ರಷ್ಯಾ ಅಭಿಮಾನಿ ಕಳಿಸಿರುವ ಸಂದೇಶಕ್ಕೆ ದಿಲ್ ಖುಷ್ ಆದ ಕಿಚ್ಚ. ಏನದು ಸಂದೇಶ?

0
581
sudeep fan rashya

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅಂದ್ರೆ ಅದೇನೋ ಒಂಥರಾ ಕ್ರೇಜ್. ಹೌದು. ತಮ್ಮ ನಟನೆ ಹಾಗು ಮಾತನಾಡುವ ಶೈಲಿಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಜೊತೆಗೆ, ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು, ತಮ್ಮ ಬತ್ತಳಿಕೆಯಲ್ಲಿ ಇನ್ನು ಅನೇಕ ಸಿನಿಮಾಗಳನ್ನು ಹೊಂದಿದ್ದಾರೆ. ಇನ್ನು ಕಿಚ್ಚ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಭಾರತದಲ್ಲಿ ಮಾತ್ರವಲ್ಲದೆ, ಹೊರ ದೇಶಗಳಲ್ಲೂ ಕಿಚ್ಚನಿಗೆ ಅಭಿಮಾನಿಗಳಿದ್ದಾರೆ. ಇನ್ನು ಹೊರ ದೇಶದ ಕೆಲವು ಅಭಿಮಾನಿಗಳು ಕಿಚ್ಚನ ಎಲ್ಲ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರಂತೆ. ಜೊತೆಗೆ ಅವರ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮವನ್ನು ಕೂಡ ನೋಡುವುದಾಗಿ, ಅವರ ಕಟ್ಟಾ ಅಭಿಮಾನಿಯೊಬ್ಬರು, ಅವರ ಮೇಲಿರುವ ಅಭಿಮಾನವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಸುದೀಪ್ ಅಂದ್ರೆ ನನಗೆ ಬಹಳ ಇಷ್ಟವೆಂದ ರಷ್ಯಾ ಅಭಿಮಾನಿ

ಸುದೀಪ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬರು, ತಮ್ಮ ಅಭಿಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಹೌದು. ಇವರ ಹೆಸರು ಮರೀನಾ ಕಾರ್ಟಿಂಕಾ. ಇವರು ಮೂಲತಃ ರಷ್ಯಾ ನಿವಾಸಿ. ಇವರು ಸುದೀಪ್ ಅವರ ದೊಡ್ಡ ಅಭಿಮಾನಿಯಂತೆ. ಹಾಗಾಗಿ ಸುದೀಪ್ ಅಭಿನಯದ ಎಲ್ಲ ಸಿನಿಮಾಗಳನ್ನು ವೀಕ್ಷಿಸಿದ್ದಾರಂತೆ. ಜೊತೆಗೆ ಅವರ ಬಿಗ್ ಬಾಸ್ ಕಾರ್ಯಕ್ರಮವನ್ನು ಸಹ ನೋಡುತ್ತಾರಂತೆ. ಇನ್ನು ಈ ಬಗ್ಗೆ ಮರೀನಾ, ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಾಲುಗಳ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ನೀವು ಸದಾಕಾಲ ಚೆನ್ನಾಗಿರಬೇಕು

ನಮಸ್ಕಾರ ಸುದೀಪ್ ಅವರೆ. ನಾನು ಮರೀನಾ ಕಾರ್ಟಿಂಕಾ. ನಿಮ್ಮ ಅಭಿನಯ ನನಗೆ ತುಂಬ ಇಷ್ಟ. ನಾನು ಇಲ್ಲಿ, ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುತ್ತಿರುತ್ತೇನೆ. ನೀವು ಅದ್ಭುತವಾದ ನಟ. ನಾನು ಒಂದಲ್ಲಾ ಒಂದು ದಿನ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭಾವಿಸಿದ್ದೇನೆ. ಜೊತೆಗೆ ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿರಿ ಎಂದು ಹಾರೈಸುತ್ತೇನೆ. ನಮಗೆ ಮನೋರಂಜನೆ ನೀಡುತ್ತಿರುವುದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಧನ್ಯವಾದ ತಿಳಿಸಿದ ಕಿಚ್ಚ

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕಿಚ್ಚನ ಅಭಿಮಾನಿಗಳು ಆ ವೀಡಿಯೋವನ್ನು ಕಿಚ್ಚನ ಅಭಿಮಾನಿಗಳ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕಿಚ್ಚ ಆ ವಿಡಿಯೋ ನೋಡಿದ ಕೂಡಲೇ, ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಮರೀನಾ ಅವರ ಅಭಿಮಾನಕ್ಕೆ ಕಿಚ್ಚ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನಿಮ್ಮ ಅಭಿಮಾನ ಸದಾಕಾಲ ಹೀಗೆ ಇರಲಿ ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಕಿಚ್ಚ ದೇಶದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ, ಮರೀನಾ ಅವರ ಅಭಿಮಾನವಾಗಿದೆ. ಒಟ್ಟಿನಲ್ಲಿ ನಮ್ಮ ಕಲಾವಿದರು ಇದೇ ರೀತಿ ಎಲ್ಲರ ಮನಗೆಲ್ಲಬೇಕೆಂಬುದೇ ಅಭಿಮಾನಿಗಳ ಆಸೆಯಾಗಿದೆ.

LEAVE A REPLY

Please enter your comment!
Please enter your name here