ಟ್ರೋಲ್ ಮಾಡುವವರಿಗೆ ಇನ್ಮುಂದೆ ನಾನು ಏನು ಎಂಬುದು ತಿಳಿಯಲಿದೆ – ರಶ್ಮಿಕಾ

0
525
rashmika mandanna

ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಸದಾಕಾಲ ಅವರ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಯಾಕಂದ್ರೆ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕ್ ಮಾಡಿಕೊಳ್ಳುವುದು ಅಥವಾ ಅಭಿಮಾನಿಗಳಿಗೆ ಬೇಸರವಾಗುವಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಹಾಗಾಗಿ ಅಭಿಮಾನಿಗಳು ರಶ್ಮಿಕಾ ಅಭಿಮಾನಿಗಳು ರಶ್ಮಿಕಾ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಆದ್ರೆ ಇತ್ತೀಚಿಗೆ ರಶ್ಮಿಕಾ ಹೆಚ್ಚು ಟ್ರೋಲಿಗರ ಬಾಯಿಗೆ ಆಹಾರವಾಗುತ್ತಿರುತ್ತಾರೆ. ಹೌದು. ರಶ್ಮಿಕಾ ಯಾವಾಗ ಕಿರಿಕ್ ಮಾಡಿಕೊಂಡರೋ ಆಗಿಂದ ಅವರು ಏನೇ ಮಾಡಿದರು ಅದು ಸುದ್ದಿಯಾಗುತ್ತಿದೆ. ಜೊತೆಗೆ ಟ್ರೋಲ್ ಗೆ ಹೆಚ್ಚು ಒಳಗಾಗುತ್ತಿದ್ದಾರೆ. ಆದ್ರೆ ಈಗ ಟ್ರೋಲ್ ಮಾಡುವವರಿಗೆ ಹೇಗೆ ಉತ್ತರ ನೀಡಬೇಕೆಂದು ನಾನು ಕಲಿತುಕೊಂಡಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಟ್ರೋಲಿಗರಿಗೆ ತಕ್ಕ ಉತ್ತರ ನೀಡಲು ಕಲಿತಿದ್ದೇನೆ 

ಕನ್ನಡ ಮಾತನಾಡಲು ಕಷ್ಟ ಎಂದು ರಶ್ಮಿಕಾ ಯಾವಾಗ ಹೇಳಿದರೋ ಆಗಿಂದ ರಶ್ಮಿಕಾ ಏನೇ ಮಾಡಿದರು ಅದು ಸುದ್ದಿಯಾಗುತ್ತಿದೆ. ಹಾಗಾಗಿ ಟ್ರೋಲಿಗರು ಅವರ ಸಣ್ಣ ಫೋಟೋ ಸಿಕ್ಕಿದರು ಅದನ್ನು ಟ್ರೋಲ್ ಮಾಡುತ್ತಿದ್ದಾರೆ. ಇದರಿಂದ ಇಷ್ಟು ದಿನ ರಶ್ಮಿಕಾ ಬಹಳ ಬೇಸರವಾಗಿದ್ದರಂತೆ. ಯಾಕಂದ್ರೆ ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲವಂತೆ. ಆದ್ರೆ ಈಗ ಎಲ್ಲವನ್ನು ಎದುರಿಸುವ ಧೈರ್ಯವನ್ನು ನಾನು ಕಲಿತ್ತಿದ್ದೇನೆ. ಟ್ರೋಲ್ ಮಾಡುವವರಿಗೆ ಇನ್ಮುಂದೆ ತಮ್ಮ ಉತ್ತರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ ಯಾರು ಮಾತನಾಡಬಾರದು

