ಅಂದು ಶಂಕರ್ ನಾಗ್ ಅವರು ಹೇಳಿಕೊಟ್ಟಿದ್ದ ಪರಿಪಾಠವನ್ನು ಈಗಲೂ ಪಾಲಿಸುತ್ತಿದ್ದಾರೆ ಬಾಸ್ ರವಿ ಬೆಳಗೆರೆ

0
903

ನಾನೆ ಬಾಸು, ನಾನೆ ಬಿಗ್ಗೆಸ್ಟ್ ಬಾಸು ಹೌದು ಹೀಗಂತಹ ಹೇಳಿಕೊಂಡಿರುವುದು ಹಾಯ್ ಬೆಂಗಳೂರು ಪತ್ರಿಕೆಯ ಪತ್ರಕರ್ತ, ಚೀಫ್ ಎಡಿಟರ್ ರವಿ ಬೆಳಗೆರೆ. ಬಿಗ್ ಬಾಸ್ ಮನೆಯಲ್ಲಿ ತಂದೆ ತಾಯಿಯರ ಕುರಿತು ಮಾತನಾಡುವಂತಹ ವಿಶೇಷ ಟಾಸ್ಕ್ ಒಂದನ್ನು ಏರ್ಪಡಿಸಲಾಗಿತ್ತು. ಈ ವೇಳೆಯಲ್ಲಿ, ರವಿ ಬೆಳಗೆರೆ ಅವರ ತಾಯಿಯ ಕುರಿತು ಹಂಚಿಕೊಂಡಿದ್ದ ಪ್ರತಿಯೊಂದು ಸಂಗತಿ ಇಡೀ ಕರ್ನಾಟಕವನ್ನೆ ಭಾವುಕರನ್ನಾಗಿಸಿತ್ತು. ಮನೆಯಿಂದ ನಿರ್ಗಮಿಸುವ ಮುನ್ನ ರವಿ ಬೆಳಗೆರೆ ಅವರು ನಿಮಗೇನಾದರು ಬದುಕು ಬೇಡ ಅಂತ ಅನಿಸಿದರೆ ನನಗೆ ಒಂದು ಕರೆ ಮಾಡಿ ಎಂದು ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರನ್ನು ತಮ್ಮ ಮನೆಗೆ ಆಮಂತ್ರಿಸಿದ್ದರು.

ಅಂದು ಶಂಕರ್ ನಾಗ್ ಅವರು ಹೇಳಿಕೊಟ್ಟಿದ್ದ ಪಾಠ

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಆಸಕ್ತಿಕರವಾದ ಸಂಗತಿಗಳನ್ನು ಬಾಸ್ ರವಿ ಬೆಳಗೆರೆ ಅವರು ಹಂಚಿಕೊಳ್ಳುತ್ತಿದ್ದರು. ಇದರಿಂದ ವೀಕ್ಷಕರು ಸಹ ತಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಇವರು ಒಂದು ದೊಡ್ಡ ಗ್ರಂಥಾಲಯದ ಬಂಡಾರವೆ ಆಗಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಮನೆಯಲ್ಲಿ ಶಂಕರ್ ನಾಗ್ ಕುರಿತು ರವಿ ಬೆಳಗೆರೆ ಅವರು ಮಾತನಾಡಿರುವ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ, ಒಂದು ಸಂದರ್ಶನದಲ್ಲಿ ರವಿ ಬೆಳಗೆರೆ ಅವರು ಕರಾಟೆ ಕಿಂಗ್ ಜೊತೆ ಕಳೆದಿದ್ದ ಆ ಕ್ಷಣಗಳನ್ನು ಮತ್ತು ಶಂಕರ್ ನಾಗ್ ಅವರು ಅಂದು ಹೇಳಿಕೊಟ್ಟ ಪರಿಪಾಠವನ್ನು ಬೆಳಗೆರೆ ಅವರು ಇಂದಿಗೂ ಸಹ ಚಾಚು ತಪ್ಪದೆ ಪಾಲಿಸುತ್ತಿದ್ದಾರಂತೆ ಏನದು? ಮುಂದೆ ಓದಿ

