ಒಂದು ಕಾಲದಲ್ಲಿ ನಮ್ಮನ್ನು ಸಂತೈಸಿದವರನ್ನು ಈಗ ನಾವು ಸಂತೈಸಬೇಕಾಗಿದೆ

0
777
raghanna and siddarth

ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ಅವರು ನಿಜಕ್ಕೂ ಅಸಾಧಾರಣ ವ್ಯಕ್ತಿ. ಯಾಕಂದ್ರೆ ಸಾವಿರಾರು ಜನರ ಕಣ್ಣೀರನ್ನು ಹೊರೆಸಿದ್ದಾರೆ. ಹೌದು. ತಮ್ಮ ಕಂಪನಿಯಲ್ಲಿ ಸಾವಿರಾರು ಜನರಿಗೆ ಕೆಲಸ ನೀಡಿ, ಅವರ ಜೀವನೋಪಾಯಕ್ಕೆ ದಾರಿಯಾಗಿದ್ದಾರೆ. ಆದರೆ ಅಂತಹ ವ್ಯಕ್ತಿ ನಮ್ಮಿಂದ ಅಗಲಿರುವುದು ಯಾರಿಂದಲೂ ನಂಬಲು ಆಗುತ್ತಿಲ್ಲ. ಹಾಗೆ ಅದನ್ನು ಸಹಿಸಲು ಆಗುತ್ತಿಲ್ಲ. ಆದ್ರೂ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇದೇ ಸಮಯದಲ್ಲಿ ಹಲವರು ಸಿದ್ದಾರ್ಥ್ ಅವರ ಜೊತೆ ಕಳೆದ ಕೆಲವು ಕ್ಷಣಗಳನ್ನು ಹಾಗು ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಈ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಒಂದು ಮಾತನ್ನು ಹೇಳಿದ್ದಾರೆ. ಹೌದು. ಇದೇ ಸಮಯದಲ್ಲಿ 19 ವರ್ಷಗಳ ಹಿಂದೆ ಒಂದು ಘೋರ ಘಟನೆ ನಡೆದಿತ್ತು. ಆಗ ಅವರು ನಮ್ಮ ಮನೆಯಲ್ಲಿದ್ದರು, ಈಗ ನಾವು ಅವರ ಮನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

19 ವರ್ಷಗಳ ಹಿಂದೆ ಆದ ಘೋರ ಘಟನೆ ಇದಾಗಿದೆ

ಸಿದ್ದಾರ್ಥ್ ಅವರ ಸಾವಿನ ವಿಚಾರ ಕುರಿತು ಮನನೊಂದಿರುವ ವಿಜಯ್ ರಾಘವೇಂದ್ರ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ. ಹೌದು. ಇದೇ 19 ವರ್ಷಗಳ ಹಿಂದೆ ಅವರೆಲ್ಲ ನಮ್ಮನ್ನು ಸಮಾಧಾನ ಮಾಡಲು ನಮ್ಮ ಮನೆಯಲ್ಲಿದ್ದರು. ಆದ್ರೆ ಈಗ ಅವರನ್ನು ಸಮಾಧಾನ ಮಾಡಲು ನಾವು ಅವರ ಮನೆಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ಹೌದು. ಇದೇ ಭೀಮನ ಅಮಾವಾಸೆಯ ಸಂದರ್ಭದಲ್ಲಿ ಅಪ್ಪಾಜಿಯವರ ಅಪಹರಣವಾಗಿತ್ತು. ಆಗ ಎಸ್ ಎಂ ಕೃಷ್ಣ ಅವ್ರು ಹಾಗು ಸಿದ್ದಾರ್ಥ್ ಅವರು ನಮಗೆಲ್ಲ ಸಮಾಧಾನ ಹೇಳಿದ್ದರು. ಅಪ್ಪಾಜಿಗೆ ಏನು ಆಗುವುದಿಲ್ಲ. ಏನೇ ಆದರೂ ನಾನು ನೋಡಿಕೊಳ್ಳುತ್ತೇನೆ ಎಂದು ಸಂಪೂರ್ಣ ಜವಾಬ್ದಾರಿಯನ್ನು ಸಿದ್ದಾರ್ಥ್ ಹೊತ್ತಿದ್ದರು. ಆದ್ರೆ ಈಗ ಅವರೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಬ್ರಹ್ಮ ಲಿಖಿತದ ಮುಂದೆ ಯಾವ ಪ್ರಾರ್ಥನೆಯು ನಡೆಯುವುದಿಲ್ಲ

