ಶಬರಿಮಲೆಗೆ ಮಹಿಳೆಯರ ಪ್ರವೇಶದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಂಡ ಕೇರಳ ಸರ್ಕಾರ

0
476
shabarimale

ನವಂಬರ್-ಡಿಸಂಬರ್ ಬಂತು ಅಂದ್ರೆ ಸಾಕು ಅಯ್ಯಪ್ಪನ ನಾದಮಯ ಕೇಳುತ್ತಲೇ ಇರುತ್ತದೆ. ಹೌದು. ನವಂಬರ್ ನಿಂದ ಜನವರಿಯವರೆಗೂ ಅಯ್ಯಪ್ಪ ಸ್ವಾಮಿಯ ಭಕ್ತರು ಮಾಲೆ ಹಾಕಿ, ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಇನ್ನು ಕೆಲವರು ಮಕರ ಜ್ಯೋತಿ ವರೆಗೂ ಕಾದು, ನಂತರ ತಮ್ಮ ಮಾಲೆಯನ್ನು ತೆಗೆಯುತ್ತಾರೆ. ಈ ರೀತಿ ಅನೇಕ ವರ್ಷಗಳಿಂದಲೂ ಶಾಂತಿಯಿಂದ ನಡೆದುಕೊಂಡು ಬರುತ್ತಿರುವ ಆಚರಣೆಯಲ್ಲಿ ಕಳೆದ ವರ್ಷದಿಂದ ಬೆಂಕಿ ಎದ್ದಿದೆ. ಹೌದು. ಸುಪ್ರೀಂ ಕೋರ್ಟ್ ಕಳೆದ ವರ್ಷ, ಮಹಿಳೆಯರು ಶಬರಿಮಲೆಗೆ ಹೋಗುವ ಅವಕಾಶ ನೀಡಿತು. ಆಗ ಇಬ್ಬರು ಮಹಿಳೆಯರು ಪೊಲೀಸ್ ಕಾವಲಿನಲ್ಲಿ ತೆರಳಿದರು. ಅದು ಎಲ್ಲೆಡೆ ಸಂಚಲನ ಸೃಷ್ಟಿಸಿತು. ಅದೇ ರೀತಿ ಈ ಬಾರಿಯೂ ಸಹ ಸುಪ್ರೀಂ ತೀರ್ಪನ್ನು ಹೊರಡಿಸುವ ಸಾಧ್ಯತೆ ಹೆಚ್ಚಿದೆ. ಆದ್ರೆ ಸರ್ಕಾರ ಮಾತ್ರ ಅದರ ವಿಚಾರವಾಗಿ ಸಮ್ಮತಿ ಸೂಚಿಸುತ್ತಿಲ್ಲ.

ಮಹಿಳೆಯರ ಪ್ರವೇಶ ಸರ್ಕಾರದ ಜವಾಬ್ದಾರಿಯಲ್ಲ

ಶಬರಿಮಲೆಯಲ್ಲಿ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಪಡೆಯುವ ವಿಚಾರದಲ್ಲಿ ಸುಪ್ರೀಂ ಕೂಡ ಸಮ್ಮತಿ ಸೂಚಿಸಿತ್ತು. ಅದರಂತೆ. ಕಳೆದ ವರ್ಷ ಇಬ್ಬರು ಮಹಿಳೆಯರು ಪೋಲೀಸಿನ ಕಾವಲಿನಲ್ಲಿ ಅಯ್ಯಪ್ಪನ ದೇಗುಲಕ್ಕೆ ತೆರಳಿ, ದರ್ಶನ ಪಡೆದಿದ್ದರು. ಆದ್ರೆ ಅದು ದೊಡ್ಡ ಗಲಭೆಗೆ ಕಾರಣವಾಯಿತು. ಸರ್ಕಾರದಿಂದಲೂ ಸಹ ಏನು ಮಾಡಲು ಆಗಲಿಲ್ಲ. ಅಲ್ಲದೆ ಭಕ್ತರಿಗೂ ಹಾಗು ಪೊಲೀಸರಿಗೂ ಮಾರಾಮಾರಿ ನಡೆದಿತ್ತು. ಹಾಗಾಗಿ ಈ ಬಾರಿಯ ಆ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಹೌದು. ಈ ಬಾರಿ ದೇಗುಲಕ್ಕೆ ಮಹಿಳೆಯರು ಬಂದರೆ, ಅದು ಸರ್ಕಾರದ ಜವಾಬ್ದಾರಿಯಲ್ಲ. ಯಾರು ಸಹ ಸರ್ಕಾರದ ವಿರುದ್ಧ ನಿಲ್ಲಬಾರದು ಎಂದು ತಿಳಿಸಲಾಗಿದೆ.

