ಮಸ್ತ್ ಪಲಾವ್ ಮತ್ತು ಬೊಂಬಾಟ್ ದೋಸೆಗೆ ಬಿ.ಎನ್. ಸಾಂಬೈಯ್ಯ ಟಿಫನ್ ರೂಮ್ ಬೆಸ್ಟ್ ಚಾಯ್ಸ್

0
1197
sambaiah setty tiffin room
sambaiah setty tiffin room

ಶಿವಾಜಿನಗರ ಅಂದ್ರೆ ಕಣ್ಮುಂದೆ ಬರೋದು ಆ shopping ರಸ್ತೆಗಳು ಮತ್ತೆ non-veg centerಗಳು. ಆದ್ರೆ ಶಿವಾಜಿನಗರ ಅನ್ನೋ coin ನ ತಿರುಗಿಸಿ ನೋಡಿದ್ರೆ ಟಿಫಿನ್ ಸೆಂಟರ್ ಗಳ ಬೊಂಬಾಟ್ ಜಾಗಗಳು ಕಣ್ಮುಂದೆ ಬರತ್ತೆ, ಸಸ್ಯಾಹಾರಿಗಳು ಅಂತ name tag ಹಾಕೊಂಡಿರೋರಿಗೂ ಸೇರಿಸಿ ನೇ ಹೇಳ್ತಾಯಿರೋದು ನಾವು. normal ಆಗಿ ನಾವೆಲ್ಲಾ ಸುಲೈಮಾನ್ ಟಿ ಕುಡಿಯಕ್ಕೆ ಶಿವಾಜಿನಗರ ಗೆ ಹೋಗ್ತಿವಿ, ಆದ್ರೆ ಈ ಸಲ ವಿಸ್ಮಯ ಅನ್ನೋ ಹಾಗೆ ನಮಗೆ ಒಂದು ಬೊಂಬಾಟ್ ಟಿಫನ್ ಸೆಂಟರ್ ಸಿಕ್ತು ಅದರ ಹೆಸರೇ “ಬಿ.ಎನ್. ಸಾಂಬೈಯ್ಯ ಟಿಫನ್ ರೂಮ್”.

sambaiah setty tiffin room
sambaiah setty tiffin room

ಶಿವಾಜಿನಗರದ foodiesಗೆ ಈ ಜಾಗದ ಪರಿಚಯ ಮೊದಲೇ ಇರತ್ತೆ. ನಿಮಗೆ ಈ ಟಿಫನ್ ಸೆಂಟರ್ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದ್ರು ಸರಿ ಅಥವಾ “ಗೊತ್ತೆಯಿಲ್ಲ ಗುರು” ಅಂದ್ರು ಸರಿ, ನಾವು ನಿಮಗೆ famous items ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ತೀವಿ, ಏನು ತಿನ್ನಬಹುದು, ಏನೇನು ಸಕ್ಕತ್ತಾಗಿರತ್ತೆ ಎಲ್ಲದರ ಬಗ್ಗೆನೂ ತಿಳಿಸಿಕೊಡ್ತೀವಿ. ಬನ್ನಿ ಒಂದ್ round ಹೋಗಿಬರೋಣ.

ಪಲಾವ್ ಮತ್ತೆ ದೋಸೆಗೆ ಇದು ಬೆಸ್ಟ್ place

ಪಲಾವ್ ?, ವೆಜ್ ಪಲಾವ್ ?, ಏನ್ ಗುರು ವೆಜ್ ಪಲಾವ್ ಆ ? ಅಂತ ಮೂಗ್ ಮುರಿಯೋರಿಗೆಲ್ಲ ಈ ಜಾಗ ಉತ್ತರ ಅನ್ನಬಹುದು. ಬಿಸಿಯಾದ ಒಂದು ಬೌಲ್ ಅಷ್ಟು ಪಲಾವ್ ನ ಎಲೆ ಮೇಲೆ ಮೊಸರುಬಜ್ಜಿ ಜತೆ ಹಾಕಿ ಕೊಡ್ತಾರೆ ಗುರು…. “ಈ ಥರದ್ ಒಂದು ಐಟಂ ನ ಬೇರೆ ಕಡೇ ತಿಂದಿರಲಿಲ್ವಲ್ಲ” ಅಂತ ಅನ್ನಿಸ್ಬಿಡತ್ತೆ. ಬೆಂಗಳೂರಿನ ಮೂಲೆಮೂಲೆಗಳಿಂದ ಜನ ಇಲ್ಲಿನ ಪಲಾವ್ ತಿನ್ನಕ್ಕೆ ಅಂತಾನೆ ಬರ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ ಹೆಂಗಿರತ್ತೆ ಅಂತ.

clicked by karthik satish
clicked by karthik satish

ಪಲಾವ್ ಬಿಟ್ರೆ ಮತ್ತೊಂದು ಸಕ್ಕತ್ item ಅಂದ್ರೆ ದೋಸೆ, ಬಣ್ಣಿಸಲು ಪದಗಳೆ ಸಿಗುತ್ತಿಲ್ಲ ಗುರುವೆ, ಅಬ್ಬಾ!.. ಒಂದ್ ಮಾತ್ ಮಾತ್ರ ಹೇಳಬಹುದು ಚಿಂದಿ ಅಷ್ಟೇ. ಇಲ್ಲಿ ಬಿಳೀ ಬಣ್ಣದ ದೋಸೆ ನ ಚಟ್ನಿ ಮತ್ತೆ ಗೊಜ್ಜಿನ ಜತೆ ಕೊಡ್ತಾರೆ ಸಕ್ಕತ್ತಾಗಿರತ್ತೆ.

ಅಣ್ಣ ಒಂದ್ ಪ್ಲೇಟ್ ವಡೆ ಬರಲಿ..

sambaiah setty tiffin room
sambaiah setty tiffin room

ಪಲಾವ್ ಮತ್ತೆ ದೋಸೆ ಚಿಂದಿಯಾಗಿತ್ತು, ಆದ್ರೆ ವಡೆ ಮತ್ತೆ ಕರಿ ನಮ್ಮ ಮನಸನ್ನ ಕದ್ದುಬಿಡ್ತು.ವಡೆ ಬುಧವಾರ ಮತ್ತೆ ಶುಕ್ರವಾರ ಮಾತ್ರನೆ ಸಿಗೋದು. ಆದ್ರೆ ತುಂಬಾ ಬೇಗ ಮಾರಾಟ ಆಗ್ಬಿಡತ್ತೆ. ಮುಂಚೆನೇ ಹೇಳ್ತಿದ್ದೀವಿ ಇದು ತುಂಬಾ ದೊಡ್ಡ ಜಾಗ ಅಲ್ಲ, ಜಾಗ ordinary ಆಗಿದೆ, ಮರದ್ ಬೆಂಚ್ಗಳಿವೆ ಅಲ್ಲೇ food serve ಮಾಡ್ತಾರೆ.

ನಿಮಗೂ ಬೆಸ್ಟ್ ಪಲಾವ್ ಮತ್ತೆ ದೋಸೆನ ತಿನ್ನಬೇಕು ಅಂತ ಅನಿಸ್ತಿದ್ರೆ ಇದು ಪರ್ಫೆಕ್ಟ್ ಜಾಗ.

Open: 7:30 AM – 11 PM

Where: No 90/2, Dharmaraja Koil St, Bharati Nagar, Shivaji Nagar, Bengaluru

 

LEAVE A REPLY

Please enter your comment!
Please enter your name here