ಇನ್ನು ಸಿದ್ದಾರ್ಥ್ ಕಾಣೆಯಾಗಿದ್ದಾರೆ ಅನ್ನೋ ವಿಷಯ ತಿಳಿಯುತ್ತಿದ್ದಂತೆ ನಮಗೆಲ್ಲ ಒಂದು ಕ್ಷಣ ಆಶ್ಚರ್ಯವಾಯಿತು. ಆದ್ರೆ ಅವರು ಕ್ಷೇಮವಾಗಿ ಇರುತ್ತಾರೆ ಅನ್ನೋ ನಂಬಿಕೆ ನಮಗೆ ಇತ್ತು. ಆದ್ರೆ ಎಲ್ಲರು ಅವರನ್ನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದರು. ಆದ್ರೆ ನಾವ್ಯಾರು ಅದನ್ನು ಒಪ್ಪಿರಲಿಲ್ಲ. ಯಾಕಂದ್ರೆ ಒಂದು ಕಾಲದಲ್ಲಿ ನಮಲ್ಲಿ ಆತ್ಮಸ್ಥೈರ್ಯ ತುಂಬಿದ ವ್ಯಕ್ತಿ ಎಂದಿಗೂ ಇಂಥ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ನಮಗೆ ಗೊತ್ತಿತ್ತು. ಆದರೂ ನಾವು ದೇವರಲ್ಲಿ ಪ್ರಾರ್ಥನೆ ಮಾಡಿದ್ದೆವು. ಆದ್ರೆ ಬ್ರಹ್ಮ ಲಿಖಿತದ ಮುಂದೆ ಯಾವ ಪ್ರಾಥನೆಯು ನಡೆಯುವುದಿಲ್ಲ ಅನ್ನೋದು ನಿಜವಾಯಿತು. ಹೌದು. ದೇವರ ಆಟವನ್ನು ಯಾರು ಮೀರಲು ಆಗುವುದಿಲ್ಲ ಎಂಬುದು ಎಲ್ಲಿ ಸತ್ಯವಾಗಿದೆ ಎಂದು ಹೇಳಿದ್ದಾರೆ.

ಸಿದ್ದಾರ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ರಾಘಣ್ಣ

ಇನ್ನು ಸಿದ್ದಾರ್ಥ್ ಅವರ ಸಾವಿನ ವಿಚಾರವಾಗಿ ಮನನೊಂದು ಮಾತನಾಡಿದ ರಾಘಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹೌದು. ಮನುಷ್ಯನ ಕೈಯಲ್ಲಿ ಏನು ಇಲ್ಲ. ನಾವೊಂದು ಬಗೆದರೆ, ದೈವವೊಂದು ಬಗೆಯುತ್ತದೆ ಎಂದು ಹೇಳಿದ್ದಾರೆ. ಯಾಕಂದ್ರೆ ಸಿದ್ದಾರ್ಥ್ ಅವರು ನಿಜಕ್ಕೂ ಅಸಾಧಾರಣ ವ್ಯಕ್ತಿ. ಅವರಿಗಿದ್ದ ಧೈರ್ಯ ನಿಜಕ್ಕೂ ಅದ್ಭುತ. ಆದ್ರೆ ಯಾಕೆ ಈ ರೀತಿಯಲ್ಲಿ ಮಾಡಿಕೊಂಡರು ಎಂಬುದು ತಿಳಿಯಲಿಲ್ಲ. ಆದ್ರೆ ಅವರು ನಮ್ಮನ್ನು ಅಗಲಿರುವುದು ಮಾತ್ರ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಿದ್ದಾರ್ಥ್ ಅವರ ಸಾವನ್ನು ಕುರಿತು, ಬಹಳಷ್ಟು ಮಂದಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆದ್ರೆ ಈ ದಿನವನ್ನು ರಾಜ್ ಕುಟುಂಬದವರು ಹೆಚ್ಚಾಗಿ ನೆನೆಯುತ್ತಾರೆ. ಯಾಕಂದ್ರೆ ಇದೇ ದಿನದಲ್ಲಿ ಅಪ್ಪಾಜಿಯವರ ಅಪಹರಣವಾಗಿತ್ತು. ಆದ್ರೆ ಈಗ ಇದೇ ದಿನ ಸಿದ್ದಾರ್ಥ್ ಅವರು ಅಗಲಿದ್ದಾರೆ ಎಂದು ತಮ್ಮ ನೋವನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here