ಶಾಂತ ಸ್ವಭಾವದ ಅಣ್ಣಾವ್ರಿಗೆ, ಈ ಒಂದು ವಿಷಯ ಮಿತಿ ಮೀರಿಸುವಷ್ಟು ಕೋಪ ತರಿಸುತ್ತಿತ್ತು.

0
1183
raj atmiyaru

ಈ ನಟ ಅಂದ್ರೆ ಜನಕ್ಕೆ ಅದೇನೋ ಒಂಥರಾ ಇಷ್ಟ. ತಮ್ಮ ನಟನೆಯ ಮೂಲಕ, ಇಡೀ ದೇಶದ ಜನರನ್ನ ಗೆದ್ದಿದ್ದಾರೆ. ಇವರಿಗೆ ಅಭಿಮಾನಿಗಳು ಒಬ್ಬರು, ಇಬ್ಬರಲ್ಲ. ಕೋಟ್ಯಾಂತರ ಜನರಿದ್ದಾರೆ. ಇವರನ್ನ ಕೇವಲ ನಟನೆ ಮೂಲಕ ಇಷ್ಟಪಟ್ಟವರಿಲ್ಲ. ಇವರ ಒಳಮನಸ್ಸು ಕೂಡ, ಜನರಿಗೆ ಅಷ್ಟೇ ಇಷ್ಟ. ತಮಗಿರುವ ಗುಣದಿಂದ, ದೇಶದ ಜನತೆಗೆ ಪ್ರೀತಿ ಪಾತ್ರರಾಗಿದ್ದಾರೆ.

ಇನ್ನೂ ಇವರ ಸಿನಿಮಾ ವಿಚಾರಕ್ಕೆ ಅಂತ ಬಂದರೆ, ಅದ್ಭುತದಲ್ಲಿ, ಅದ್ಭುತ ಸಿನಿಮಾಗಳನ್ನ ಕೊಟ್ಟಿದ್ದಾರೆ. ಅವರು ನಮ್ಮನ್ನ ಅಗಲಿ ತುಂಬ ವರ್ಷಗಳಾಯಿತು. ಆದರೂ, ದೈಹಿಕವಾಗಿ ಅವರು ನಮ್ಮಿಂದ ಅಗಲಿರಬಹುದು. ಆದ್ರೆ ಮಾನಸಿಕವಾಗಿ ಅಭಿಮಾನಿಗಳ ಮನಸ್ಸಿನಲ್ಲೇ ಉಳಿದಿದ್ದಾರೆ. ಇನ್ನೂ ಇವರನ್ನ ಹತ್ತಿರದಿಂದ ಕಂಡವರಿಗಂತೂ, ಇವರ ಸ್ವಭಾವ, ಗುಣ ಎಲ್ಲವೂ ಗೊತ್ತು. ಅದರ ಬಗ್ಗೆ ಸದಾ ಕಾಲ ಹೊಗಳುತ್ತಲೇ ಇರುತ್ತಾರೆ. ಅದರ ಕೆಲವು ಅಂಶಗಳು ಇಲ್ಲಿವೆ.

ಅತಿಥಿ ಸತ್ಕಾರದಲ್ಲಿ ಮುಂದಿದ್ದ ಅಣ್ಣಾವ್ರು

ಅಣ್ಣಾವ್ರಿಗೆ ಅಭಿಮಾನಿಗಳು, ಹಾಗೂ ಸಹ ಕಲಾವಿದರ ಮೇಲೆ ಗೌರವ ಹೆಚ್ಚು. ಅದರಲ್ಲೂ ಆರ್ಕೆಸ್ಟ್ರಾ, ರಸಮಂಜರಿ ಕಾರ್ಯಕ್ರಮದಲ್ಲಿ ಇವರ ಜೊತೆಗೆ ಕೆಲಸ ಮಾಡೋರು ಅಂದ್ರೆ, ಇವರಿಗೆ ಇನ್ನೂ ಹೆಚ್ಚಿನ ಗೌರವ. ಕಾರ್ಯಕ್ರಮದ ವಿಷಯವಾಗಿ ಅವರು, ಅಣ್ಣಾವ್ರ ಮನೆಗೆ ಬರುತ್ತಿದ್ದರು. ಮೊದಲೇ, ಅತಿಥಿ ಸತ್ಕಾರದಲ್ಲಿ ಮುಂದಿದ್ದ ಅಣ್ಣಾವ್ರನ್ನ ಕೇಳ್ಬೇಕಾ, ಅವರನ್ನ ತಮ್ಮ ಮನೆಯವರಂತೆಯೇ ಕಾಣುತ್ತಿದ್ದರು. ಹಾಗಾಗಿ ಅವರ ಮನೆಗೆ ಬರೋಕೆ, ಎಲ್ಲರೂ ಇಷ್ಟ ಪಡುತ್ತಿದ್ದರು.

