ರಶ್ಮಿಕಾಗೆ ಅಭಿಮಾನಿಗಳಿಂದ ದೇವಾಲಯ ನಿರ್ಮಾಣವಾಗಲಿದೆಯಾ?

0
602
rashmika mandanna

ಸಿನಿಮಾ ಕಲಾವಿದರು ಅಂದ್ರೆ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನ ನಟಿಯರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರೋರು ಅಂದ್ರೆ ಅದು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಹೌದು. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎಲ್ಲರ ಮನಗೆದ್ದಿದ್ದ ರಶ್ಮಿಕಾ, ಈಗ ಕನ್ನಡದ ವಿಚಾರವಾಗಿ ಎಲ್ಲರಿಂದ ಆರೋಪಿತರಾಗಿದ್ದಾರೆ. ಹೌದು. ರಶ್ಮಿಕಾ ಯಾವಾಗ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದರೋ, ಆಗಿಂದ ಕನ್ನಡಿಗರ ಬಾಯಿಗೆ ಸಿಲುಕಿದ್ದಾರೆ. ಅಲ್ಲದೆ ರಶ್ಮಿಕಾ ಅವರ ಸಿನಿಮಾಗಳು ಯಾವುದೇ ಕಾರಣಕ್ಕೂ ತೆರೆ ಕಾಣಬಾರದು ಎಂದು ಚಲನಚಿತ್ರ ಮಂಡಳಿಗೆ ದೂರು ನೀಡಿದ್ದರು. ಈ ರೀತಿ ರಶ್ಮಿಕಾ ಒಂದಲ್ಲಾ ಒಂದು ಸುದ್ದಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈಗ ರಶ್ಮಿಕಾ ವಿಚಾರವಾಗಿ ಮತ್ತೊಂದು ಸುದ್ದಿ ಹೊರ ಬಿದ್ದಿದ್ದೆ. ಹೌದು. ರಶ್ಮಿಕಾಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟುತ್ತಾರಾ? ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ರಶ್ಮಿಕಾಗಾಗಿ ನಿರ್ಮಾಣವಾಗುತ್ತಾ ದೇವಾಲಯ?

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಗೆ ಸಿಕ್ಕಾಪಟ್ಟೆ ಅಭಿಮಾನಿಗಳಾಗಿದ್ದಾರೆ. ಅದು ಅಲ್ಲದೆ, ರಶ್ಮಿಕಾ ಯಾವಾಗ ದಕ್ಷಿಣ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟರೋ ಆಗಿಂದ ಅಂತೂ ಕೇಳೋದೇ ಬೇಡ. ಸಾಲು ಸಲು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಕರ್ನಾಟಕದ ಕ್ರಶ್ ಎನ್ನುವ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಆದ್ರೆ ಇವರಿಗೆ ಅಭಿಮಾನಿಗಳ ಮನಸ್ಸಲ್ಲಿ ಆಳವಾಗಿ ಉಳಿಯಬೇಕಂತೆ. ಹೌದು. ಚಿತ್ರರಂಗದಲ್ಲಿ ನಟಿಸುವುದು ದೊಡ್ಡ ವಿಷಯವಲ್ಲ. ಆದ್ರೆ ಅಭಿಮಾನಿಗಳ ಮನಸ್ಸಲ್ಲಿ ಆಳವಾಗಿ ಉಳಿಯಬೇಕು. ಅವರು ಎಂದಿಗೂ ನಮ್ಮನ್ನು ಮರೆಯಬಾರದು ಆ ರೀತಿ ನಾವು ಇರಬೇಕು ಎಂದು ಹೇಳಿದ್ದಾರೆ. ಜೊತೆಗೆ ಇನ್ನೊಂದು ಮಾತನ್ನು ಕೂಡ ಹೇಳಿದ್ದಾರೆ. ಹೌದು. ಒಂದು ಕಾಲದಲ್ಲಿ ಅಭಿಮಾನಿಗಳು ನಟಿ ಖುಷ್ಬುಗಾಗಿ ದೇವಾಲಯ ಕಟ್ಟಿದ್ದರ ಬಗ್ಗೆಯೂ ಸಹ ಮಾತಾಡಿದ್ದಾರೆ.

