ವಿಂಗ್ ಕಮ್ಯಾಂಡರ್ ಅಭಿನಂದನ್ ಅವರ ಅತ್ಯದ್ಭುತ ಸಾಹಸಕ್ಕೆ ವಿಶೇಷವಾದ ಸನ್ಮಾನ

0
525

ವಿಂಗ್ ಕಮ್ಯಾಂಡರ್ ಅಭಿನಂದನ್ ಅವರ ಹೆಸರು ಭಾರತೀಯರ ಮನದಲ್ಲಿ ಸದಾಕಾಲ ನೆಲೆಸಿರುತ್ತದೆ. ಪುಲ್ವಾಮ ಪ್ರದೇಶದಲ್ಲಿ ನಡೆದ ದಾಳಿಯಿಂದ ಅದೆಷ್ಟೊ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇಡೀ ಭಾರತ ದೇಶವೆ ವೀರ ಸ್ವರ್ಗ ಸೇರಿದ ಯೋಧರನ್ನು ನೆನೆಯುತ್ತ ಕಂಬನಿಯನ್ನು ಸುರಿಸಿದ್ದರು. ಪಾಕಿಸ್ತಾನ ದೇಶಕ್ಕೆ ತಕ್ಕ ಶಾಸ್ತಿ ಮಾಡಬೇಕೆಂದು ಕೇಂದ್ರ ಸರ್ಕಾರ ಪಣ ತೊಟ್ಟಿದ್ದರು. ಬಲಿಯಾದ ಯೋಧರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಶತ್ರು ದೇಶದ ಉಗ್ರಗ್ರಾಮಿಗಳನ್ನು ನಿರ್ನಾಮ ಮಾಡಬೇಕೆಂದು ಹೊಂಚು ಹಾಕಿದ್ದರು. ಆದ್ದರಿಂದ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ವಾಯು ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕ್ ದೇಶವನ್ನು ನಾಶ ಮಾಡಿದ್ದರು.

ಅಭಿನಂದನ್ ಗೆ ಆಗಸ್ಟ್ 15 ಮತ್ತಷ್ಟು ವಿಶೇಷವಾಗಲಿದೆ

ಇದೇ ಸಮಯದಲ್ಲಿ ಅಭಿನಂದನ್ ಅವರು ಪಾಕಿಸ್ತಾನ ದೇಶದ ಗಡಿಯನ್ನು ದಾಟಿ ಶತ್ರು ದೇಶದ ಎಫ್ 16 ವಿಮಾನವನ್ನು ನಾಶ ಮಾಡಿದ್ದರು. ನಂತರ ಪ್ಯಾರಾಚೂಟ್ ಸಹಾಯದಿಂದ ಪಾಕಿಸ್ತಾನ ದೇಶದಲ್ಲಿ ಭೂ ಸ್ಪರ್ಶ ಮಾಡಿದ್ದರು. ಶತ್ರು ದೇಶದ ಸೇನೆ ಇವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಯಾವುದಕ್ಕು ಎದೆ ಗುಂದದೆ ಅಭಿನಂದನ್ ಧೈರ್ಯವಾಗಿಯೆ ಇದ್ದರು. ಪಾಕ್ ಕೆಲವು ಪ್ರಶ್ನೆಗಳನ್ನು ಇವರಿಗೆ ಕೇಳಿದ್ದರು. ಯಾವುದಕ್ಕು ವಿಂಗ್ ಕಮ್ಯಾಂಡರ್ ಉತ್ತರಿಸಿರಲಿಲ್ಲ. ಪಾಕ್ ದೇಶದವರೆ ಇವರನ್ನು ಒಂದು ಕೊಠಡಿಯಲ್ಲಿ ಇರುವಂತಹ ವ್ಯವಸ್ಥೆ ಮಾಡಿ. ಚಾಯ್ ಅನ್ನು ನೀಡಿ ಸತ್ಕಾರವನ್ನು ಮಾಡಿದ್ದರು. 60 ಗಂಟೆಗಳು ಕಳೆದ ಮೇಲೆ ಮಾರ್ಚ್ 1 ರಂದು ಭಾರತಕ್ಕೆ ಮರಳಿದ್ದರು. ಯುದ್ಧದ ಸಮಯದಲ್ಲಿ ಅಭಿನಂದನ್ ಅವರು ಮಾಡಿದ ಸಾಧನೆಯನ್ನು ಮೆಚ್ಚಿ ಸರ್ಕಾರ ಸ್ವತಂತ್ರ ದಿನಾಚರಣೆಯಂದು ಸರ್ಕಾರ ವೀರ ಚಕ್ರ ಪ್ರಶಸ್ತಿಯನ್ನು ನೀಡಲಿದೆ. ನಾಳೆ ಅಭಿನಂದನ್ ಅವರಿಗೆ ಸರ್ಕಾರ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ದೇಶಕ್ಕಾಗಿ ಹೋರಾಡಿದ ಅಭಿನಂದನ್ ಗೆ ವೀರ ಚಕ್ರ ಪ್ರಶಸ್ತಿ

