ಸುದೀಪ್ ತಮ್ಮ ಹೆಸರಿನ ಮುಂದೆ ಸ್ಟಾರ್ ಬಿರುದನ್ನು ಏಕೆ ಹೊಂದಿಲ್ಲ. ಇಲ್ಲಿದೆ ಡಿಟೈಲ್ಸ್

0
924

ಚಿತ್ರರಂಗದಲ್ಲಿ ಅನೇಕ ನಟರಿದ್ದಾರೆ. ಅವರೆಲ್ಲರೂ ತಮ್ಮ ಹೆಸರಿನ ಮುಂದೆ ಸ್ಟಾರ್ ಎಂಬ ಬಿರುದನ್ನು ಹೊಂದಿದ್ದಾರೆ. ಹೌದು. ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರತಿಯೊಬ್ಬ ಸ್ಟಾರ್ ನಟರು ತಮ್ಮ ಹೆಸರಿನ ಮುಂದೆ ಸ್ಟಾರ್ ಬಿರುದನ್ನು ಹೊಂದಿದ್ದಾರೆ. ಕೆಲವರಿಗೆ ಚಿತ್ರರಂಗ ಆ ಬಿರುದನ್ನು ನೀಡಿದರೆ, ಇನ್ನು ಕೆಲವರಿಗೆ ಅಭಿಮಾನಿಗಳು ನೀಡುತ್ತಾರೆ. ಆದರೆ ಈ ಒಬ್ಬ ನಟ ಮಾತ್ರ ಸ್ಟಾರ್ ಎಂಬ ಬಿರುದನ್ನು ಹೊಂದಿಲ್ಲ. ಹೌದು. ಸ್ಯಾಂಡಲ್ ವುಡ್ ನಲ್ಲಿ ನಟ ಸುದೀಪ್ ದೊಡ್ಡ ಸ್ಟಾರ್ ನಟರಾಗಿದ್ದಾರೆ. ಆದರೆ ಅವರು ತಮ್ಮ ಹೆಸರಿನ ಮುಂದೆ ಸ್ಟಾರ್ ಬಿರುದನ್ನು ಹೊಂದಿಲ್ಲ. ಹೌದು. ಇಲ್ಲಿಯವರೆಗೂ ಕಿಚ್ಚ ಎಂದೇ ಗುರುತಿಸಿಕೊಂಡಿರುವ ಸುದೀಪ್, ಸ್ಟಾರ್ ಬಿರುದನ್ನು ಹೊಂದಿಲ್ಲ. ಆದ್ರೆ ಇದಕ್ಕೆ ಕಾರಣವನ್ನು ಅವರೇ ತಿಳಿಸಿದ್ದಾರೆ.

ಸ್ಟಾರ್ ಬಿರುದನ್ನು ಹೊಂದಿರದ ಕಿಚ್ಚ

ನಟ ಸುದೀಪ್ ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಮ್ಮ ಹೆಸರಿನ ಮುಂದೆ ಸ್ಟಾರ್ ಬಿರುದನ್ನು ಹೊಂದಿಲ್ಲ. ಆದರೆ ಯಾಕೆ ಬಿರುದನ್ನು ಹೊಂದಿಲ್ಲ ಎನ್ನುವುದರ ಬಗ್ಗೆ ಸುದೀಪ್ ಸ್ವತಃ ಅವರೇ ತಿಳಿಸಿದ್ದಾರೆ. ಹೌದು. ನನಗೆ ಸ್ಟಾರ್ ಬಿರುದು ಬೇಡ. ಯಾಕಂದ್ರೆ ನನಗೆ ಕಿಚ್ಚ ಎನ್ನುವ ಹೆಸರು ಬಹಳ ಸಂತೋಷ ತಂದಿದೆ. ಹಾಗಾಗಿ ನನಗೆ ಸ್ಟಾರ್ ಅನ್ನೋ ಬಿರುದು, ಹೆಸರಿನ ಮುಂದೆ ಬೇಡ. ಯಾಕಂದ್ರೆ ಮೊದಲಿನಿಂದಲೂ ನಾನು ಕಿಚ್ಚನಾಗಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ನನಗೆ ಅದೇ ಹೆಸರು ಬೇಕು. ಅಲ್ಲದೆ ಕಿಚ್ಚ ಎನ್ನುವ ಹೆಸರನ್ನು ನಾನು ಇಷ್ಟಪಡಲು ಒಂದು ಕಾರಣವಿದೆ ಎಂದು ಹೇಳಿದ್ದಾರೆ.

