ರವಿ ಬೆಳಗೆರೆ ಅವರು ಬರೆದಿರುವ ಪುಲ್ವಾಮಾ ದಾಳಿಯ ಪುಸ್ತಕದಲ್ಲಿ ಇರೋದಾದ್ರೂ ಏನು?

0
1127
ravi belagere

ಒಂದು ಕಥೆ, ಕವಿತೆ ಅಥವಾ ಪುಸ್ತಕ ಬರೆಯೋದು ಅಂದ್ರೆ ಅಷ್ಟು ಸುಲಭವಲ್ಲ. ಅದಕ್ಕೆ ಬಹಳ ಕಷ್ಟ ಪಡಬೇಕು. ಹೌದು. ಒಂದು ಚಿಕ್ಕ ವಸ್ತುವನ್ನ ಮುಂದಿಟ್ಟುಕೊಂಡು, ದೊಡ್ಡ ಕಥೆ ಬರೆಯುವವರು ನಮ್ಮಲ್ಲಿ ಹಲವರಿದ್ದಾರೆ. ಆ ಸಾಲಿಗೆ ನಮ್ಮ ಲೇಖಕ ಹಾಗೂ ಪತ್ರಕರ್ತರಾಗಿರುವ ರವಿ ಬೆಳಗೆರೆ ಅವರು ಸೇರುತ್ತಾರೆ. ನಿಜಕ್ಕೂ ಇವರಿಗಿರುವ ಕಲೆಗೆ ಎಲ್ಲರೂ ಮೆಚ್ಚಲೇ ಬೇಕು. ಯಾಕಂದ್ರೆ, ಲೆಕ್ಕಕ್ಕೆ ಇಲ್ಲದ ವಸ್ತುವಿಗೂ ಸಹ ಇವರು ಬೆಲೆ ಕೊಡುತ್ತಾರೆ. ಆ ವಸ್ತುವನ್ನು ಮುಂದಿಟ್ಟುಕೊಂಡು, ಒಂದು ದೊಡ್ಡ ಕಥೆಯನ್ನೇ ಸೃಷ್ಟಿಸುತ್ತಾರೆ. ಇವರು ಬರೆದಿರುವ ಪುಸ್ತಕಗಳು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಯಾಕಂದ್ರೆ ಓದುಗರ ಅಂತಾಳವನ್ನ ತಲುಪುವಂತೆ, ಇವರು ಕಥೆಯನ್ನ ಬರೆದಿರುತ್ತಾರೆ. ಹಾಗಾಗಿ, ಇವರ ಪುಸ್ತಕಗಳನ್ನ ಎಲ್ಲರೂ ಬಹಳಷ್ಟು ಇಷ್ಟಪಟ್ಟು, ಆಸಕ್ತಿಯಿಂದ ಓದುತ್ತಾರೆ.

ತಮ್ಮ ಪದಪುಂಜಗಳಲ್ಲಿ ಓದುಗರನ್ನ ಸೆಳೆಯುವ ಇವರು, ಹೆಚ್ಚಾಗಿ ಕೈಂ ಪುಸ್ತಕಗಳನ್ನ ಬರೆಯುತ್ತಾರೆ. ಒಬ್ಬ ಮನುಷ್ಯನಿಗೆ ಭೂಗತ ಲೋಕ ಅನ್ನೋದು ಹೇಗಿರುತ್ತೆ ಅಂತ ಗೊತ್ತಾಗಿದ್ದೇ, ಇವರ ಪುಸ್ತಕಗಳನ್ನ ಓದಿ. ಯಾಕಂದ್ರೆ, ಇವರು ಯಾವುದನ್ನೂ ಊಹೆ ಮಾಡಿ ಬರೆಯುವುದಿಲ್ಲ. ಅದನ್ನ ನೋಡಿ, ಕಣ್ಣಾರೆ ತಿಳಿದು ಪುಸ್ತಕ ಬರೆಯುತ್ತಾರೆ. ಹಾಗಾಗಿ ಇವರ ಕಥೆ ಓದುಗರ ಅಂತರಾಳವನ್ನ ತಲುಪುತ್ತದೆ. ಅದೇ ರೀತಿ ಇವರು ಈಗ ಮತ್ತೊಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕ ಬರೆಯಲು ಅವರು, ಘಟನಾ ಸ್ಥಳಕ್ಕೆ ಹೋಗಿ, ಪ್ರತಿಯೊಂದನ್ನು ಪರಿಶೀಲಿಸಿ ಈ ಪುಸ್ತಕವನ್ನ ಬರೆದಿದ್ದಾರೆ. ಹೌದು. ಈಗ ಅವರು ಬರೆದಿರುವ ಪುಸ್ತಕ, ಇಡೀ ದೇಶಕ್ಕೆ ಸಂಬಂಧಪಟ್ಟದಾಗಿದೆ. ಅದೇ ಪುಲ್ವಾಮಾ ದಾಳಿಯ ಬಗ್ಗೆ.