ಯುದ್ಧದ ಸನ್ನಿವೇಶದಲ್ಲಿ ಯಾರು ಊಹಿಸಲಾಗರದಂತಹ ಸಾಹಸಮಯವಾದ ಕರ್ತವ್ಯಕ್ಕೆ ಸರ್ಕಾರ ಮೂರು ಪ್ರಶಸ್ತಿಗಳು ನೀಡುತ್ತ ಬಂದಿದ್ದಾರೆ. ಇವುಗಳಲ್ಲಿ ಪರಮವೀರ ಚಕ್ರ, ವೀರ ಚಕ್ರ, ಮಹಾವೀರ ಚಕ್ರ ಪ್ರಶಸ್ತಿಗಳಲ್ಲಿ ಯಾವುದಾದರು ಒಂದನ್ನು ನೀಡಿ ಯೋಧರಿಗೆ ಸನ್ಮಾನಿಸಲಾಗುತ್ತದೆ. ಬಾಲ್ ಕೋಟ್ ದಾಳಿಯಲ್ಲಿ ವಿಮಾನವನ್ನು ಹೊಡೆದಿರುವ ಕಾರಣದಿಂದಾಗಿ ಅಭಿನಂದನ್ ಗೆ ವೀರಚಕ್ರ ಪ್ರಶಸ್ತಿ ಸರ್ಕಾರ ಕೊಟ್ಟು ಸನ್ಮಾನಿಸಲಿದ್ದಾರೆ.

ಭಾರತ ಮಾತೆಯ ಹೆಮ್ಮೆಯ ಪುತ್ರ ಅಭಿನಂದನ್

ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ದೇಶದ ಜನತೆ ಅಭಿನಂದನ್ ಅವರನ್ನು ಹಾಡಿ ಹೊಗಳಿದ್ದರು. ಅದ್ದೂರಿ ಸ್ವಾಗತದ ಮೂಲಕ ವಿಂಗ್ ಕಮ್ಯಾಂಡರ್ ಅನ್ನು ಬರಮಾಡಿಕೊಂಡಿದ್ದರು. ನಿಜಕ್ಕೂ ಇವರ ಸಾಹಸವನ್ನು ಮೆಚ್ಚಿಕೊಳ್ಳಬೇಕಾಗಿದೆ. ಶತ್ರು ದೇಶಕ್ಕೆ ಪ್ರವೇಶಿಸಿ, ಅಲ್ಲಿಯೆ ಕೆಲವು ಗಂಟೆಗಳ ಕಾಲ ಇದ್ದು, ಮತ್ತೆ ದೇಶಕ್ಕೆ ಮರಳಿದ ಏಕೈಕ ವ್ಯಕ್ತಿ ಅಭಿನಂದನ್.

ಇನ್ನು ಇವರ ಮೀಸೆ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟು ಹಾಕಿತ್ತು ಇವರು ಬಿಟ್ಟಿದ್ದ ಮೀಸೆ. ದೇಶದ ನಾಗರಿಕರು ಸಹ ಅಭಿನಂದನ್ ಅವರ ಶೈಲಿಯಲ್ಲಿಯೆ ಮೀಸೆಯನ್ನು ಬಿಟ್ಟಿದ್ದರು. ಖ್ಯಾತ ಬರಹಗಾರನಾದ ರವಿ ಬೆಳಗೆರೆ ಅವರು ಸಹ ಅಭಿನಂದನ್ ಅವರನ್ನು ಅನುಕರಣೆ ಮಾಡಿದ್ದರು.

LEAVE A REPLY

Please enter your comment!
Please enter your name here