ಮೀಟೂ ವಿಚಾರವಾಗಿ ಸ್ಯಾಂಡಲ್ ವುಡ್ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ ಶ್ರುತಿ ಹರಿಹರನ್

0
924
shruthi hariharan

ನಟಿ ಶ್ರುತಿ ಹರಿಹರನ್ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಮಿಂಚಿದರು. ಅಡ್ರಗ್ ಮೀಟೂ ಪ್ರಕರಣದಲ್ಲಿ ಅವರ ಸುದ್ದಿಯಾದ ಮೇಲೆ ಅವರು ಕನ್ನಡ ಚಿತ್ರರಂಗದಿಂದ ದೂರಾದರು. ಹೌದು. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದರು. ಇನ್ನು ಈ ವಿಚಾರ ಬಹಳಷ್ಟು ಸದ್ದು ಮಾಡಿತು. ಅಲ್ಲದೆ ಅರ್ಜುನ್ ಸರ್ಜಾ ಅವರು ಯಾವುದೇ ಆರೋಪ ಮಾಡಿಲ್ಲ ಎನ್ನುವುದಕ್ಕೆ ಸಾಕ್ಷಿಗಳು ಹೆಚ್ಚಾದವು. ಆದರೆ ಇತ್ತ ಶ್ರುತಿ ದಿಕ್ಕು ಕಾಣದೆ ನ್ಯಾಯಾಲಯವೇ ದಾರಿ ತೋರಿಸಲಿ ಎಂದು ಇನ್ನು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಅವರು ಇಲ್ಲಿಯವರೆಗೂ ಯಾವುದೇ ಸಿನಿಮಾ ಮಾಡಿಲ್ಲ. ಜೊತೆಗೆ ಮಾಧ್ಯಮದ ಮುಂದೆಯೂ ಬಂದಿರಲಿಲ್ಲ. ಆದ್ರೆ ಇಂದು ಮಾಧ್ಯಮದ ಮುಂದೆ ಬರುವುದರ ಜೊತೆಗೆ, ಕೆಲವು ಹೇಳಿಕೆಗಳನ್ನು ನೀಡಿದ್ದಾರೆ.

ಮೀಟೂ ಪ್ರಕರಣದಿಂದ ಚಿತ್ರರಂಗದ ಗಂಡಸರು ಬದಲಾಗಿದ್ದಾರಾ?

ಅನೇಕ ದಿನಗಳ ನಂತರ ಇಂದು ಶ್ರುತಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಇನ್ನು ಅವರು ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಹಾಗು ಮೀಟೂ ಬಗ್ಗೆ ತಮ್ಮ ಅನಿಸಿಕೆಗಳನ್ನು ಮಾತನಾಡಿದ್ದಾರೆ. ಹೌದು. ಸಿಟಿಜನ್ಸ್ ಫಾರ್ ಬೆಂಗಳೂರು ವತಿಯಿಂದ ಇವತ್ತು ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶ್ರುತಿ ಹರಿಹರನ್ ಲೈಂಗಿಕ ದೌರ್ಜನ್ಯಗಳು ಯಾಕೆ ಕಡಿಮೆ ಆಗುತ್ತಿಲ್ಲ ಎಂಬುವುದೇ ಬೇಸರ ಎಂದು ಹೇಳಿದ್ದಾರೆ. ಆದರೆ ಮೀಟೂ ಪ್ರಕರಣ ಸದ್ದು ಮಾಡಿದಾಗ ಇಂಡಸ್ಟ್ರಿಯಲ್ಲಿರುವ ಗಂಡಸರು ಸ್ವಲ್ಪನಾದ್ರೂ ಹೆದರಿಕೊಂಡಿದ್ದಿರಾ? ಅವರ ವರ್ತನೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಆಗಿದೆ ಅನ್ನೊ ಖುಷಿ ನನಗಿದೆ. ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗದಿದ್ದರೂ ಸಣ್ಣ ಪ್ರಮಾಣದಲ್ಲಿ ಆಗಿರೋದು ಮಾತ್ರ ಸತ್ಯ ಎಂದಿದ್ದಾರೆ.

ನಾನು ಪ್ರಕರಣದಿಂದ ಹಿಂದೆ ಸರಿದಿಲ್ಲ

ಇನ್ನು ತಮ್ಮ ಕೇಸ್ ವಿಚಾರವಾಗಿ ಮಾತನಾಡಿದ ಶ್ರುತಿ, ನಾನು ಪ್ರಕರಣದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ. ಹೌದು. ಇಂದು ಸಹ ನನ್ನ ಹೇಳಿಕೆಗಳಿಗೆ ನಾನು ಬದ್ಧಳಾಗಿದ್ದೇನೆ. ಯಾರಿಗೂ ಕ್ಷಮೆಯನ್ನು ಕೇಳಿಲ್ಲ. ಸದ್ಯ ನಾನು ಒಂದು ಮಗುವಿನ ತಾಯಿ. ಹಾಗಾಗಿ ಸ್ಪಲ್ಪ ಬ್ರೇಕ್ ತೆಗೆದುಕೊಂಡಿದ್ದೇನೆಯೇ ಹೊರತು ಸೈಲೆಂಟ್ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ನಿಧಾನವಾಗ್ತಿದೆ ಎಂದು ಶ್ರುತಿ ಬೇಸರ ವ್ಯಕ್ತಪಡಿಸಿದರು. ಜೊತೆಗೆ ನಾನು ನ್ಯಾಯವನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

 

ಒಟ್ಟಿನಲ್ಲಿ ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣವಾದ ಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ನಡೆದಂತಹ ಪ್ರತಿಭಟನೆಯಲ್ಲಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here