ಮರೆಯಲ್ಲಿ ನಿಂತು ಪಾಠ ಕೇಳುತ್ತಿದ್ದ ಬಾಲಕಿ ಕಂಡು ಮರುಗಿದ ಶಾಲಾ ಸಿಬ್ಬಂದಿ

0
1225

ಶಿಕ್ಷಕ. ನಿಜಕ್ಕೂ ಈ ಪದದ ಅರ್ಥವೇ ಎಲ್ಲರನ್ನು ಗಮನ ಸೆಳೆಯುತ್ತದೆ. ಹೌದು. ಶಿ ಅಂದ್ರೆ ಶಿಕ್ಷಿಸು, ಕ್ಷ ಅಂದ್ರೆ ಕ್ಷಮಿಸು, ಕ ಅಂದ್ರೆ ಕಲಿಸು. ಒಬ್ಬ ಶಿಕ್ಷಕನಾದವನು ಎಲ್ಲ ಗುಣಗಳನ್ನು ಹೊಂದಿರಬೇಕು. ಯಾಕಂದ್ರೆ ಮಕ್ಕಳಿಗೆ ಶಿಕ್ಷಕನೇ ಸರ್ವಶ್ರೇಷ್ಠನಾಗಿರುತ್ತಾನೆ. ಅದರಂತೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಅನ್ನೋದು ಬಹಳ ಮುಖ್ಯ. ಆದ್ರೆ ಎಷ್ಟೋ ಜನ ಮಕ್ಕಳು ವಿದ್ಯೆಯಿಂದ ದೂರ ಉಳಿದಿದ್ದಾರೆ. ಯಾಕಂದ್ರೆ ಅವರ ಬಡತನ ಅವರ ವಿದ್ಯೆಯನ್ನು ಕಸಿದುಕೊಳ್ಳುತ್ತಿದೆ. ಅಂಥವರು ನಮ್ಮಲ್ಲಿ ಅನೇಕರಿದ್ದಾರೆ. ಅದರಲ್ಲಿ ಈ ಬಾಲಕಿಯು ಸಹ ಒಬ್ಬಳಾಗಿದ್ದಾಳೆ. ಹೌದು. ಬಡತನದಲ್ಲಿ ಹುಟ್ಟಿದ ಈ ಮಗು ಶಾಲೆಗೆ ಹೋಗಲು ಆಗಿರಲಿಲ್ಲ. ಆದ್ರೆ ಪ್ರತಿದಿನ ಮರೆಯಲ್ಲಿ ನಿಂತು ಪಾಠ ಕೇಳುತ್ತಿತ್ತು. ಈಗ ಆ ಫೋಟೋ ಎಲ್ಲ ಕಡೆ ವೈರಲ್ ಆಗುತ್ತಿದೆ.

ಮರೆಯಲ್ಲಿ ನಿಂತು ಪಾಠ ಕೇಳುತ್ತಿದ್ದ ಬಾಲಕಿ

ಈ ಬಾಲಕಿಯ ಹೆಸರು ಮೋತಿ ದಿವ್ಯಾ. ಈ ಬಾಲಕಿ ಬಡಕುಟುಂಬವೊಂದರಲ್ಲಿ ಜನಿಸಿರುವುದರಿಂದ, ಶಾಲೆಗೆ ಹೋಗುವದರಿಂದ ದುರಾಗಿದ್ದಳು. ಆದ್ರೆ ಈ ಬಾಲಕಿಗೆ ಹಸಿವಿನ ಜೊತೆಗೆ ಓದಿನ ಬಗ್ಗೆ ಬಹಳ ಆಸಕ್ತಿ ಇತ್ತು. ಯಾಕಂದ್ರೆ ಆಕೆಯ ಮನೆ, ಶಾಲೆಯ ಬಳಿಯೇ ಇದ್ದಿದ್ದರಿಂದ, ಅಲ್ಲಿದ್ದ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹೋಗುವುದನ್ನು ನೋಡಿ, ತಾನು ಶಾಲೆಗೆ ಹೋಗಬೇಕೆಂದು ಬಯಸುತ್ತಿದ್ದಳು. ಆದ್ರೆ ಅವರ ತಂದೆ ತಾಯಿ, ಆಕೆಯನ್ನು ಶಾಲೆಗೆ ಕಳಿಸಿರಲಿಲ್ಲ. ಆದ್ರೆ ದಿವ್ಯಾ ಪ್ರತಿದಿನ ಹೈದರಾಬಾದ್‍ನ ಗುಡಿಮಲಕಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಶಾಲೆಯ ಬಳಿ ಹೋಗಿ, ತರಗತಿಯ ಪಕ್ಕದಲ್ಲಿ ಮರೆಯಲ್ಲಿ ನಿಂತು ಪಾಠವನ್ನು ಕೇಳುತ್ತಿದ್ದಳು. ಇನ್ನು ಈ ವಿಷಯ ತಿಳಿದ ಅಲ್ಲಿದ್ದವರು ಒಂದು ಸಂತಸದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಬಾಲಕಿಗೆ ಶಾಲೆಯಲ್ಲಿ ದಾಖಲಾತಿ ನೀಡಲಾಗಿದೆ

ಈ ವಿಷಯ ಶಾಲಾ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ. ಬಾಲಕಿಗೆ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಹೌದು. ಎಂವಿ ಫೌಂಡೇಶನ್‍ನಲ್ಲಿ ರಾಷ್ಟ್ರೀಯ ಕನ್ವೀನರ್ ಆಗಿರುವ ವೆಂಕಟ್ ರೆಡ್ಡಿ ಅವ್ರು, ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿ ಅದಕ್ಕೆ, “ಯಾಕೆ ಈ ಬಾಲಕಿಗೆ ದಾಖಲಾತಿ ನೀಡಿಲ್ಲ. ಆ ಬಾಲಕಿಗೂ ಕೂಡ ಓದುವ ಹಾಗೂ ಊಟ ಮಾಡುವ ಅಧಿಕಾರ ಇದೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಇದು ಶಾಲಾ ಸಿ ಬಂಡಿಯ ಗಮನಕ್ಕೆ ಬಂದಿದ್ದು, ತಕ್ಷಣವೇ ಬಾಲಕಿಯ ಪೋಷಕರನ್ನು ಸಂಪರ್ಕಿಸಿ ಬಾಲಕಿಗೆ ತಮ್ಮ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ಈಗ ಬಾಲಕಿ ಸಂತಸದಿಂದ ಶಾಲೆಗೆ ಹೋಗಿ ಆತ ಕೇಳುತ್ತಿದ್ದಾಳೆ.

ನಿಜಕ್ಕೂ ಕೆಲವನ್ನು ನೋಡಿದಾಗ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಯಾಕಂದ್ರೆ ಕೆಲವರಿಗೆ ಓದಿನಲ್ಲಿ ಆಸಕ್ತಿಯೇ ಇರುವುದಿಲ್ಲ. ಆದ್ರೂ ಅವರನ್ನು, ಅವರ ಪೋಷಕರು ಒತ್ತಾಯದಿಂದ ಶಾಲೆಗೆ ಕಳಿಸುತ್ತಾರೆ. ಆದ್ರೆ ಇಂತಹ ಮಕ್ಕಳಿಗೆ ಓದಬೇಕೆಂಬ ಆಸೆಯಿದ್ದರೂ, ಬಡತನ ಅವರನ್ನು ವಿದ್ಯಾಭ್ಯಾಸದಿಂದ ದೂರ ಮಾಡುತ್ತದೆ.

LEAVE A REPLY

Please enter your comment!
Please enter your name here