ಅಭಿಮಾನಿಯನ್ನು ಸಂತೈಸಿದ ಹಿಟ್ ಮ್ಯಾನ್

0
735

ನಿನ್ನೆ ಭಾರತ ಬಾಂಗ್ಲಾದೇಶ್ ವಿರುದ್ಧ ಮ್ಯಾಚ್ ಆಡಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ರೋಹಿತ್ ಶರ್ಮಾ ಅದ್ಭುತವಾಗಿ ಆಟವನ್ನು ಆಡುವ ಮೂಲಕ ವಿಶ್ವ ಕಪ್ ನಲ್ಲಿ ಸತತ ನಾಲ್ಕು ಶತಕವನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್, ರಿಷಬ್ ಪಂಥ್,ಕೂಡ ಬಹಳ ಚೆನ್ನಾಗಿ ಆಡಿದ್ದಾರೆ. ಕೊನೆ ಹಂತದಲ್ಲಿ ಭಾರತ ಬಹಳ ವೇಗವಾಗಿ ವಿಕೆಟ್ಸ್ ಗಳನ್ನೂ ಕಳೆದುಕೊಂಡಿದ್ದರು. ಧೋನಿ ಇದ್ದ ಕಾರಣದಿಂದಾಗಿ ತಂಡದ ಮೊತ್ತ ಸ್ವಲ್ಪ ಜಾಸ್ತಿ ಆಯ್ತು. ೩೧೪ ರನ್ಸ್ ಅನ್ನು ಬಾಂಗ್ಲಾದೇಶ ಹೊಡಿಯಬೇಕಿತ್ತು. ಆದರೆ ಭಾರತ ತಂಡದ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ತಮ್ಮ ಎಲ್ಲಾ ವಿಕೆಟ್ಸ್ಗಳನ್ನು ಕಳೆದುಕೊಂಡಿದ್ದರು. ಬುಮ್ರಾಹ್ ಬಹಳ ಸೊಗಸಾಗಿ ಬೌಲಿಂಗ್ ಮಾಡಿದ್ದಾರೆ.

ಆಟೋಗ್ರಾಫ್ ಜೊತೆಗೆ ಹಳದಿ ಬಣ್ಣದ ಟೋಪಿಯನ್ನು ನೀಡಿದ್ದಾರೆ

ಇದೇ ಸಮಯದಲ್ಲಿ ರೋಹಿತ್ ಶರ್ಮ ಹೊಡೆದ ಚಂದು ಸೀದಾ ಅಭಿಮಾನಿಗೆ ಹೋಗಿ ತಾಗಿದೆ. ಬಾಲ್ ಏಟಿನಿಂದ ಆ ಅಭಿಮಾನಿರೊಬ್ಬರು ಗಾಯಗೊಂಡಿದ್ದಾರೆ. ರೋಹಿತ್ ಶರ್ಮಾ ಗಾಯಗೊಂಡಿದ್ದ ಅಭಿಮಾನಿಯ ಹತ್ತಿರ ಹೋಗಿ ಆಟೋಗ್ರಾಫ್ ನೀಡುವ ಮೂಲಕ ಹಳದಿ ಬಣ್ಣದ ಟೋಪಿಯನ್ನು ನೀಡಿ ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧ ೨೮ ರನ್ಸ್ ಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ರೋಹಿತ್ ಶರ್ಮಾ ೯೨ ಎಸೆತಗಳಲ್ಲಿ ೧೦೨ ರನ್ಸ್ ಹೊಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೂ ರೋಹಿತ್ ಮೂರು ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಅಪ್ಪಿಕೊಂಡು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ

ಅಭಿಮಾನಿಯನ್ನು ಭೇಟಿ ಮಾಡುವ ಮುನ್ನ ಚಾರುಲತಾ ಅನ್ನೋ ಅಜ್ಜಿಯನ್ನು ಅಪ್ಪಿಕೊಂಡು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ. ಅಜ್ಜಿಯ ಕ್ರೀಡಾಭಿಮಾನವನ್ನು ನೋಡಿ ನಾಡಿನ ಜನತೆ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಕೂಡ ಅಜ್ಜಿಯನ್ನು ಮಾತನಾಡಿಸಿ ಆಶಿರ್ವಾದವನ್ನು ಪಡೆದಿದ್ದು, ವಿರಾಟ್ ಅಲ್ಲಿಂದ ನಿರ್ಗಮಿಸುವ ವೇಳೆಯಲ್ಲಿ ವಿರಾಟ್ ಕೆನ್ನೆಗೆ ಅಜ್ಜಿ ಮುತ್ತನ್ನು ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಜ್ಜಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಇಷ್ಟು ವಯಸ್ಸಾದರೂ ಸ್ಟೇಡಿಯಂ ಗೆ ವೀಲ್ ಚೇರ್ ನಲ್ಲಿ ಬಂದು ಪಂದ್ಯವನ್ನು ವೀಕ್ಷಿಸಿದ್ದಾರೆ. ಅಜ್ಜಿಯ ಕ್ರೀಡಾಭಿಮಾನಕ್ಕೆ ನಾವು ತಲೆ ಬಾಗಲೇಬೇಕಾಗಿದೆ.

LEAVE A REPLY

Please enter your comment!
Please enter your name here