ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರಿಗೆ ಸಿಗಲಿದೆ ವಿಶೇಷವಾದ ಗೌರವ

0
686

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ನಿರ್ದೆಶಕರ ಸಾಲಿನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹೆಸರು ಸೇರ್ಪಡೆಯಾಗುತ್ತದೆ. ಹೌದು, ಚಂದನವನದಲ್ಲಿ ಕಾಲಿಟ್ಟ ರವಿಚಂದ್ರನ್ ಮೊದಲ ಹಂತದಲ್ಲಿ ಇವರಿಗೆ ಗೆಲುವು ದಕ್ಕಿರಲಿಲ್ಲ. ಆದರೆ ಇವರು ನಿರ್ದೆಶಿಸಿದ ಒಂದು ಚಿತ್ರ ಮಾತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ. ಆ ಚಿತ್ರದ ಹೆಸರೆ ಪ್ರೇಮ ಲೋಕ. ಆಗಿನ ಕಾಲದಲ್ಲಿ ಹೆಚ್ಚು ದಿನಗಳ ಕಾಲ ಓಡಿದ ಚಿತ್ರ ಇದಾಗಿತ್ತು. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಮತ್ತಷ್ಟು ಚಿತ್ರಕ್ಕೆ ಜೀವ ತುಂಬಿತ್ತು. ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಅವರು ನೀಡಿದ ಕೊಡುಗೆ ಅಪಾರ. ಅನೇಕ ನಟಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆಗು ಇವರು ಪಾತ್ರರಾಗಿದ್ದಾರೆ.  ಈಗ ರವಿ ಚಂದ್ರನ್ ಅವರಿಗೆ ಹೊಸ ಗೌರಾಣಾತ್ಮಕವಾದ ಬಿರುದಿಗೆ ಪಾತ್ರರಾಗಲಿದ್ದಾರೆ. ಮುಂದೆ ಓದಿ

ಕ್ರೇಜಿ ಸ್ಟಾರ್ ಗೆ ಹೊಸ ಗೌರವ

ವಿ ಚಂದ್ರನ್ ನಟ, ನಿರ್ದೇಶಕ, ನಿರ್ಮಾಪಕರಾಗಿಯು ಗುರುತಿಸಿಕೊಂಡಿದ್ದಾರೆ. ರವಿ ಚಂದ್ರನ್ ಅವರ ಚಿತ್ರಗಳು, ಚಿತ್ರದಲ್ಲಿ ಬರುವ ಹಾಡುಗಳು ಪ್ರೇಮಿಗಳಿಗೆ ರಸದೌತಣದ ಹಬ್ಬವಾಗಿತ್ತು. ಕ್ರೇಜಿ ಸ್ಟಾರ್ ಎನ್ನುವ ಬಿರುದನ್ನು ಇವರಿಗೆ ನೀಡಿದ್ದು, ಆನಂತರ ಇವರ ಸಿನಿಮಾಗಳು ಅಷ್ಟೊಂದು ಆಕರ್ಷಕವಾಗಿರದ ಕಾರಣದಿಂದಾಗಿ ಸಿನಿಮಾದಿಂದ ಸ್ವಲ್ಪ ದೂರ ಸರಿಯುತ್ತಾರೆ. ಈಗ ಬರುವ ಸಿನಿಮಾಗಳಲ್ಲಿ ಪೋಷಕ ನಟನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದು, ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಆದ್ದರಿಂದ ಇವರ ಸಾಧನೆಯನ್ನು ಗುರುತಿಸಿ ಡಾಕ್ಟ್ರೇಟ್ ಅನ್ನು ನೀಡುತ್ತಿದ್ದಾರೆ.

ಕ್ರೇಜಿ ಸ್ಟಾರ್ ಇನ್ಮೇಲೆ ಡಾ ರವಿ ಚಂದ್ರನ್

ರವಿ ಚಂದ್ರನ್ ಅವರು ತಮ್ಮ ಸಿನಿಮಾಗಾಗಿ ಮಾಡಿದ ಕೆಲಸಕ್ಕೆ ಈಗಾಗಲೆ ಹಲವಾರು ಪ್ರಶಸ್ತಿಗಳು ಸಂದಿವೆ. ಆದರೆ ಕನಸುಗಾರನಿಗೆ ಡಾಕ್ಟ್ರೇಟ್ ಗೌರವ ಸಿಗುತ್ತಿರುವುದು ಅಭಿಮಾನಿಗಳಿಗೆ ಬಹಳ ಸಂತಸ ಪಡುವ, ಸಂಭ್ರಮಿಸುವ ಕ್ಷಣ ಇದಾಗಿದೆ ಅಂತಾನೆ ಹೇಳಬಹುದಾಗಿದೆ. ವಿ ಸಿ ಎಂ ಆರ್ ವಿಶ್ವ ವಿದ್ಯಾಲಯದವರು 3-11-2019 ರಂದು ಕ್ರೇಜಿ ಸ್ಟಾರ್ ವಿ ರವಿ ಚಂದ್ರನ್ ಅವರಿಗೆ ಡಾಕ್ಟ್ರೇಟ್ ಅನ್ನು ಕೊಡುವುದಾಗಿ ತೀರ್ಮಾನಿಸಿದ್ದಾರೆ. ರವಿ ಚಂದ್ರನ್ ಅವರು ಇನ್ಮೇಲೆ ಡಾಕ್ಟರ್ ರವಿ ಚಂದ್ರನ್ ಎಂದು ಕರೆಸಿಕೊಳ್ಳುತ್ತಾರೆ.

ಹೊಸ ಟ್ರೆಂಡ್ ಅನ್ನು ರವಿ ಚಂದ್ರನ್ ಹುಟ್ಟು ಹಾಕಿದ್ದರು

ಸುಮಾರು 30 ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದು, ಯುವಪೀಳಿಗೆಗೆ ಹೊಸ ಟ್ರೆಂಡ್ ನ ಚಿತ್ರಗಳು ಕೊಟ್ಟಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಪ್ರತಿಯೊಬ್ಬರ ಬಾಯಲ್ಲಿ ರವಿ ಚಂದ್ರನ್ ಅವರ ಚಿತ್ರದ ಹಾಡುಗಳು ಸಲೀಸಾಗಿ ಬರುತ್ತಿದ್ದವು.

ಇನ್ನು ರವಿಚಂದ್ರನ್ ಅವರಿಗೆ ಜೊತೆಯಾದದ್ದು ನಾದ ಬ್ರಹ್ಮ ಹಂಸಲೇಖ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಚಿತ್ರಗಳು ಮತ್ತು ಹಾಡುಗಳು ಸೂಪರ್ ಹಿಟ್ ಆಗಿದ್ದವು.

LEAVE A REPLY

Please enter your comment!
Please enter your name here