ತನ್ನ ಅಳಿಯನ ಮಾತು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ ರವಿಮಾಮ

0
1218

ಈ ತಿಂಗಳು ಸ್ಯಾಂಡಲ್ ವುಡ್ ಮಂದಿಗೆಲ್ಲಾ ಸಂಭ್ರಮದ ಕ್ಷಣ ಅಂತಾನೆ ಹೇಳಬಹುದು. ಯಾಕಂದ್ರೆ, ಕಾರ್ಯಕ್ರಮ ನಡೀತಿರೋದು ಒಬ್ಬರ ಮನೆಯಲ್ಲೇ. ಆದರೆ ಅದರ ಸಂಭ್ರಮ ಮಾತ್ರ, ಇಡೀ ಚಂದನವನಕ್ಕೆ ತಲುಪಿದೆ. ಹೌದು. ನಮ್ಮ ಕೇಜ್ರಿ ಸ್ಟಾರ್ ರವಿಚಂದ್ರನ್ ಅವರ ಮುದ್ದಿನ ಮಗಳ ವಿವಾಹ ನಡೀತಿರೋದು ಎಲ್ಲರ ಸಂಭ್ರಮಕ್ಕೆ ಕಾರಣವಾಗಿದೆ. ಅದು ಅಲ್ಲದೆ, ರವಿಮಾಮ, ತನ್ನ ಮಗಳ ಮದುವೆಯನ್ನ ಯಾವ ರೀತಿ ಮಾಡಬೇಕು ಅಂತ ನಿರ್ಧರಿಸಿದ್ದರೋ, ಈಗ ಅದೇ ರೀತಿ, ಮಗಳ ಮಾಡುವೆ ಮಾಡುತ್ತಿದ್ದಾರೆ.

ತಮ್ಮ ಮಗಳ ಮದುವೆ ರವಿಮಾಮನ ಕನಸಂತೆ. ಹೌದು. ನನ್ನ ಮಗಳ ಮದುವೆ ಇದೇ ರೀತಿ ಆಗಬೇಕು ಅಂತ ನಾನು, ಆಗಾಗ ಕನಸಿನಲ್ಲಿ ಚಿಂತಿಸುತ್ತಿದ್ದೆ. ಈಗ ಅದೇ ರೀತಿ ನನ್ನ ಮಗಳ ಮಾಡುತ್ತಿದ್ದೇನೆ ಅಂತ, ರವಿಚಂದ್ರನ್ ಅವರು ಕೆಲವು ದಿನಗಳಿಂದಲೂ ಹೇಳುತ್ತಲೇ ಇದ್ದಾರೆ. ಹಾಗಾಗಿ ವಿಶೇಷವಾದ ರೀತಿಯ ಲಗ್ನ ಪತ್ರಿಕೆಯನ್ನು ಮಾಡಿಸಿದ್ದರು. ಆದ್ರೆ ಇದೆಲ್ಲದರ ನಡುವೆ ಎಲ್ಲರಿಗೂ ಇದ್ದ ಗೊಂದಲ ಒಂದೇ. ಮದುವೆ ನಡೀತಿದೆ. ಸಂಭ್ರಮ ಮಾಡ್ತಿದ್ದಾರೆ. ಜೊತೆಗೆ ರವಿಚಂದ್ರನ್ ಅವರು ತಮ್ಮ ಮಗಳ ಮದುವೆ ಬಗ್ಗೆ ಎಲ್ಲರ ಬಳಿ ಹೇಳುತ್ತಿದ್ದಾರೆ. ಆದರೆ ತನ್ನ ಅಳಿಯನ ಬಗ್ಗೆ ಯಾವ ವಿಷಯವನ್ನು ಬಹುರಂಗ ಪಡಿಸುತ್ತಿಲ್ಲ ಏಕೆ? ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಈಗ ಆ ಪ್ರಶ್ನೆಗೆ ರವಿಮಾಮ ತಮ್ಮ ಮಾತುಗಳಲ್ಲೇ ಉತ್ತರ ಕೊಟ್ಟಿದ್ದಾರೆ.

ತನ್ನ ಅಳಿಯನ ಬಗ್ಗೆ ಮಾತನಾಡಿದ ರವಿಚಂದ್ರನ್

ರವಿಚಂದ್ರನ್ ಅವರ ಅಳಿಯ, ಒಬ್ಬ ಬ್ಯುಸಿನೆಸ್ ಮ್ಯಾನ್ ಅಂತೆ. ಹೌದು. ಅಜಯ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದು, ಪೀಣ್ಯ ಹಾಗೂ ವಿದೇಶದಲ್ಲಿ ಕೆಲವು ಫ್ಯಾಕ್ಟರಿ ಹೊಂದಿದ್ದಾರಂತೆ. ಇವರ ಜೊತೆಯೇ ಇವರ ಕುಟುಂಬದವರು ಸಹ ಇದ್ದಾರಂತೆ. ಇವರ ಈ ಬ್ಯುಸಿನೆಸ್ ಗೆ ಇವರ ಕುಟುಂಬದವರು, ಸಂಪೂರ್ಣ ಸಾಥ್ ನೀಡುತ್ತಿದ್ದಾರಂತೆ. ಅಲ್ಲದೆ ಯಲಹಂಕದಲ್ಲಿ ಇವರ ಸ್ವಂತ ಮನೆಗಳಿದ್ದು, ಇವರು ಮಾತ್ರ ವಿಲ್ಲಾದಲ್ಲಿ ವಾಸವಿದ್ದಾರಂತೆ.