rashmika hair style

ಸ್ಮರಣೀಯ ಪ್ರಾಜೆಕ್ಟ್ ಮೂಲಕ ಜನರಲ್ಲಿ ಶಾಶ್ವತವಾಗಿ ನೆಲೆಸಿರಬೇಕು

ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹೌದು. ಸಂದರ್ಶನವೊಂದರಲ್ಲಿ ಮಾತನಾಡಿದ ಕಿರಿಕ್ ಸುಂದರಿ ಹಿರಿಯ ನಟಿ ಖುಷ್ಬು ಅವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬರಿ ಪ್ರಸ್ತಾಪ ಮಾಡಿದಲ್ಲ ಖುಷ್ಬುಗಾಗಿ ದೇವಸ್ಥಾನ ಕಟ್ಟಿಸಿರುವ ಬಗ್ಗೆಯು ಹೇಳುತ್ತಾ ತಮ್ಮ ಆಸೆಯನ್ನು ಬಹಿರಂಗ ಪಡಿಸಿದ್ದಾರೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆ ನಟಿ ಖುಷ್ಬು ಅವರ ಬಗ್ಗೆ ಹೇಳಿದ್ರು. ಅವರ ನಟನೆಗೆ ಮನಸೋತ ಅಭಿಮಾನಿಗಳು ಅವರಿಗಾಗಿ ದೇವಸ್ಥಾನ ಕಟ್ಟಿದ್ರಂತೆ. ಹಾಗಾಗಿ ನನಗೂ ಕೂಡ ಸ್ಮರಣೀಯ ಪ್ರಾಜೆಕ್ಟ್ ಮೂಲಕ ಜನರಲ್ಲಿ ಶಾಶ್ವತವಾಗಿ ನೆಲೆಸಿರಬೇಕು ಎನ್ನುವ ಆಸೆ ಇದೆ” ಎಂದು ಹೇಳಿಕೊಂಡಿದ್ದಾರೆ.

ವಿವಾದಗಳ ಸುಳಿಯಲ್ಲಿ ಸಿಲುಕಿರುವ ರಶ್ಮಿಕಾ

ಸಂದರ್ಶನದಲ್ಲಿ ಈ ರೀತಿ ರಶ್ಮಿಕಾ ಖುಷ್ಬು ಅವರಿಗೆ ದೇವಾಲಯ ಕಟ್ಟಿರುವುದರ ಬಗ್ಗೆ ಹೇಳಿ, ನಾನು ಕೂಡ ಅಭಿಮಾನಿಗಳ ಮನಸಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದು ಹೇಳಿದ್ದಾರೆ. ಆದ್ರೆ ನೋಡಿದವರಿಗೆ ಮಾತ್ರ ಇವರು ಹೇಳಿರುವುದು ದೇವಾಲಯ ಕಟ್ಟಿಸುವಂತೆ ಆಗಿದೆ ಎಂದು ತಿಳಿಸುತ್ತಿದ್ದಾರೆ. ಹೌದು. ನನಗು ಕೂಡ ದೇವಾಲಯ ನಿರ್ಮಾಣ ಮಾಡಿ ಎಂದು ಕೇಳುವಂತೆ ಇವರು ಮಾತನಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರಂತೆ. ಆದ್ರೆ ರಶ್ಮಿಕಾ ಅಭಿಮಾನಿಗಳ ಮನಸಲ್ಲಿ ಆಳವಾಗಿ ಹಾಗು ಶಾಶ್ವತವಾಗಿ ಉಳಿಯಬೇಕು ಎಂದು ಅಂದುಕೊಂಡಿದ್ದಾರೆ. ಆದ್ರೆ ಸದ್ಯಕ್ಕಂತೂ ಅವರ ಕನ್ನಡಾಭಿಮಾನಿಗಳು ಮಾತ್ರ ಅವರ ಮೇಲೆ ಕಿಡಿಕಾರುತ್ತಿದ್ದಾರೆ. ಹೌದು. ನಮ್ಮ ನಾಡಿನಲ್ಲಿ ಜನಿಸಿ, ಕನ್ನಡ ಮಾತನಾಡಲು ಬರುವುದಿಲ್ಲ ಎಂದು ರಶ್ಮಿಕಾ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹೀಗಿರುವಾಗ ರಶ್ಮಿಕಾ ಅಭಿಮಾನಿಗಳ ಮನಸಲ್ಲಿ ಎಷ್ಟರ ಮಟ್ಟಿಗೆ ಶಾಶ್ವತವಾಗಿ ಉಳಿಯುತ್ತಾರೆ ಅನ್ನೋದು ಗೊಂದಲವಾಗಿದೆ.

ಒಟ್ಟಿನಲ್ಲಿ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದು ಆಸೆ ಪಟ್ಟಿದ್ದಾರೆ. ಆದ್ರೆ ಈಗಾಗಲೇ ರಶ್ಮಿಕಾ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡಾಭಿಮಾನಿಗಳ ಮನಸ್ಸನ್ನು ರಶ್ಮಿಕಾ ಎಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here