ಪುಲ್ವಾಮಾ ದಾಳಿಯ ಬಗ್ಗೆ ಸಿದ್ಧವಾದ ಪುಸ್ತಕ

ಫೆಬ್ರವರಿ ಹದಿನಾಲ್ಕನೇ ತಾರೀಖನ್ನ ನಿಜಕ್ಕೂ ಯಾರಿಂದಲೂ ಮರೆಯಲಾಗುವುದಿಲ್ಲ. ಯಾಕಂದ್ರೆ ಅಂದು ಭಾರತೀಯ ಸೇನೆಗೆ ಹಾಗೂ ಪುಲ್ವಾಮಾ ಉಗ್ರರಿಗೂ ನಡೆದ ಯುದ್ಧವಾಗಿತ್ತು. ನಂತರ ಸಣ್ಣ ಸುಳಿವನ್ನೂ ನೀಡದೆ, ನಮ್ಮ ಸೇನೆ ಅವರನ್ನ ಮಣ್ಣು ಮುಕ್ಕಿಸಿತ್ತು. ಅದನ್ನ ನಿಜಕ್ಕೂ ನಮ್ಮ ದೇಶದ ಯಾರೊಬ್ಬರೂ ಸಹ ಮರೆಯುವುದಿಲ್ಲ. ಇಂಥ ಒಂದು ಘಟನೆಯನ್ನ ರವಿ ಬೆಳಗೆರೆ ಅವರು ಪುಸ್ತಕವನ್ನಾಗಿ ಮಾಡಿ, ಅದನ್ನ ಬಿಡುಗಡೆಗೆ ಸಿದ್ಧಪಡಿಸುತ್ತಿದ್ದಾರೆ. ಹೌದು. ಅಂತ ಸಮಯದಲ್ಲಿ ಆ ಸ್ಥಳಕ್ಕೆ ಯಾರಿಂದಲೂ ಅಲ್ಲಿಗೆ ಹೋಗಲು ಆಗಿರುವುದಿಲ್ಲ. ಆದರೆ ಪತ್ರಕರ್ತ ಹಾಗೂ ಲೇಖಕ ರವಿ ಬೆಳಗೆರೆ ಅವರು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಘಟನಾ ಸ್ಥಳಕ್ಕೆ ಹೋಗಿದ್ದರು. ಹೌದು. ಪುಲ್ವಾಮಾ ದಾಳಿ ನಡೆದ ನಂತರ ಜಮ್ಮು-ಕಾಶ್ಮೀರಕ್ಕೆ ತೆರಳಿ, ಅಲ್ಲಿಂದಲೇ ವರದಿ ಮಾಡಿದವರು ಪತ್ರಕರ್ತ ರವಿ ಬೆಳಗೆರೆ. ಈಗ ಅದನ್ನ ಪುಸಕ್ತವನ್ನಾಗಿ ತಯಾರು ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿದ ರವಿ ಬೆಳಗೆರೆ

