ಮೂಷಕ ಗಣೇಶನಿಗೆ ಮಾತ್ರ ಸ್ವಂತವಾಗಿಲ್ಲ, ಈ ದೇವಿಗೂ ಸಹ ಇಲಿಗಳೇ ಸರ್ವಶ್ರೇಷ್ಠ. ಇಲಿಗಳ ದೇವಾಲಯ

0
868

ನಮ್ಮ ಹಿಂದೂ ಧರ್ಮದಲ್ಲಿ ದೇವರಿಗೆ ಅಪರಾಧ ಮನ್ನಣೆಯನ್ನು ನೀಡುತ್ತಾರೆ. ಯಾಕಂದ್ರೆ ಆ ಭಗವಂತನ ಅನುಮತಿಯಿಲ್ಲದೆ ಒಂದು ಹುಲ್ಲುಕಡ್ಡಿ ಕೂಡ ಅಲುಗಾಡುವುದಿಲ್ಲ ಎಂದು ಪ್ರತಿಯೊಬ್ಬರೂ ನಂಬಿದ್ದಾರೆ. ಅದರಂತೆಯೇ ಎಲ್ಲರು ಬದುಕುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ಗಲ್ಲಿಗೆ ಒಂದರಂತೆ ದೇವಾಲಯಗಳನ್ನು ಕಟ್ಟಿದ್ದಾರೆ. ಆದ್ರೆ ಕೆಲವು ದೇವಾಲಯಗಳು ಬಹಳಷ್ಟು ರೋಚಕವಾಗಿರುತ್ತವೆ. ಹೌದು. ನಮ್ಮಲ್ಲಿ ಸಾಮಾನ್ಯವಾಗಿ ಕೆಲವು ದೇವರನ್ನು ಪ್ರಾಣಿಗಳ ರೂಪದಲ್ಲಿಯೂ ಕಾಣುತ್ತೇವೆ. ಕೋತಿಯ ರೂಪದಲ್ಲಿ ಆಂಜನೇಯನನ್ನು ಪೂಜಿಸುತ್ತೇವೆ. ಅಲ್ಲದೆ ಹಾವನ್ನು, ನಾಗದೇವರು ಎಂದು ಪೂಜಿಸುತ್ತೇವೆ. ಇದೇ ರೀತಿ ಗಣೇಶನಿಗೂ ಸಹ ಅದರದ್ದೇ ಆದ ಒಂದು ವಾಹನವಿದೆ. ಅದೇ ಮೂಷಕ, ಅಂದ್ರೆ ಇಲಿ. ಈ ಇಲಿ ನೋಡೋಕೆ ಒಂದು ಸಣ್ಣ ಪ್ರಾಣಿಯಂತೆ ಕಾಣುತ್ತದೆ. ಆದ್ರೆ ಈ ಊರಿನಲ್ಲಿ ಮಾತ್ರ ಇಲಿಗೆ ಇರುವ ಪ್ರಾಧ್ಯಾನ್ಯತೆ ಬೇರೆ ಯಾವುದಕ್ಕೂ ಇಲ್ಲ.

ಈ ದೇವಾಲಯದಲ್ಲಿ ಇಲಿಗಳೇ ಸರ್ವಶ್ರೇಷ್ಠ

ದೇವಾಲಯದಲ್ಲಿ ಸಮಾನ್ಯವಾಗಿ ದೇವರು ಇರುತ್ತಾನೆ. ಜೊತೆಗೆ ದೇವರ ಮುಂದೆ ನಿಂತು ಬೇಡಿಕೊಳ್ಳುವ ಭಕ್ತಾಧಿಗಳು ಕಾಣುತ್ತಾರೆ. ಆದ್ರೆ ಇಲ್ಲಿ ಭಕ್ತರಿಗಿಂತ ಹೆಚ್ಚಾಗಿ ಇಲಿಗಳೇ ಕಾಣುತ್ತವೆ. ಇನ್ನುಈ ದೇವಾಲಯವಿರುವುದು ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ಎಂಬಲ್ಲಿ ಇದೆ. ಇದು ಕರ್ಣಿ ಮಾತಾಗೆ ಮೀಸಲಾದ ದೇವಾಲಯವಾಗಿದ್ದು, ಇದನ್ನು ಇಲಿಗಳ ದೇವಸ್ಥಾನ ಎಂತಲೂ ಕರೆಯುತ್ತಾರೆ. ಪ್ರಸ್ತುತ, 20,000 ಕ್ಕೂ ಅಧಿಕ ಇಲಿಗಳು ಈ ದೇವಸ್ಥಾನದಲ್ಲಿ ನೆಲೆಸಿದ್ದು, ಇವುಗಳ ದರ್ಶನ ಪಡೆಯಲು ದೂರದ ಪಟ್ಟಣಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ಜಗತ್ತಿನ ವಿವಿಧೆಡೆಯಿಂದಲೂ ಸಹ ಪ್ರವಾಸಿಗರು ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಶ್ವೇತ ವರ್ಣದ ಇಲಿಗಳು ಕಂಡರೆ ಬಹಳ ಅದೃಷ್ಟ

