ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದರ ಮೋಹಕ ತಾರೆ?

0
721
ramya maduve

ಸ್ಯಾಂಡಲ್ ವುಡ್ ನಲ್ಲಿ ಎಷ್ಟೇ ನಾಯಕಿಯರು ಬಂದರು, ಎಲ್ಲರಿಗು ರಮ್ಯಾ ಅಂದ್ರೆ ತುಂಬಾ ಇಷ್ಟ. ಹೌದು. ಸ್ಯಾಂಡಲ್ ವುಡ್ ಕ್ವೀನ್ ಆಗಿರುವ ಮೋಹಕ ತಾರೆ ತಮ್ಮ ೧೦ ವರ್ಷದ ಸಿನಿ ಪಯಣದಲ್ಲಿ ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಸ್ಯಾಂಡಲ್ ವುಡ್ ನಲ್ಲಿ ಅಷ್ಟೆಲ್ಲಾ ಮಿಂಚಿದ ರಮ್ಯಾ ಇದ್ದಕ್ಕಿದ್ದಂತೆ ಸಿನಿಮಾ ರಂಗ ತೊರೆದು, ರಾಜಕೀಯ ಜೀವನಕ್ಕೆ ಕಾಲಿಡುತ್ತಾರೆ. ನಂತರ ಅವರ ಮದುವೆ ಅನ್ನೋ ವಿಚಾರ ಕೇಳಿಬರುತ್ತದೆ. ಆದ್ರೆ ಅದು ಆಗ ಅಷ್ಟಕ್ಕೇ ನಿಲ್ಲುತ್ತದೆ. ಆದ್ರೆ ಈಗ ಮತ್ತೆ ಅವರ ಮದುವೆ ವಿಚಾರ ಸದ್ದು ಮಾಡುತ್ತಿದೆ. ಹೌದು. ರಮ್ಯಾ ಈ ವರ್ಷ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಹೌದು. ಈಗಾಗಲೇ ಕೆಲವು ಮೂಲಗಳಿಂದ ರಮ್ಯಾ ಮದುವೆಯಾಗುತ್ತಿರುವ ವಿಚಾರ ಎಲ್ಲರಿಗು ತಿಳಿದುಬಂದಿದೆ. ಆದ್ರೆ ಈ ಬಗ್ಗೆ ರಮ್ಯಾ ಮಾತ್ರ ಅಧಿಕೃತ ಘೋಷಣೆ ಮಾಡಿಲ್ಲ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ ರಮ್ಯಾ?

ಚಂದನವನದಲ್ಲಿ ಮೋಹಕ ತಾರೆಯಾಗಿ ಮಿಂಚಿದ ರಮ್ಯಾ ಸಿನಿಮಾ ಕ್ಷೇತ್ರ ತೊರೆದಿದ್ದು, ಎಲ್ಲರಿಗು ಬೇಸರದ ವಿಷಯವಾಗಿತ್ತು. ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರಲಿ ಅಂತ ಈಗಲೂ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಆದ್ರೆ ರಮ್ಯಾ ಸದ್ಯಕ್ಕೆ ಸಿನಿಮಾ ಬಗ್ಗೆ ಯೋಚಿಸಿಲ್ಲ. ಆದ್ರೆ ಸದ್ಯಕ್ಕೆ ಮದುವೆ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರಂತೆ. ಹೌದು. ತಮ್ಮ ಬಹುಕಾಲದ ಗೆಳೆಯನಾದ ರಾಫೆಲ್ ಜೊತೆ ಮದುವೆ ವಿಚಾರ ನಡೆಯುತ್ತಿದೆಯಂತೆ. ಈ ಮೊದಲು ಕೂಡ ರಮ್ಯಾ ಮದುವೆ ವಿಚಾರ ಕೇಳಿ, ಅಷ್ಟಕ್ಕೇ ಸುಮ್ಮನಾಗಿತ್ತು. ಆದ್ರೆ ಅದೇ ಸಮಯದಲ್ಲಿ ರಮ್ಯಾ ತಾಯಿ ರಂಜಿತಾ ಅವರು ಮುಂದಿನ ವರ್ಷದಲ್ಲಿ ರಮ್ಯಾ ಮದುವೆ ನಡೆದೇ ನಡೆಯುತ್ತದೆ ಎಂದು ಹೇಳಿದ್ದರು. ಅದರಂತೆ ಈಗ ಮದುವೆ ತಯಾರಿ ನಡೆಯುತ್ತಿದೆಯಂತೆ.

