ಇನ್ಮುಂದೆ ಬೋಲ್ಡ್ ಪಾತ್ರಗಳಲ್ಲಿ ನಟಿಸುವುದಿಲ್ಲವಂತೆ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್

0
1267

ಆರ್ ಚಂದ್ರು ಅವರು ಐ ಲವ್ ಯು ಚಿತ್ರಕ್ಕೆ ಆಕ್ಶನ್ ಕಟ್ ಹೇಳಿದ್ದಾರೆ. ಬಹಳ ದಿನಗಳ ನಂತರ ಉಪೇಂದ್ರ ಅವರ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಅಭಿಮಾನಿಗಳು ಕಾತುರದಿಂದ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಉಪೇಂದ್ರ ಗೆ ಜೊಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐ ಲವ್ ಯು ಚಿತ್ರದ, ಮಾತನಾಡಿ ಮಾಯಾವಾದೆ ಎನ್ನುವ ಒಂದು ಹಾಡಿನಲ್ಲಿ ಉಪೇಂದ್ರ ಹಾಗೂ ರಾಚಿತಾ ರಾಮ್ ತುಂಬಾ ಹಾಟ್ ಆಗಿ ಪರದೆಯನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರು ಸಿಟ್ಟಾಗಲು ಈ ಚಿತ್ರದ ಹಾಡು ಕಾರಣವಾಗಿದೆ. ಹಾಡಿನಲ್ಲಿ ಬರುವ ಹಸಿ ಬಿಸಿ ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ. ರಚಿತಾ ರಾಮ್ ಅವರು ಅನಾವಶ್ಯಕವಾಗಿ ಉಪೇಂದ್ರ ಅವರ ಹೆಸರು ಪದೇ ಪದೇ ಹೊರಗೆ ತರುತ್ತಿದ್ದಾರೆ ಎಂದು ಹೇಳಿದ್ದರು.

ಸಿನಿಮಾ ಬಗ್ಗೆ ಯಾವ ವಿಚಾರಗಳು ಹಂಚಿಕೊಂಡಿಲ್ಲ

ಉಪೇಂದ್ರ ಅವರಿಗೆ ನಾನು ಸಹ ಈ ಸಾಂಗ್ ಕುರಿತು ಕೇಳಿದ್ದೆ, ಅದು ಸಿನಿಮಾದ ಒಂದು ಭಾಗ ಎಂದು ಹೇಳಿದ್ದರು. ಆದರೆ ರಚಿತಾ ರಾಮ್ ಉಪೇಂದ್ರ ಅವರು ಈ ಹಾಡನ್ನು ನಿರ್ದೇಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆರ್ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಏಕೆ ಹೇಳುತ್ತಿಲ್ಲ ಎಂದು ಪ್ರಿಯಾಂಕ ಉಪೇಂದ್ರ ಅವರು ಪ್ರಶ್ನಿಸಿದ್ದಾರೆ. ಉಪೇಂದ್ರ ಪ್ರಸಿದ್ದ ನಟ ಹಾಗೂ ನಿರ್ದೇಶಕ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು. ಸಂದರ್ಶನದಲ್ಲಿ ಬರೀ ಹಾಡಿನ ಚಿತ್ರೀಕರಣ ಹೇಗೆ? ನಡೆಯಿತು ಎನ್ನುವುದರ ಕುರಿತು ಹೇಳಿದ್ದಾರೆ ಹೊರತು, ಸಿನಿಮಾ ಬಗ್ಗೆ ಯಾವ ವಿಚಾರಗಳು ಹಂಚಿಕೊಂಡಿಲ್ಲ. ಹಾಡಿನಲ್ಲಿ ನಟಿಸುವುದಕ್ಕೆ ಇಷ್ಟವಿಲ್ಲದಿದ್ದರೆ, ಖಡಾ ಕಂಡಿತವಾಗಿ ನಾನು ನಟಿಸುವುದಿಲ್ಲ ಅಂತಾ ಹೇಳಬೇಕಾಗಿತ್ತು. ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು, ಈಗ ಏಕಾಏಕಿಯಾಗಿ ಉಪೇಂದ್ರ ಅವರನ್ನು ದೋಷಿಸುವುದು ಸರಿ ಅಲ್ಲ.

ಆ ಒಂದು ದೃಶ್ಯ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ

ಪ್ರಿಯಾಂಕ ಉಪೇಂದ್ರ ಅವರ ಹೇಳಿಕೆಗೆ ಈಗ ರಚಿತಾ ರಾಮ್ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಎಲ್ಲಿಯೂ ಆ ಹಾಡು ಉಪ್ಪಿ ಸಾರ್ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿರಲಿಲ್ಲ. ಆ ಪಾತ್ರ ಮಾಡಬಾರದಾಗಿತ್ತು ಅಂತಾನು ನಾನು ಹೇಳಿರಲಿಲ್ಲ. ಈ ರೀತಿಯ ಯಾವುದೇ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ. ನಾನು ಹೇಳಿದ್ದು ಆ ಒಂದು ದೃಶ್ಯ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಎಂದು. ನನಗೆ ಕಂಫರ್ಟ್ ಉಪ್ಪಿ ಸಾರ್ ಅವರ ಕಡೆಯಿಂದ ಚೆನ್ನಾಗಿದ್ದ ಕಾರಣದಿಂದಾಗಿ, ಸುಲಭವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದೇನೆ ಅಷ್ಟೆ. ಇನ್ಮುಂದೆ ನಾನು ಬೋಲ್ಡ್ ಪಾತ್ರವನ್ನು ಮಾಡೋದಿಲ್ಲ, ನಾನು ಇಲ್ಲಿ ಹೇಳಲು ಹೊರಟಿದ್ದು ಐ ಲವ್ ಯು ಚಿತ್ರದ ಬಗ್ಗೆ ಅಲ್ಲಾ. ನನ್ನ ಅಭಿಮಾನಿಗಳಿಗೆ ಇಂತಹ ಪಾತ್ರ ಇಷ್ಟವಾಗುವುದಿಲ್ಲ. ಆದ್ದರಿಂದ ಬೋಲ್ಡ್ ಆಗಿ ನಾನು ಕಾಣಿಸಿಕೊಳ್ಳುವುದಿಲ್ಲ ಅಷ್ಟೆ ಹೊರತು ಮತ್ತೇನಿಲ್ಲ ಎಂದು ರಚಿತಾ ಅವರು ಹೇಳಿದ್ದಾರೆ.

ರಚಿತಾ ರಾಮ್ ಹೇಳಿಕೆ ನೀಡುವುದರ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಇದೇ ಶುಕ್ರವಾರ ಐ ಲವ್ ಯು ಚಿತ್ರ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here