ಇದನ್ನು ಬಾಸ್ ಬೆಳಗೆರೆ ಈಗಲೂ ಪಾಲಿಸುತ್ತಿದ್ದಾರೆ

ಒಂದು ದಿನ ರಾತ್ರಿ ಬೆಳಗೆರೆ ಅವರು ಒಂದು ಕತ್ತಲಾದ ಕೋಣೆಯಲ್ಲಿ ರಮ್ ತಂದುಕೊಂಡು ಕುಡಿದು ಹಾಗೆ ಸುಮ್ಮನೆ ಕುಳಿತುಕೊಂಡಿದ್ದರಂತೆ. ಅದ್ಯಾಕೋ ರಮ್ ಕುಡಿದದ್ದು ಸಾಲದಾಗಿದ್ದು ,ಆದರೂ ಸುಮ್ಮನೆ ಕುಳಿತಿದ್ದರು. ಆಗ ಕೋಣೆಯ ಬಾಗಿಲ ಸಪ್ಪಳ ಯಾರೋ ಜೋರಾಗಿ ಬಡಿದಂತೆ ಕೇಳಿಸಿತ್ತು. ಈ ಸಮಯದಲ್ಲಿ ಯಾರಿರಬಹುದೆಂದು ಕದವನ್ನು ತೆಗೆದು ನೋಡಿದರೆ ಶಂಕರ್ ನಾಗ್. ರವಿ ಬಾ ರಮ್ ತಂದಿದೀನಿ ಹಾಕೋಣ ಎಂದು ಶಂಕರ್ ನಾಗ್ ಹೇಳಿದ್ದು, ಇರು ಶಂಕರ್ ನಾನು ಟಾಯ್ಲೆಟ್ ಗೆ ಹೋಗಿ ಬರ್ತೀನಿ ಎಂದು ರವಿ ಬೆಳಗೆರೆ ಹೇಳಿದ್ದರಂತೆ. ಹೀಗೆ ಹೊಕ್ತಿಯಾ ಎಂದು ಶಂಕರ್ ನಾಗ್ ಅವರು ಕೇಳಿದಾಗ, ಅಲ್ಲೆಲ್ಲ ನೀರಿನ ವ್ಯವಸ್ಥೆ ಸರಿಯಾಗಿದೆ ಎಂದು ರವಿ ಬೆಳಗೆರೆ ಹೇಳಿದ್ದರು. ಹೆಯ್ಯ್ ಒಂದು ಪುಸ್ತಕ ಅಥವಾ ನ್ಯೂಸ್ ಪೇಪರ್ ತೆಗೆದುಕೊಂಡು ಹೋಗೋ ಎಂದು ಶಂಕರ್ ನಾಗ್ ಅವರು ಅಂದು ಸಲಹೆಯನ್ನು ನೀಡಿದ್ದರು.

ಅದು ರಹಸ್ಯವಾಗಿರಲಿ

ಅಂದು ಶಂಕರ್ ನಾಗ್ ಅವರು ಹೇಳಿದ ಪರಿಪಾಠವನ್ನು ರವಿ ಬೆಳಗೆರೆ ಅವರು ಇಂದಿಗೂ ಸಹ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಸ್ವತಃ ಈ ವಿಷಯವನ್ನು ರವಿ ಬೆಳಗೆರೆ ಅವರು ಇತ್ತೀಚಿಗಷ್ಟೆ ನಡೆದ ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲಿ ಹೋದರು ರವಿ ಬೆಳಗೆರೆ ಅವರು ಅಲ್ಲಿ ನಡೆದ ಘಟನೆಗಳನ್ನು ಅಕ್ಷರಗಳ ಸರಮಾಲೆ ಕಟ್ಟಿ ಓದುಗರ ಮುಂದೆ ಇಡುತ್ತಾರೆ.

ಬಿಗ್ ಬಾಸ್ ಮನೆಯ ಕುರಿತು ಪುಸ್ತಕ ಬರಲಿದೆಯಾ ಎಂದು ಕೇಳಿದಾಗ, ಅದು ರಹಸ್ಯವಾಗಿರಲಿ ಎಂದು ಬಾಸ್ ಬೆಳಗೆರೆ ಅವರು ಉತ್ತರಿಸಿದ್ದಾರೆ. ಆದರೆ ಗೌರಿ ಲಂಕೇಶ್ ಹತ್ಯೆ ಕುರಿತು ಪುಸ್ತಕವನ್ನು ಬರೆಯುತ್ತೇನೆ ಎಂದು ಅಕ್ಷರ ಬ್ರಹ್ಮ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here