ತಾಯಿಯ ಮಾತಿಗೆ ಒಪ್ಪಿಗೆ ನೀಡಿದ ರಮ್ಯಾ

ಇನ್ನು ರಮ್ಯಾ ಮದುವೆಯಾಗುವುದಾಗಿ ಕಳೆದ ವರ್ಷವೇ ತಿಳಿಸಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಮದುವೆ ನಡೆಯಲು ಆಗಲಿಲ್ಲ ಎಂದು ಅವರ ತಾಯಿ ಹೇಳಿದ್ದರು. ಆದ್ರೆ ಈ ವರ್ಷ ನನ್ನ ಮಗಳ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ. ಹೌದು. 37 ವರ್ಷದ ಮೋಹಕ ತಾರೆ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುವ ಎಲ್ಲ ಸಾಧ್ಯತೆ ಇದೆ. ಅಲ್ಲದೆ ತಮ್ಮ ಬಹುಕಾಲದ ಗೆಳೆಯನೊಂದಿಗೆ ಮದುವೆಯಾಗುತ್ತಿರೋದು ಅವರಿಗೆ ಎಲ್ಲಕ್ಕಿಂತ ಸಂತಸದ ವಿಷಯವಾಗಿದೆಯಂತೆ. ಹೌದು. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​ ಹಾಗು ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ. ಜೊತೆಗೆ ರಮ್ಯಾ ತಮ್ಮ ತಾಯಿಗೆ ಮಾತು ಕೊಟ್ಟಿದ್ದರಂತೆ. ಈ ವರ್ಷ ತಾನು ಮದುವೆ ಆಗುತ್ತೇನೆ ಎಂದು ಹೇಳಿದ್ದರಂತೆ. ಅದರಂತೆ ತಮ್ಮ ತಾಯಿಯ ಮಾತಿಗೆ ಬೆಲೆ ಕೊಟ್ಟು, ಮದುವೆಗೆ ಸಿದ್ಧರಾಗುತ್ತಿದ್ದಾರಂತೆ.

ಸಿನಿಮಾ ಅಥವಾ ರಾಜಕೀಯ?

ರಮ್ಯಾ ಅವರಿಗೆ ಈಗಾಗಲೇ ಸಿನಿಮಾ ಹಾಗು ರಾಜಕೀಯ, ಎರಡರ ಅನುಭವವೂ ಇದೆ. ಹೌದು. ಅಭಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ರಮ್ಯಾ, 10 ವರ್ಷ ಸಿನಿಮಾ ಕ್ಷೇತ್ರದಲ್ಲಿ ದುಡಿದು, ನಂತರ ರಾಜಕೀಯಕ್ಕೆ ಲಗ್ಗೆ ಇಟ್ಟರು. ಹೌದು. 2013ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ ಗೆ ಪ್ರವೇಶಿಸಿದ್ದರು. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡರು. ಅಲ್ಲಿಂದ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಉಸ್ತುವಾರಿ ಪಡೆದರು. ಆದ್ರೆ ನಂತರ ಅದಕ್ಕೂ ಬ್ರೇಕ್ ಹಾಕಿದರು. ಸದ್ಯಕ್ಕೆ ರಮ್ಯಾ ರಾಜಕೀಯ ಹಾಗು ಸಿನಿಮಾ ಎರಡರಿಂದಲೂ ದೂರ ಉಳಿದಿದ್ದಾರೆ. ಆದ್ರೆ ಮದುವೆ ನಂತರ ರಮ್ಯಾ ಮತ್ತೆ ಸಿನಿಮಾಗೆ ಕಾಲಿಡುತ್ತಾರಾ ಅಥವಾ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ರಮ್ಯಾ ಅಂತೂ ಇಂತೂ ಹಸೆಮಣೆ ಏರಲು ತಯಾರಾಗುತ್ತಿದ್ದಾರಂತೆ. ಒಂದು ವೇಳೆ ಅಂದುಕೊಂಡಂತೆ ಎಲ್ಲವು ನಡೆದರೆ ದುಬೈನಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದಾರಂತೆ.

LEAVE A REPLY

Please enter your comment!
Please enter your name here