ಮಹಿಳೆಯರು ಎಲ್ಲ ದೇಗುಲಗಳಿಗೂ ಭೇಟಿ ನೀಡಬಹುದು

ಇನ್ನು ಸುಪ್ರೀಂ ಕೋರ್ಟ್ ನಿನ್ನೆ ಈ ವಿಚಾರವಾಗಿ ಒಂದು ತೀರ್ಪನ್ನು ಹೊರಡಿಸಿದೆ. ಹೌದು. ಮಹಿಳೆಯರು ಎಲ್ಲ ದೇಗಲಗಳಿಗೂ ಭೇಟಿ ನೀಡಬಹುದು. ಅವರಿಗೆ ಎಲ್ಲ ದೇಗುಲಕ್ಕೆ ಪ್ರವೇಶವಿದೆ ಎಂದು ತಿಳಿಸಿದೆ. ಆದರೂ ಹಿಂದೂ ಸಂಪ್ರದಾಯದಲ್ಲಿ ಯಾವೊಬ್ಬ ಮಹಿಳೆಯು ಸಹ ನಮ್ಮ ಸಂಸ್ಕೃತಿಯನ್ನು ಮೀರುತ್ತಿಲ್ಲ. ಜೊತೆಗೆ ಅದನ್ನು ಮೀರಲು ಸಹ ಬಯಸುವುದಿಲ್ಲ. ಹಾಗಾಗಿ ಮಹಿಳೆಯರು ಸುಮ್ಮನಿದ್ದಾರೆ. ಆದ್ರೆ ಇತರ ಹೊರಗಿನವರು ದೇಗುಲಕ್ಕೆ ಭೇಟಿ ನೀಡಬಹುದಾದ ಎಲ್ಲ ಸೂಚನೆಗಳಿವೆ ಎಂದು ಕೇರಳ ಸರ್ಕಾರ ತಿಳಿಸಿದೆ. ಹಾಗಾಗಿ ಈ ಬಾರಿಯ ಯಾವುದೇ ಗಲಭೆಗೂ ಹಾಗು ತೊಂದರೆಗೂ ಸರ್ಕಾರ ಕಾರಣವಲ್ಲ ಎಂದು ತಿಳಿಸಿದೆ. ಇನ್ನು ಈ ಬಾರಿ ದೇಗುಲ ಪ್ರವೇಶದ ವಿಚಾರವಾಗಿ ಮಹಿಳೆಯರ ಹೆಜ್ಜೆ ಏನಾಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಸುಪ್ರೀಂ ತೀರ್ಪನ್ನು ಪಾಲಿಸಬೇಕು ಎಂದು ಕೆಲವರು ಹೇಳಿದರೂ, ನಮ್ಮ ಸಂಸ್ಕೃತಿಯನ್ನು ನಾವು ಮೀರುವುದಿಲ್ಲ ಎಂದು ಹಿಂದೂ ಸಂಪ್ರದಾಯ ತಿಳಿಸುತ್ತದೆ. ಹಾಗಾದ್ರೆ ಇದರ ಮುಂದಿನ ನಡೆ ಕೆಲವೇ ದಿನಗಳಲ್ಲೇ ತಿಳಿಯಲಿದೆ.

LEAVE A REPLY

Please enter your comment!
Please enter your name here