ಡಾ. ರಾಜ್ ಕುಮಾರ್ ಗಾಗಿ ಈ ಅಭಿಮಾನಿ ತೆಗೆದುಕೊಂಡಿದ್ದ ಆ ನಿರ್ಧಾರ ನಿಜಕ್ಕೂ ಗ್ರೇಟ್

0
798

ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಾಯಕ ನಟ. ಡಾ. ರಾಜ್ ಕುಮಾರ್ ಹಾಗು ಕನ್ನಡಿಗರಿಗೂ ಅವಿನಾಭಾವ ಸಂಬಂಧವಿದೆ ಅಂತಾನೆ ಹೇಳಬಹುದಾಗಿದೆ. ರಾಜ್ ಕುಮಾರ್ ಅವರು ನಮ್ಮನ್ನು ಆಗಲಿ ಇಷ್ಟು ವರ್ಷಗಳು ಕಳೆದಿದ್ದರು ಸಹ ಅಭಿಮಾನಿಗಳು ಮಾತ್ರ ಅವರನ್ನು ತಮ್ಮ ಆರಾಧ್ಯ ದೈವ ಎಂದೆ ಭಾವಿಸಿದ್ದಾರೆ. ಇತ್ತೀಚಿಗಷ್ಟೆ ರವಿ ಬೆಳಗೆರೆ ಅವರು ಪ್ರತಿಯೊಬ್ಬ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಕಲಿಸಿಕೊಟ್ಟವರು ಡಾಕ್ಟರ್ ರಾಜ್ ಕುಮಾರ್ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತಮ್ಮ ಅಮೋಘವಾದ ನಟನೆಯ ಮೂಲಕ ಸಂಪಾದಿಸಿದ್ದಾರೆ. ಆದರೆ ಇಲ್ಲಿ ಒಬ್ಬ ಡಾಕ್ಟರ್ ರಾಜ್ ಅವರ ಅಪ್ಪಟ ಅಭಿಮಾನಿ ರಾಜ್ ಕುಮಾರ್ ಅವರಿಗಾಗಿ ತ್ಯಾಗವನ್ನು ಮಾಡಿದ್ದಾರೆ. ಮುಂದೆ ಓದಿ

ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದರು 

ತಮ್ಮ ನೆಚ್ಚಿನ ನಟರಿಗಾಗಿ ಅಭಿಮಾನಿಗಳು ಏನು ಬೇಕಾದರು ಮಾಡಲು ಸಿದ್ಧರಾಗಿರುತ್ತಾರೆ. ಇದೆ ರೀತಿಯಾಗಿ ಒಬ್ಬ ಅಭಿಮಾನಿ ಕಳೆದ ಇಪ್ಪತ್ತು ವರ್ಷಗಳಿಂದ ಟೀ, ಕಾಫಿಯನ್ನು ಕುಡಿಯದೆ, ಬಿಸಿ ನೀರಿನಲ್ಲಿ ಸ್ನಾನ ಮಾಡದೆ, ಹಾಸಿಗೆಯ ಮೇಲೆ ನಿದ್ದೆ ಮಾಡದೆ ಬದುಕುತ್ತಿದ್ದಾರೆ. ಇಷ್ಟೆಲ್ಲ ಇವರು ಮಾಡುತ್ತಿರುವುದು ಡಾ. ರಾಜ್ ಕುಮಾರ್ ಅವರ ಮೇಲಿಟ್ಟಿರುವ ಅಭಿಮಾನಕ್ಕಾಗಿ. ಇವರು ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಕಲಾವಿದ ಎಂ. ಕೆ ಮಠ. ಗಜಕೇಸರಿ, ರಾಮ ರಾಮ ರೇ, ರಾಮಾಚಾರಿ, ರಾಜ ಕುಮಾರ, ಮುಕುಂದ ಮುರಾರಿ ಹೀಗೆ ಅನೇಕ ಚಿತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದು, ಈ ರೀತಿಯಾದ ದೃಢ ನಿರ್ಧಾರವನ್ನು ಯಾಕೆ ತೆಗೆದುಕೊಂಡಿದ್ದಾರೆ ಎಂದು ಆಲೋಚಿಸುತ್ತಿದ್ದೀರಾ? ಅದಕ್ಕೆ ಕಾರಣವಿದೆ. ಮುಂದೆ ಓದಿ

ಕರ್ನಾಟಕದ ಜನತೆಗೆ ಆಘಾತಕಾರಿಯಾದ ಸುದ್ದಿಯಾಗಿತ್ತು

ಎಂ. ಕೆ ಮಠ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೂಲಕ ಅದ್ಬುತ ಕಲಾವಿದನಾಗಬೇಕೆನ್ನುವ ಆಸೆಯನ್ನಿಟ್ಟುಕೊಂಡು ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲಿಗೆ ಇವರು ಕಾಸರಗೋಡು ಚಿನ್ನ ಅವರ ಸಹಾಯದಿಂದ 2000 ಇಸವಿಯಲ್ಲಿ, ಮಾರ್ಚ್ 6 ರಂದು ಟಿ. ಎಸ್. ನಾಗಾಭರಣ ಅವರ ಸಂಕ್ರಾಂತಿ ಎನ್ನುವ ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಳ್ಳುತ್ತಾರೆ. ನೇಮಕಗೊಂಡ ಕೆಲವೆ ದಿನಗಳಲ್ಲಿ ನಾಗಾಭರಣ ಅವರಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದರು. ಧಾರಾವಾಹಿಯ ತಂಡವನ್ನು ಸೇರಿದ್ದು, ಕೆಲ ತಿಂಗಳ ನಂತರ ಡಾ. ರಾಜ್ ಕುಮಾರ್ ಅವರು ಅಪಹರಣವಾದ ಸುದ್ದಿಯು ರಾಜ್ಯಾದ್ಯಾಂತ ಹಬ್ಬಿತ್ತು. ಕರ್ನಾಟಕದ ಜನತೆಗೆ ಇದು ಆಘಾತಕಾರಿಯಾದ ಸುದ್ದಿಯಾಗಿತ್ತು.

