‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಟೈಟಲ್ ಗೆ ಅಣ್ಣಾವ್ರ ಸಿನಿಮಾನೇ ಸ್ಫೂರ್ತಿ

0
504
rajkumar and rakshit

ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ ಅನೇಕ ಸಿನಿಮಾಗಳು ತೆರೆ ಕಾಣುತ್ತಲೇ ಇರುತ್ತವೆ. ಆದರೆ ಎಲ್ಲ ಸಿನಿಮಾಗಳು ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗುವುದಿಲ್ಲ. ಎಲ್ಲೋ ಕೆಲವು ಸಿನಿಮಾಗಳು ಮಾತ್ರ ಜನರಿಗೆ ಬಹಳಷ್ಟು ಹತ್ತಿರವಾಗುತ್ತವೆ. ಅದರಲ್ಲೂ ಇತ್ತೀಚಿಗೆ ತೆರೆ ಕಾಣುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಂತೂ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕೂಡ ಆಗಿದೆ. ಹೌದು. ಕಿರಿಕ್ ಪಾರ್ಟಿ ಸಿನಿಮಾ ಆದ್ಮೇಲೆ ರಕ್ಷಿತ್ ಅವರ ಯಾವುದೇ ಸಿನಿಮಾಗಳು ತೆರೆ ಕಂಡಿರಲಿಲ್ಲ. ಆದ್ರೆ ಈಗ ಅವರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತೆರೆ ಕಾಣುವುದಕ್ಕೆ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಈ ಸಿನಿಮಾ ಬಗ್ಗೆ ಕೆಲವು ವಿಚಾರಗಳನ್ನು ರಕ್ಷಿತ್ ತಿಳಿಸಿದ್ದಾರೆ.

ಸಿನಿಮಾ ಟೈಟಲ್ ಗೆ ಅಣ್ಣಾವ್ರ ಸಿನಿಮಾವೊಂದು ಸ್ಫೂರ್ತಿ

ಇನ್ನು ಸಿನಿಮಾ ಬಗ್ಗೆ ಕೆಲವು ವಿಚಾರಗಳನ್ನು ರಕ್ಷಿತ್ ಹಂಚಿಕೊಂಡಿದ್ದು, ಈ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ಎಂಬ ಹೆಸರನ್ನಿಡಲು ಕಾರಣವಾದ ಮುಖ್ಯ ಸಂಗತಿಯೊಂದನ್ನು ತಿಳಿಸಿದ್ದಾರೆ. ಹೌದು. ಈ ಸಿನಿಮಾಗೆ ಈ ಹೆಸರನ್ನಿಡಲು ರಾಜ್ ಕುಮಾರ್ ಅವರ ಸಿನಿಮಾವೊಂದು ಕಾರಣವಂತೆ. ಹೌದು. ರಾಜ್ ಕುಮಾರ್ ಅವರ ಅಭಿನಯದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬರುವ ಸಾಲು,  ಈ ಸಿನಿಮಾದ ಟೈಟಲ್ ಗೆ ಸ್ಫೂರ್ತಿಯಾಗಿದೆ. ಇನ್ನು ಅದನ್ನು ಘಟನೆಯ ಸಮೇತ ರಕ್ಷಿತ್ ತಿಳಿಸಿದ್ದಾರೆ. ಹೌದು. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಈ ಸಾಲು ಯಾವಾಗ ಬರುತ್ತೆ, ಏನು ಕಥೆ ಎಂಬುದನ್ನು ರಕ್ಷಿತ್ ತಿಳಿಸಿದ್ದಾರೆ.

ಪುನೀತ್ ಹರಿಯನ್ನು ಕೂಗುವುದೇ ಈ ಸಾಲಾಗಿದೆ

ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬಾಲನಟನಾಗಿದ್ದು, ಹರಿಯ ಕಟ್ಟಾ ಭಕ್ತನಾಗಿರುತ್ತಾನೆ. ಆದ್ರೆ ಪುನೀತ್ ತಂದೆಯಾದ ರಾಜ್ ಕುಮಾರ್ ಹರಿಯ ಬದ್ಧ ವೈರಿಯಾಗಿರುತ್ತಾರೆ. ಹೀಗಿರುವಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ರಾಜ್ ಕುಮಾರ್, ಪುನೀತ್ ಗೆ ಒಂದು ಪ್ರಶ್ನೆ ಕೇಳುತ್ತಾರೆ. ಎಲ್ಲಿದ್ದಾನೆ ನಿನ್ನ ಹರಿ, ಈ ಕಂಬದಲ್ಲಿ, ಆ ಕಂಬದಲ್ಲಿ ಎಂದು ಕೇಳುತ್ತಾರೆ. ಆಗ ನರಸಿಂಹ ಸ್ವಾಮಿ ಕಂಬದಿಂದ ಪ್ರತ್ಯಕ್ಷನಾಗಿದ್ದು, ಅಂತಹ ಸಮಯದಲ್ಲಿ ಪುನೀತ್, ನಾರಾಯಣ ಎಂದು ಕೂಗುತ್ತಾರೆ. ಆ ಸಮಯಕ್ಕೆ ಕೂಗುವ ಕೂಗು, ನಿಜಕ್ಕೂ ಎಂಥವರ ಮೈ ರೋಮಾಂಚನವಾಗುವಂತೆ ಮಾಡುತ್ತದೆ.

ಆ ಸಾಲು ನಿಜಕ್ಕೂ ಅದ್ಭುತ

ಇನ್ನು ಪುನೀತ್ ಮನದುಂಬಿ ಜೋರು ಧ್ವನಿಯಲ್ಲಿ ಕೂಗಿದಾಗ ನಾರಾಯಣ ಪದ ಬಹಳಷ್ಟು ಅದ್ಭುತವಾಗಿ ಕೇಳಿತ್ತಂತೆ. ಹಾಗಾಗಿ ಆ ಸಾಲಿಗೆ ಮನಸೋತು ಅದೇ ಹೆಸರಿನಲ್ಲಿ ಸಿನಿಮಾ ಮಾಡಬೇಕೆಂದು ರಕ್ಷಿತ್ ನಿರ್ಧರಿಸಿದರಂತೆ. ಹಾಗಾಗಿ ತಮ್ಮ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ಎಂಬ ಟೈಟಲ್ ಇಟ್ಟಿದ್ದಾರೆ. ಇನ್ನು ಇದರ ವಿಚಾರವಾಗಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ತಿಳಿಸಿದ್ದಾರೆ.

ಇಷ್ಟುದಿನಗಳಾದ ನಂತರ ರಕ್ಷಿತ್ ಶೆಟ್ಟಿ ತೆರೆ ಮೇಲೆ ಬರುತ್ತಿದ್ದು, ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದಾರೆ. ಇನ್ನು ತಮ್ಮ ಸಿನಿಮಾದ ಟೈಟಲ್ ಗೆ ಕಾರಣವಾದ ಸ್ಫೂರ್ತಿಯನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here