ಇನ್ನು ಸಾಮಾನ್ಯವಾಗಿ ಇಲಿಗಳಲ್ಲಿ ಎರಡು ಬಣ್ಣವಿರುತ್ತದೆ. ಆದರೆ ಅದರಲ್ಲಿ ಬಿಳಿ ಬಣ್ಣದ ಇಲಿ ಬಹಳ ವಿಶೇಷ. ಹೌದು. ಈ ದೇವಸ್ಥಾನದಲ್ಲೂ ಸಹ ಶ್ವೇತ ವರ್ಣದ ಇಲಿಗಳಿಗೆ ಬಹಳ ಮಹತ್ವ ನೀಡುತ್ತಾರೆ. ಯಾಕಂದ್ರೆ ಇಲ್ಲಿನ ಪುರಾಣದ ಪ್ರಕಾರ ಇಲ್ಲಿಗೆ ಬರುವ ಭಕ್ತರು ಶ್ವೇತ ವರ್ಣದ ಇಲಿಯನ್ನು ನೋಡಿದರೆ, ಅವರಿಗೆ ಶುಭ ಸೂಚನೆ ಅನ್ನೋದು ಸಿಗುತ್ತದಂತೆ. ಹಾಗಾಗಿ ಇಲ್ಲಿ ಶ್ವೇತ ವರ್ಣದ ಇಲಿಗಳು ಸಹ ಇವೆ. ಆದರೆ ಈ ಬಿಳಿ ಬಣ್ಣದ ಇಲಿಗಳು ಎಲ್ಲರ ಕಣ್ಣಿಗೂ ಕಾಣುವುದಿಲ್ಲ. ಬದಲಿಗೆ ಯಾರಿಗೆ ಒಳ್ಳೆಯ ಸೂಚನೆ ನೀಡಬೇಕೆಂದು ದೇವಿ ತಿಳಿದಿರುತ್ತಾಳೋ ಅಂಥವರ ಕಣ್ಣಿಗೆ ಮಾತ್ರ ಈ ಶ್ವೇತ ವರ್ಣದ ಇಲಿಗಳು ಕಾಣುತ್ತವೆ. ಇನ್ನು ಈ ಇಲಿಗೆ ಯಾರ ಕಣ್ಣಿಗೆ ಕಾಣಬೇಕೋ ಅವರ ಕಣ್ಣಿಗೆ ಕಾಣಿಸಿ, ನಂತರ ಅಲ್ಲಿಂದ ಮಾಯವಾಗುತ್ತದೆಯಂತೆ. ಮತ್ಯಾರ ಕಣ್ಣಿಗೆ ಕಾಣಿಸುವುದಿಲ್ಲವಂತೆ.

ದೇವಾಲಯದ ಇತಿಹಾಸ

ಕರಣಿ ಮಾತಾ, ಚರಣ್ ಜಾತಿಯಲ್ಲಿ ಜನಿಸಿದ ಒಬ್ಬ ಹಿಂದು ತಪಸ್ವಿಣಿಯಾಗಿದ್ದು ದುರ್ಗಾ ಮಾತೆಯ ಅವತಾರವೆಂದು ಆಕೆಯ ಭಕ್ತರ ಅಚಲವಾದ ನಂಬಿಕೆ. ಜೋಧಪುರ್ ಹಾಗು ಬಿಕಾನೇರ್ ರಾಜವಂಶಸ್ಥರ ಅಧಿಕೃತ ದೇವತೆಯಾಗಿರುವ ಕರಣಿ ಮಾತಾ ಸುಮಾರು 151 ವರ್ಷಗಳ ಕಾಲ ಜೀವಿಸಿದ್ದಳೆಂದು ಹೇಳಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ, ಕಿಪೋಜಿ ಚರಣ್ ಎಂಬುವನ ಪತ್ನಿಯಾಗಿದ್ದ ಕರಣಿ ಮಾತೆಯು ಸಮಯ ಸರಿದಂತೆ ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದುತ್ತಾರೆ. ಆದರೆ ಪತಿಯ ಸಂಸಾರ ಜೀವನಕ್ಕೆ ಬಾಧೆ ಬರದಂತೆ ತನ್ನ ತಂಗಿಯನ್ನೆ ಪತಿಯೊಂದಿಗೆ ವಿವಾಹ ಮಾಡಿ ದೇವರ ಧ್ಯಾನದಲ್ಲೆ ತನ್ನ ಜೀವನವನ್ನು ಕಳೆಯುತ್ತಾರೆ. ಇನ್ನು ಪ್ರಸ್ತುತ ಕರಣಿ ಮಾತಾಗೆ ಸಮರ್ಪಿತವಾದ ಎರಡು ದೇವಾಲಯಗಳಿದ್ದು ಒಂದು ದೇಶ್ನೋಕ್ ನಲ್ಲಿದ್ದು ಇನ್ನೊಂದು ಉದೈಪುರ್ ನ ಮಚ್ಲಾ ಬೆಟ್ಟದಲ್ಲಿರುವ ಶ್ರೀ ಮನ್ಷಪೂರ್ಣ ಕರಣಿ ಮಾತಾ ದೇವಾಲಯವಾಗಿದೆ.

ಒಟ್ಟಿನಲ್ಲಿ ಪ್ರಾಣಿಗಳ ರೂಪದಲ್ಲಿಯೇ ನಾವು ಕೆಲವು ದೇವರನ್ನು ಕಾಣುತ್ತಿದ್ದೇವೆ. ಆದರೆ ಮೂಷಕ, ಗಣೇಶನ ವಾಹನ. ಆದ್ರೆ ಇಲ್ಲಿ ಒಂದು ಹೆಣ್ಣು ದೇವಿಯ ದೇವಾಲಯದಲ್ಲಿ ಹೆಚ್ಚು ಪ್ರಮುಖವಾಗಿರುವುದು ಆಶ್ಚರ್ಯ. ಜೊತೆಗೆ ಇಲಿಗಳಿಗೆ ಅಲ್ಲಿ ಅಷ್ಟೊಂದು ಪ್ರಾಧಾನ್ಯತೆ ನೀಡುವುದು ಸಹ ಬಹಳ ವಿಶೇಷವಾಗಿದೆ.

 

LEAVE A REPLY

Please enter your comment!
Please enter your name here