ಅಭಿಮಾನಿಗಳು ನನ್ನನ್ನು ಗುರುತಿಸಿದ್ದೇ ಕಿಚ್ಚ ಎಂದು

ನಾನು ಬಹಳಷ್ಟು ಆಸೆ ಪಟ್ಟು ಹಾಗು ಅತಿ ನಿರೀಕ್ಷೆ ಹೊತ್ತ ಸಿನಿಮಾ ಅಂದ್ರೆ ಅದು ಹುಚ್ಚ. ನನ್ನ ಪಾಲಿಗೆ ಹುಚ್ಚ ಸಿನಿಮಾ ಆ ದೇವರು ಕೊಟ್ಟ ವರ. ಆಗ ನಾನು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಒಬ್ಬ ನಟ ಅನ್ನೋದು ಮಾತ್ರ ಗೊತ್ತಿತ್ತು. ಆದ್ರೆ ಹುಚ್ಚ ಸಿನಿಮಾ ತೆರೆ ಕಂಡ ಸಮಯದಲ್ಲಿ ನಾನು ಥಿಯೇಟರ್ ಗಳ ಬಳಿ ಹೋದಾಗ ಪ್ರತಿಯೊಬ್ಬ ಅಭಿಮಾನಿಯ ಬಾಯಲ್ಲೂ ಕಿಚ್ಚ ಕಿಚ್ಚ ಎನ್ನುವ ಹೆಸರೇ ಕೇಳಿಬರುತ್ತಿತ್ತು. ಹಾಗಾಗಿ ಜನರಿಗೆ ಸುದೀಪ್ ಎನ್ನುವುದಕ್ಕಿಂತ ಕಿಚ್ಚ ಎನ್ನುವ ವ್ಯಕ್ತಿತ್ವ ಇಷ್ಟ ಎಂದು ನಾನು ಅಂದಿನಿಂದ ಕಿಚ್ಚನಾಗಿಯೇ ಉಳಿದಿದ್ದೇನೆ. ಈಗ ಮಾತ್ರವಲ್ಲ, ಮುಂದೊಂದು ದಿನ ನಾನು ಇನ್ನು ದೊಡ್ಡ ನಟನಾದರೂ ಕಿಚ್ಚ ಎನ್ನುವ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸುದೀಪ್ ತಮ್ಮ ಹೆಸರಿನ ಜೊತೆಗಿರುವ ಕಿಚ್ಚ ಎಂಬ ಟೈಟಲ್ ಅನ್ನು ಬದಲಾಯಿಸಿಕೊಳ್ಳಲ್ವಂತೆ. ಯಾಕಂದ್ರೆ ಕಿಚ್ಚ ಎನ್ನುವ ಹೆಸರು ಅಭಿಮಾನಿಗಳಿಂದ ಪಡೆದಿರುವ ಭಿಕ್ಷೆ. ಹಾಗಾಗಿ ನಾನು ಸ್ಟಾರ್ ಎಂಬ ಬಿರುದನ್ನು ಹೊಂದುವುದಿಲ್ಲ. ನನಗೆ ಕಿಚ್ಚ ಎನ್ನುವ ಹೆಸರೇ ಮುಖ್ಯ ಎಂದಿದ್ದಾರೆ.

LEAVE A REPLY

Please enter your comment!
Please enter your name here