ಇನ್ನು ಟ್ರೋಲ್ ಮಾಡುವವರ ಬಗ್ಗೆ ತಮ್ಮ ಅನಿಸಿಕೆ ಹೇಳುವಾಗ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ. ಹೌದು. ಸಿನಿಮಾ ಕಾಲವಿದರು ಅಂದ್ಮೇಲೆ ಟ್ರೋಲ್ ಗೆ ಒಳಗಾಗುವುದು ಕಾಮನ್. ಆದ್ರೆ ಅದು ಸಿನಿಮಾ ವಿಚಾರವಾಗಿ ಮಾತ್ರ ಇರಬೇಕು. ಹೌದು. ಜನರು ನನ್ನ ಸಿನಿಮಾ ವಿಚಾರವಾಗಿ ಟ್ರೋಲ್ ಮಾಡಲಿ, ನನಗೇನು ಅಡ್ಡಿ ಇಲ್ಲ. ಆದ್ರೆ ನನ್ನ ವೈಯಕ್ತಿಕ ವಿಚಾರವಾಗಿ ಯಾರೇ ಮಾತನಾಡಿದರು ಸರಿ ಇರುವುದಿಲ್ಲ. ಯಾಕಂದ್ರೆ ಎಲ್ಲರಿಗು ಅವರ ಜೀವನದ ಬಗ್ಗೆ ಗೊತ್ತಿರುತ್ತೆ. ಹೀಗಿರುವಾಗ ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಬಾರದು. ಸಿನಿಮಾ ಬಗ್ಗೆ ಹೇಳುತ್ತೀರಾ, ಹೇಳು ಕೇಳುತ್ತೇನೆ. ಅದನ್ನು ಬಿಟ್ಟು ನನ್ನ ವೈಯಕ್ತಿಕ ವಿಚಾರಕ್ಕೆ ಬಂದ್ರೆ, ಯಾವುದು ಸರಿ ಇರುವುದಿಲ್ಲ ಎಂದು ಹೇಳಿದ್ದಾರಂತೆ.

 

ಸಹ ಕಲಾವಿದರ ಸಲಹೆ ಪಡೆದಿದ್ದ ರಶ್ಮಿಕಾ

ಇನ್ನು ರಶ್ಮಿಕಾ ಟ್ರೋಲ್ ವಿಚಾರವಾಗಿ ತನ್ನ ಸಹ ಕಲಾವಿದರ ಸಲಹೆ ಪಡೆದಿದ್ದರಂತೆ. ಹೌದು. ಪ್ರಾರಂಭದಲ್ಲಿ ಈ ರೀತಿ ಟ್ರೋಲ್ ಗೆ ಒಳಗಾದಾಗ ರಶ್ಮಿಕಾಗೆ ಬಹಳಷ್ಟು ಬೇಸರವಾಗಿತ್ತಂತೆ. ಆಗ ತನ್ನ ಸಹ ಕಾಲವಿದರ ಬಳಿ ಈ ಬಗ್ಗೆ ಕೇಳಿದರಂತೆ. ಆಗ ಅವರು ಕೆಲವು ಸಲಹೆಗಳನ್ನು ನೀಡಿದರಂತೆ. ಹೌದು. ಕಾಲವಿದರು ಅಂದ್ಮೇಲೆ ಈ ರೀತಿ ಟ್ರೋಲ್ ಗೆ ಒಳಗಾಗವುದು ಕಾಮನ್. ಆದ್ರೆ ನಾವು ಯಾವುದನ್ನು ನಮ್ಮ ಮನಸ್ಸಿಗೆ ತೆದುಕೊಳ್ಳಬಾರದು. ನಾವು ಯಾವುದೇ ರೀತಿ ಪ್ರತಿಕ್ರಿಯೆ ನೀಡಬಾರದು. ಆಗ ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದರಂತೆ. ಆದರೆ ರಶ್ಮಿಕಾಗೆ ಯಾವುದನ್ನು ಸಹಿಸೋಕೆ ಆಗುತ್ತಿಲ್ಲವಂತೆ. ಹಾಗಾಗಿ ತಕ್ಕ ಉತ್ತರವನ್ನು ನೀಡಲು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಭಾರತದ ನಟಿಯರಲ್ಲಿ ಅತಿ ಹೆಚ್ಚು ಟ್ರೋಲಿಗರ ಬಾಯಿಗೆ ಆಹಾರವಾದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ. ಹಾಗಾಗಿ ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದ ರಶ್ಮಿಕಾ ಈಗ ತಮ್ಮ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರಂತೆ.

LEAVE A REPLY

Please enter your comment!
Please enter your name here