ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ ಸೆರೆಹಿಡಿದ ನಟ. ಎಲ್ಲಿ?

0
721
raghu bhat and kallaru

ಚೇಸಿಂಗ್ ಹಾಗು ಅಟ್ಯಾಕ್ ಅನ್ನೋದು ಸಾಮಾನ್ಯವಾಗಿ ಸಿನಿಮಾದಲ್ಲಿ ಕಾಣುತ್ತೀವಿ. ಇನ್ನು ನಿಜ ಜೀವನದಲ್ಲಿ ಇದೆಲ್ಲಾ ಕಡಿಮೆ. ಯಾಕಂದ್ರೆ ಇಲ್ಲಿ ಮನುಷ್ಯನಾದವನು ವಸ್ತು ಹೋದರು ಪರವಾಗಿಲ್ಲ. ಜೀವ ಉಳಿದರೆ ಸಾಕು ಎನ್ನುತ್ತಾನೆ. ಹಾಗಾಗಿ ರಿಸ್ಕ್ ತೆಗೆದುಕೊಳ್ಳೋಕೆ ಇಷ್ಟ ಪಡುವುದಿಲ್ಲ. ಎಲ್ಲೋ ಕೆಲವರು ಮಾತ್ರ ಸ್ನೇಹಿತರ ಜೊತೆ ಸೇರಿ ಕೆಲವೊಂದು ಸಾಹಸ ಮಾಡಲು ಮುಂದಾಗುತ್ತಾರೆ. ಆದರೆ ಈ ನಟ ಒಬ್ಬನೇ ಇದ್ದರೂ, ತಮ್ಮ ಜೀವವನ್ನು ಲೆಕ್ಕಿಸದೆ ದರೋಡೆಕೋರರನ್ನು ಚೇಸ್ ಮಾಡುವುದರ ಮೂಲಕ ಸೆರೆ ಹಿಡಿದಿದ್ದಾರೆ. ಹೌದು. ನಟ ರಘು ಭಟ್ ಅವರು ಕಳೆದ ರಾತ್ರಿ ದರೋಡೆಕೋರರಿಬ್ಬರನ್ನು ಹಿಡಿಯುವುದರ ಮೂಲಕ ಎಲ್ಲರ ಮೆಚ್ಚುಗೆ ಘಳಿಸಿದ್ದಾರೆ.

ಚೇಸ್ ಮಾಡಿ ದರೋಡೆಕೋರರನ್ನು ಸೆರೆಹಿಡಿದ ನಟ

ನಟ ರಘು ಭಟ್ ನಿನ್ನೆ ತಡರಾತ್ರಿ ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡಿ ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಆ ಸಮಯದಲ್ಲಿ ಬೈಕ್ ನಲ್ಲಿ ಅಲ್ಲಿಗೆ ಬಂದ ಇಬ್ಬರು ದರೋಡೆಕೋರರು ಅವರನ್ನು ಅಡಗಟ್ಟಿ, ಒಡವೆ ಹಾಗು ಹಣವನ್ನು ದೋಚಿದ್ದಾರೆ. ತಕ್ಷಣವೇ ಅವರು ಅವೆಲ್ಲವನ್ನು ಕಿತ್ತುಕೊಂಡ ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಹೌದು. ತಮ್ಮ ಬೈಕ್ ಏರಿ ಜೋರಾಗಿ ಹೋಗುವ ಸಮಯದಲ್ಲಿ ರಘು ಭಟ್ ಸಹ ತಮ್ಮ ಕಾರಿನಲ್ಲಿ ಅವರನ್ನು ಚೇಸ್ ಮಾಡಿದ್ದಾರೆ. ಆ ಸಮಯಕ್ಕೆ ದರೋಡೆಕೋರರು ಜೋರಾಗಿ ಹೋಗುತ್ತಿದ್ದರಿಂದ ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ರಘು ಭಟ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಹಾಗು ಸಾರ್ವಜನಿಕರಿಂದ ಮೆಚ್ಚುಗೆ

ಇನ್ನು ದರೋಡೆಕೋರರು ಭಾರತಿ ನಗರದ ಸೇಂಟ್ ಜಾನ್ಸ್ ಶ್ರೀ ಸರ್ಕಲ್ ಬಳಿ ಕಳ್ಳರು ರಘು ಭಟ್ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಹಲಸೂರ್ ಪೊಲೀಸರ ವಶದಲ್ಲಿ ಇದ್ದಾರೆ. ಇನ್ನು ದರೋಡೆಕೋರರು ಅಬ್ದುಲ್ ಮತ್ತು ಮೋಯಿನ್ ಎಂದು ತಿಳಿದುಬಂದಿದೆ. ರಘುಭಟ್ ಈ ಕೆಲಸಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಲ್ಲ ಕಡೆಯಿಂದ ರಘು ಭಟ್ ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಹೌದು. ಪೊಲೀಸರು ಮಾಡಬೇಕಾದ ಕೆಲಸವನ್ನು ರಘು ಭಟ್ ಮಾಡಿರುವುದಕ್ಕೆ ಸಾರ್ವಜನಿಕರಿಂದ ಹಾಗು ಪೊಲೀಸರಿಂದ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ.

ಒಟ್ಟಿನಲ್ಲಿ ನಟ ರಘು ಭಟ್ ಅವರ ಈ ಕೆಲಸವನ್ನು ಮೆಚ್ಚಲೇಬೇಕು. ಯಾಕಂದ್ರೆ ಎಂಥವರೇ ಆದರೂ ಒಬ್ಬರೇ ಇದ್ದಾಗ ಇಂತಹ ಕೆಲಸಕ್ಕೆ ಕೈ ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ರಘು ಭಟ್ ಒಬ್ಬರೇ ಕಳ್ಳರನ್ನು ಸೆರೆಹಿಡಿದಿರುವುದು ನಿಜಕ್ಕೂ ಗ್ರೇಟ್.

LEAVE A REPLY

Please enter your comment!
Please enter your name here