸಿ ಇಷ್ಟು ದಿನ ಅನೇಕ ಹೋರಾಟಗಳು ನಡೆದವು. ಆದರೆ ಇಷ್ಟೆಲ್ಲಾ ನಡೆದರೂ, ನ್ಯಾಯಾಲಯದಿಂದ ಮಾತ್ರ ಯಾವುದೇ ರೀತಿಯ ಉತ್ತರ ಬಂದಿರಲಿಲ್ಲ. ಆದರೆ ಈಗ ಅವರ ಪಾಲಿನ ನರಕದ ಬಾಗಿಲು ತೆರೆದಿದೆ. ಹೌದು. ಸೈದರಾಬಾದ್ ನ ಪೊಲೀಸ್ ಆಯುಕ್ತರಾದ ವಿಶ್ವನಾಥ್ ಸಜ್ಜನರ್ ಅವರು ಪಾಪಿಗಳ ಮೇಲೆ ಎನ್ಕೌಂಟರ್ ಮಾಡುವುದರ ಮೂಲಕ ಅವರನ್ನು ನರಕ ಕೂಪಕ್ಕೆ ತಳ್ಳಿದ್ದಾರೆ. ಹೌದು. ಪ್ರಿಯಾಂಕಾಳನ್ನು ಹತ್ಯೆ ಮಾಡಿದ ಸ್ಥಳದಲ್ಲೇ, ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿದೆ. ಇನ್ನು ಈ ವಿಷಯ ತಿಳಿದ ಕೂಡಲೇ ಇಡೀ ದೇಶವೇ ಸಂಭ್ರವನ್ನಾಚರಿಸಿದೆ. ಆದರೆ ಈ ಮಧ್ಯೆ ನಟ ಉಪೇಂದ್ರ ಅವರು ಮಾಡಿರುವ ಟ್ವೀಟ್ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹತ್ಯೆ ಬಗ್ಗೆ ಟ್ವೀಟ್ ಮಾಡಿದ ನಟ ಉಪೇಂದ್ರ

ನಟ ಉಪೇಂದ್ರ ಸಿನಿಮಾ ಹಾಗು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೆ ಅನೇಕರು ಉಪೇಂದ್ರ ಅವರ ಆಲೋಚನೆಗಳನ್ನು ಇಷ್ಟಪಡುತ್ತಾರೆ. ಆದರೆ ಈಗ ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೊತೆಗೆ ನೆಟ್ಟಿಗರು ಅವರ ಟ್ವೀಟ್ ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು. ಪ್ರಿಯಾಂಕಾ ರೆಡ್ಡಿಯ ಹತ್ಯೆಯಾದ ಬಳಿಕ, ಎಲ್ಲರು ತಮಗನಿಸಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ರೆ ಉಪೇಂದ್ರ ಮಾತ್ರ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ನಾಲ್ಕು ಹುಡುಗರೆ ರೇಪ್ ಮಾಡಿ ಸುಟ್ಟು ಹಾಕಿದ್ದಾರೋ ಅಥವಾ ಇದರ ಹಿಂದೆ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ಎಂದು ಕೇಳಿದ್ದಾರೆ. ಇನ್ನು ಈ ರೀತಿಯ ಎನ್ ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್ ನಲ್ಲಿ ಯಾಕಾಗುವುದಿಲ್ಲ? ಎಂಬ ಪ್ರಶ್ನೆ ಕೇಳಿದ್ದಾರೆ.

ಆಕ್ರೋಶ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

ಉಪೇಂದ್ರ ಅವರ ಈ ಟ್ವೀಟ್ ನೋಡುತ್ತಿದ್ದಂತೆ ಅವರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಬುದ್ಧಿವಂತಿಕೆ ಒಳ್ಳೆಯದು ಆದರೆ ಅತೀ ಬಿದ್ದಿವಂತಿಕೆ ಒಳ್ಳೆಯದಲ್ಲ ಎಂದು ಹೇಳುತ್ತಿದ್ದಾರೆ. ಹೌದು. ಅತೀ ಬುದ್ದಿವಂತಿಕೆಯಿಂದ ಉಪೇಂದ್ರ ಅವರು ,ಮಾತನಾಡುವುದು ಎಲ್ಲದಕ್ಕೂ ಸರಿ ಹೊಂದುವುದಿಲ್ಲ. ನೀವು ಬುದ್ದಿವಂತರಿರಬಹುದು, ಆದರೆ ನಿಮ್ಮ ಬುದ್ದಿವಂತಿಕೆಯನ್ನು ಇಂಥ ವಿಚಾರಗಳಲ್ಲಿ ಈ ರೀತಿಯ ಪ್ರಶ್ನೆ ಮೂಲಕ ತೋರಿಸಬೇಡಿ ಎಂದು ಹೇಳಿದ್ದಾರೆ. ಆದ್ರೆ ಇನ್ನು ಕೆಲವರು ಉಪೇಂದ್ರ ಅವರ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು. ಪ್ರಭಾವಿ ಶಾಲಿಗಳಾಗಿದ್ದರೆ ಈ ರೀತಿಯ ಎನ್ ಕೌಂಟರ್ ನಡೆಯುತ್ತಿತ್ತಾ, ಸಾಮಾನ್ಯರು ಎನ್ನುವ ಕಾರಣಕ್ಕೆ ತಕ್ಷಣ ಎನ್ ಕೌಂಟರ್ ಮಾಡಿ ಬಿಸಾಡಿದ್ದಾರೆ” ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ.

ನೆಟ್ಟಿಗರ ಆಕ್ರೋಶಕ್ಕೆ ಬ್ರೇಕ್ ಹಾಕಿದ ಉಪ್ಪಿ

ಉಪೇಂದ್ರ ಮರು ಟ್ವೀಟ್ ಮಾಡುವ ಮೂಲಕ ತಮ್ಮ ಮೊದಲ ಟ್ವೀಟ್ ಗೆ ಸ್ಪಷ್ಟನೆ ನೀಡಿದ್ದಾರೆ. ಹೌದು. ಮತ್ತೆ ಟ್ವೀಟ್ ಮಾಡಿರುವ ಉಪೇಂದ್ರ, ಒಂದು ಕಾಲದಲ್ಲಿ ಇದೇ ರೀತಿ ಎನ್ಕೌಂಟರ್ ಮಾಡಿ ರೌಡಿಸಂಗೆ ಕಡಿವಾಣ ಹಾಕಿದ ಹಾಗೆ, ನಿಷ್ಠಾವಂತ ಪೋಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಎನ್ಕೌಂಟರ್ ಮೂಲಕ ಈ ಅತ್ಯಾಚಾರದ ಪಿಡುಗನ್ನು ನಿರ್ಮೂಲ ಮಾಡಬಹುದು. ಆದರೆ ಇದನ್ನು ಹಣವಂತರು, ಪ್ರಭಾವಿಗಳು ದುರುಪಯೋಗ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇಷ್ಟುದಿನ ಉಪ್ಪಿಯ ಬುದ್ದಿವಂತಿಕೆಯನ್ನು ಮೆಚ್ಚಿಕೊಳ್ಳುತ್ತಿದ್ದ ಜನರು, ಈಗ ಅವರು ಮಾಡಿದ ಒಂದು ಟ್ವೀಟ್ ನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಉಪ್ಪಿ ತಮ್ಮ ಟ್ವೀಟ್ ಗೆ ಸ್ಪಷ್ಟನೆ ನೀಡುವುದರ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ತೆರೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here