ಈ ಘಟನೆ ನಡೆದ ಕೂಡಲೇ, ರವಿ ಬೆಳಗೆರೆ ಅವರು ಪುಸ್ತಕ ಬರೆಯಬೇಕು ಅಂತ ನಿರ್ಧಾರ ಮಾಡಿದರು. ಆದ್ರೆ ಅವರಿಗೆ ಘಟನಾ ಸ್ಥಳಕ್ಕೆ ಹೋಗಿ, ಬರಬೇಕು ಎಂದು ಎನಿಸಿತು. ಹಾಗಾಗಿ ಅವರು, ಅಲ್ಲಿಗೆ ಹೋಗುವ ಮೊದಲು, ಎಲ್ಲರಿಗೂ ತಿಳಿಸಿದ್ದರು. ಹೌದು. ನಾನು ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ, ಅಲ್ಲಿಂದ ಹಿಂದಿರುಗಿ ಬಂದ ಕೂಡಲೇ ಪುಸ್ತಕ ಬರೆಯುವುದಾಗ ತಿಳಿಸಿದ್ದರು. ಹಾಗಾಗಿ ಅವರು ಬಂದ ಒಂದು ವಾರಕ್ಕೆ ಪುಸಕ್ತ ಎಲ್ಲರ ಕೈಗೂ ಸಿಗುತ್ತದೆ ಎಂದು ತಿಳಿದಿದ್ದರು. ಆದ್ರೆ ಅದೇ ಸಮಯಕ್ಕೆ ಕೊಂಚ ಬದಲಾವಣೆಯಾದ್ದರಿಂದ, ‘ಇಡ್ಲಿ ವಡ ಡೆಡ್ಲಿ ಮರ್ಡರ್’ ಪುಸ್ತಕ ಬರೆದು, ಬಿಡುಗಡೆ ಮಾಡಿದರು. ಅದಾದ ನಂತರ, ಪುಲ್ವಾಮಾ ಪುಸ್ತಕ ಬಿಡುಗಡೆಯಾಗುವುದಿಲ್ಲವೇನೋ ಎಂದು ಎಲ್ಲರೂ ತಿಳಿದಿದ್ದರು. ಆದ್ರೆ ಇದ್ದಕ್ಕಿದ್ದಂತೆ ಸಿನಿಮಾ ಬಿಡುಗಡೆ ಬಗ್ಗೆ ತಿಳಿಸಿದ್ದಾರೆ.

‘ಫ್ರಮ್ ಪುಲ್ವಾಮಾ’ ಬಿಡುಗಡೆಗೆ ಸಿದ್ಧವಾಗಿದೆ

ಪುಲ್ವಾಮಾ ಯುದ್ಧದಲ್ಲಿ ನಡೆದ ಇಂಚಿಂಚು ಕಥೆಯನ್ನ ಪುಸ್ತಕದ, ಮೂಲಕ ಜನರಿಗೆ ತಿಳಿಸಿಕೊಡಲು ರವಿ ಬೆಳಗೆರೆ ಅವರು ನಿರ್ಧರಿಸಿದ್ದಾರೆ. ಹಾಗಾಗಿ ಆ ಪುಸ್ತಕಕ್ಕೆ ‘ಫ್ರಮ್ ಪುಲ್ವಾಮಾ ಎಂಬ ಹೆಸರನ್ನ ಇಟ್ಟಿದ್ದಾರೆ. ಇನ್ನೂ ಈ ಪುಸ್ತಕವನ್ನ ಇದೇ ಜೂನ್ 9ರಂದು ತಮ್ಮ ಪತ್ರಿಕೆ ಕಚೇರಿಯಲ್ಲಿ ಸಂಜೆ ಐದು ಗಂಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಆತ್ಮೀಯರಿಗೆ ಮಾತ್ರ, ಪುಸ್ತಕದ ಕೆಲವು ಪ್ರತಿಗಳನ್ನ ನೀಡಿದ್ದಾರೆ. ಒಟ್ಟಿನಲ್ಲಿ ರವಿ ಬೆಳಗೆರೆ ಅವರ, ‘ಫ್ರಮ್ ಪುಲ್ವಾಮಾ’ ಪುಸ್ತಕಕ್ಕೆ ಓದುಗರು ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ರವಿ ಬೆಳಗೆರೆ ಅವರ ವಿಚಿತ್ರ ಆಸೆಗಳನ್ನ ಎಲ್ಲರೂ ಮೆಚ್ಚಲೇ ಬೇಕು. ಯಾಕಂದ್ರೆ ಕಥೆ ಬರೆಯುವುದಕ್ಕೋಸ್ಕರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪುಸ್ತಕ ಬರೆದಿದ್ದಾರೆ. ಇನ್ನೂ ಆ ಪುಸ್ತಕ ಬಿಡುಗಡೆಯವುದು ಮಾತ್ರ ಬಾಕಿ ಇದೆ

LEAVE A REPLY

Please enter your comment!
Please enter your name here