ಕೆಲವು ವಿಷಯಗಳಲ್ಲಿ ಕಟ್ಟುನಿಟ್ಟಿನಲ್ಲಿದ್ದ ರಾಜಣ್ಣ

ಇವರ ಮನೆಗೆ ಬಂದವರನ್ನ ಎಂದಿಗೂ, ಹಾಗೆ ಕಳಿಸಿಲ್ಲ. ಊಟ ಮಾಡಿಯೇ ಕಳಿಸುತ್ತಿದ್ದರು. ಎಲ್ಲಾ ವಿಷಯಗಳಲ್ಲೂ ಶಾಂತ ರೀತಿಯಲ್ಲಿ ವರ್ತಿಸುವ ನಮ್ಮ ಅಣ್ಣಾವ್ರು ಒಂದೇ, ಒಂದು ವಿಷಯದಲ್ಲಿ ಮಾತ್ರ ತುಂಬಾ ಕೋಪಗೊಳ್ಳುತ್ತಿದ್ರು. ಹೌದು. ಅಣ್ಣಾವ್ರಿಗೆ ಊಟಕ್ಕೆ ಕುಳಿತಾಗ, ತಟ್ಟೆಯಲ್ಲಿ ಅನ್ನ ಬಿಟ್ಟರೆ, ಅದನ್ನ ಸಹಿಸುತ್ತಿರಲಿಲ್ಲ. ಇವರ ಮನೆಗೆ ಬಂದವರು ಯಾರೂ, ತಟ್ಟೆಯಲ್ಲಿ ಅನ್ನ ಬಿಡುವ ಆಗಿರಲಿಲ್ಲ. ಹಾಗಾಗಿ ಇವರ ಜೊತೆ, ಊಟಕ್ಕೆ ಕುಳಿತವರಿಗೆ ಅನ್ನದ ಮಹತ್ವವನ್ನ ತಿಳಿಸುತ್ತಿದ್ದರು. ಹೌದು. ಊಟಕ್ಕೆ ಕುಳಿತವರಿಗೆ ಅನ್ನದ ಬಗ್ಗೆ ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ತಟ್ಟೆಯಲ್ಲಿ ಅನ್ನವನ್ನ ಬಿಡಬಾರದು. ಎಷ್ಟು ಬೇಕೋ, ಅಷ್ಟನ್ನ ಬಡಿಸಿಕೊಳ್ಳಬೇಕು ಅಂತ. ಈ ವಿಷಯವನ್ನ ನೀವು, ಬೇರೆಯವರಿಗೂ ತಿಳಿಸಬೇಕು ಅಂತ ಹೇಳುತ್ತಿದ್ದರು.