ಕೊಡೋದು, ತೆಗೆಕೊಳ್ಳೋದು ಯಾವುದು ನಡೆದಿಲ್ಲವಂತೆ

ಮದುವೆ ಅಂದಮೇಲೆ ಕೊಡೋದು, ತೆಗೆದುಕೊಳ್ಳೋದು ಇದ್ದೇ ಇರುತ್ತೆ. ಆದರೆ ರವಿಮಾಮ ಅವರ ಮಗಳ ಮದುವೆಯಲ್ಲಿ ಅದು ಆಗಿಲ್ಲವಂತೆ. ಹೌದು. ಇದನ್ನ ಸ್ವತಃ ಅವರೇ ತಿಳಿಸಿದ್ದಾರೆ. ನನ್ನ ಕಡೆಯಿಂದ ಅವರಿಗೆ, ಏನನ್ನು ನೀಡಿಲ್ಲ. ಹಾಗೆ ಅವರ ಕಡೆಯಿಂದಲೂ ನಾನು ಸಹ ಏನನ್ನು ಪಡೆದಿಲ್ಲ ಅಂತ ತಿಳಿಸಿದ್ದಾರೆ. ನಾನು ಅವರ ಕುಟುಂಬ ಹಾಗೂ ಅವರ ಸಂಬಂಧಕ್ಕೆ ಬೆಲೆ ಕೊಟ್ಟು, ನನ್ನ ಮಗಳ ಮದುವೆಗೆ ಒಪ್ಪಿಗೆ ನೀಡಿದ್ದೇನೆ. ಬದಲಿಗೆ ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ. ಅಜಯ್ ನಮಗೆ ಮಗನಿದ್ದಂತೆ. ಹಾಗೆ ನನ್ನ ಮಗಳು ಸಹ ಅವರ ತಂದೆ, ಎಟಿಐಗೆ ಮಗಳಿದ್ದಂತೆ ಎಂದು ತಿಳಿಸಿದ್ದಾರೆ.

ರವಿಮಾಮನ ಸಿನಿಮಾಗಳನ್ನ ನೋಡೇ ಇಲ್ವಂತೆ

ರವಿಚಂದ್ರನ್ ಅವರ ಅಳಿಯ ಅಜಯ್ ಅವರು, ಇಲ್ಲಿಯವರೆಗೂ ಅವರ ಸಿನಿಮಾಗಳನ್ನ ನೋಡಿಯೇ ಇಲ್ವಂತೆ. ಸ್ವತಃ ಅವರು, ಅದನ್ನ ರವಿಚಂದ್ರನ್ ಅವರ ಮುಂದೆಯೇ ತಿಳಿಸಿದ್ದಾರಂತೆ. ಅದಕ್ಕೆ ರವಿಮಾಮ ನಗುತ್ತಲೇ ನೋಡದ್ದೆ ಇದ್ದದ್ದು ಒಳ್ಳೆಯದೇ ಆಯಿತು ಅಂತ ಹೇಳಿದರಂತೆ. ಅಲ್ಲದೆ ಅಜಯ್ ಗುಣ ಹಾಗೂ ಮಾತಿನ ವೈಖರಿ ಎಲ್ಲವು, ರವಿಚಂದ್ರನ್ ಅವರಿಗೆ ತುಂಬಾ ಇಷ್ಟ ಆಗಿದೆಯಂತೆ. ಹಾಗಾಗಿ ನನ್ನ ಮಗಳು, ಇವರ ಮನೆಯಲ್ಲಿ ಇದ್ದರೆ, ಸಂತೋಷವಾಗಿರುತ್ತಾಳೆ ಅನ್ನೋದನ್ನ ಖಚಿತ ಪಡಿಸಿಕೊಂಡೆ ಮದುವೆ ಮಾಡುತ್ತಿದ್ದೀನಿ ಎಂದು ರವಿಮಾಮ ತಿಳಿಸಿದ್ದಾರೆ.

ಒಟ್ಟಿನಲ್ಲಿ ರವಿಮಾಮನ ಮಗಳ ಮದುವೆ ಚಂದನವನದವರಿಗೆಲ್ಲಾ ಸಂಭ್ರಮ ತರಿಸಿದೆ. ಎಲ್ಲರೂ ಅವರ ಮಗಳ ಮದುವೆಯಲ್ಲಿ ಕುಣಿದು, ಕುಪ್ಪಳಿಸಬೇಕು ಅಂತ ನಿರ್ಧಾರ ಮಾಡಿದ್ದಾರಂತೆ. ಇದನ್ನ ಸ್ವತಃ ಕೆಲವು ಕಲಾವಿದರು ಹಾಗೂ ರವಿಮಾಮನು ಸಹ ಎಲ್ಲರ ಸಮ್ಮುಖದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here