ಇತರರನ್ನೂ, ತಮ್ಮಂತೆ ಕಾಣುತ್ತಿದ್ದ ಅಣ್ಣಾವ್ರು

ಅಣ್ಣಾವ್ರನ್ನ ಭೇಟಿ ಮಾಡೋಕೆ ದಿನಬೆಳಗಾದ್ರೆ, ಹತ್ತಾರು ಜನ ಅವರ ಮನೆಗೆ ಬರುತ್ತಿದ್ದರು. ಆದ್ರೆ ಅವರೆಲ್ಲರನ್ನೂ ಅಣ್ಣಾವ್ರು ಎಂದಿಗೂ ಹೊರ ಜನ ಅಂತ ಭಾವಿಸುತ್ತಿರಲಿಲ್ಲ. ಅವರು ಸಹ ನಮ್ಮ ಮನೆಯವರೇ ಅಂತ ತಿಳಿಯುತ್ತಿದ್ದರು. ಹಾಗಾಗಿ ಅವರಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಊಟ, ತಿಂಡಿ ವಿಷಯದಲ್ಲಂತೂ, ಕಡಿಮೆ ಮಾಡುತ್ತಿರಲಿಲ್ಲ. ಅದು ಅತಿಥಿಗಳಿಗಾದರೂ ಅಷ್ಟೇ, ಮನೆಯವರಿಗಾದರೂ ಅಷ್ಟೆ. ಇನ್ನೂ ಇವರ ಮನೆಗೆ ಯಾರಾದ್ರೂ ಬಂದರೆ, ಅವರನ್ನ ಆತ್ಮೀಯವಾಗಿ ಮಾತಾಡಿ, ಕಳಿಸುವಾಗ ಗೇಟ್ ವರೆಗೂ ಬಂದು, ಅವರನ್ನ ಬಿಟ್ಟು ಬರುತ್ತಿದ್ದರು. ಒಬ್ಬ ಮೇರು ನಟನಿಗೆ ಆ ಅವಶ್ಯಕತೆ ಇರಲಿಲ್ಲ. ಆದ್ರೆ ಅವ್ರು ಕಲಾವಿದರಿಗೆ ಕೊಡುತ್ತಿದ್ದ ಗೌರವ ಆ ರೀತಿ ಇತ್ತು.

ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವ ಆತ್ಮೀಯರು

ಈ ರೀತಿ ಅವರ ಜೊತೆ ನಡೆದ ಕೆಲವು ಘಟನೆಗಳನ್ನ ಕೆಲವ್ರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ಕೆಲವು ಸಂದರ್ಶನ ಹಾಗೂ ಕೆಲವು ಕಾರ್ಯಕ್ರಮಕ್ಕೆ ಬರುವ ಅತಿಥಿಗಳು, ಅವರ ಜೊತೆ ನಡೆದ ಕೆಲವು ವಿಷಯಗಳ ಬಗ್ಗೆ ಮೆಲುಕು ಹಾಕುತ್ತಾರೆ. ಹಾಗೆ, ಅವರ ಬಗ್ಗೆ ಇರುವ ಗೌರವ ಎಂಥದ್ದು ಎಂಬುದನ್ನ ತಿಳಿಸಕೊಡುತ್ತಾರೆ. ಇದೇ ರೀತಿ ಅನೇಕರು ಅಣ್ಣಾವ್ರ ಬಗ್ಗೆ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಈ ರೀತಿ ಅಣ್ಣಾವ್ರ ಬಗೆಗಿನ ಮಾತುಗಳು, ಕಥೆಗಳು ಸಾಕಷ್ಟಿವೆ. ಯಾಕಂದ್ರೆ, ಎಲ್ಲರ ನೆಚ್ಚಿನ ವ್ಯಕ್ತಿ ಅವರು. ಜನರು ಹಾಗೂ ಅವರ ಸ್ನೇಹಿತರು ಅವರನ್ನ ಒಬ್ಬ ನಟನಾಗಿ ನೋಡಿರುವುದಕ್ಕಿಂತ, ಎಲ್ಲರಂತೆ ಇರುವ ಸಾಮಾನ್ಯ ವ್ಯಕ್ತಿಯಂತೆ ನೋಡಿದ್ದಾರೆ. ಯಾಕಂದ್ರೆ ಅಣ್ಣಾವ್ರ ಗುಣ ಆ ರೀತಿ ಇದೆ. ಅಣ್ಣಾವ್ರ ಇದೇ ಗುಣಗಳು ಎಲ್ಲರಿಗೂ ಇಷ್ಟ ಆಗುವಂತೆ ಆಗಿದ್ದು. ಇದರಿಂದಲೇ ಅವರು ಎಲ್ಲರನ್ನ ಗೆದ್ದಿದ್ದು.

LEAVE A REPLY

Please enter your comment!
Please enter your name here