 ಕಾಫಿ, ಟೀ , ಹಾಸಿಗೆಯ ಸುಪ್ಪತ್ತು, ಬಿಸಿ ನೀರಿನ ಸ್ನಾನ ನಮಗೂ ಬೇಡ

ಇದೆ ಸಮಯದಲ್ಲಿ ಸಂಕ್ರಾಂತಿ ಧಾರಾವಾಹಿಯ ಚಿತ್ರೀಕರಣವು ತಾವರೆಕೆರೆ ಎನ್ನುವ ಊರಿನಲ್ಲಿ ನಡೆದಿತ್ತು. ಚಿತ್ರೀಕರಣ ಸ್ಥಗಿತಗೊಂಡ ಕಾರಣದಿಂದಾಗಿ ಕಲಾವಿದರು ಹಾಗು ತಂತ್ರಜ್ಞರು ತಮ್ಮ ತಮ್ಮ ಊರಿಗೆ ಮರಳಿದ್ದರು. ಚಿತ್ರೀಕರಣಕ್ಕೆ ಸಂಬಂಧ ಪಟ್ಟ ಹಾಗೆ ಬೆಲೆ ಬಾಳುವ ವಸ್ತುಗಳು ಅಲ್ಲೆ ಬಿಟ್ಟು ಹೋಗಿದ್ದರು. ಆದ್ದರಿಂದ ಎಂ. ಕೆ. ಮಠ ಅವರು ಆ ಊರಿನಲ್ಲೆ ಉಳಿದುಕೊಂಡಿದ್ದರು. ರಾಜ್ ಕುಮಾರ್ ಅವರ ಅಭಿಮಾನಿಗಳು ನಮ್ಮ ದೇವರಿಗಲ್ಲದ ಕಾಫಿ, ಟೀ , ಹಾಸಿಗೆಯ ಸುಪ್ಪತ್ತು, ಬಿಸಿ ನೀರಿನ ಸ್ನಾನ ನಮಗೂ ಬೇಡ ಎಂದು ಶಪಥ ಮಾಡಿರುವ ದೃಶ್ಯಾವಳಿಗಳನ್ನು ಮಾಧ್ಯಮ ಮೂಲಕ ಇವರು ನೋಡಿದ್ದರು. ಅಣ್ಣಾವ್ರು ಕಾಡಿನಿಂದ ಬಿಡುಗಡೆ ಆದ ನಂತರವೂ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಿಲ್ಲ.

ವಿಶೇಷವಾಗಿ ಅಭಿಮಾನವನ್ನು ಮೆರೆದ ಡಾಕ್ಟರ್ ರಾಜ್ ಅಭಿಮಾನಿ

ಮಾದ್ಯಮದಲ್ಲಿ ಅಭಿಮಾನಿಗಳ ಪ್ರೀತಿಯನ್ನು ಕಂಡ ಎಂ. ಕೆ. ಮಠ ಅವರು ತಾವು ಸಹ ಟೀ, ಕಾಫಿ, ಹಾಸಿಗೆ, ಬಿಸಿ ನೀರನ್ನು ಮುಟ್ಟಿರಲಿಲ್ಲ. ಈ ವಿಷಯ ಎರಡು ವರ್ಷಗಳಾದ ನಂತರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಪತ್ರಕರ್ತರೊಬ್ಬರು ಈ ವಿಚಾರವನ್ನು ರಾಜ್ ಕುಮಾರ್ ಅವರಿಗೆ ತಲಿಪಿಸುವ ಮೂಲಕ ತಮ್ಮ ನೆಚ್ಚಿನ ಅಭಿಮಾನಿಗೆ ಟೀ ಕುಡಿಸಬೇಕೆಂದು ಮನವಿಯನ್ನು ಮಾಡಿಕೊಂಡಿದ್ದು, ಇದಕ್ಕಾಗಿ ಒಂದು ದಿನಾಂಕವು ನಿಗಧಿ ಪಡಿಸಲಾಗಿತ್ತು.

ಎಂ. ಕೆ. ಮಠ ಅವರು ಇನ್ನೇನು ತಮ್ಮ ಆರಾಧ್ಯ ದೇವರನ್ನು ಭೇಟಿಯಾಗುವುದಕ್ಕೆ ಇನ್ನೆರಡು ದಿನ ಬಾಕಿ ಇತ್ತು, ಅಷ್ಟರಲ್ಲಿ ಡಾಕ್ಟರ್ ರಾಜ್ ವಿಧಿವಶರಾಗಿದ್ದರು. ಅಣ್ಣಾವ್ರ ಅಗಲಿಕೆಯಿಂದ ಎಂ. ಕೆ. ಮಠ ಅವರು ಬಹಳ ದುಃಖಿತರಾಗಿದ್ದರು. ಅಣ್ಣಾವ್ರು ಹೋದ ಮೇಲೆ ಇದೆಲ್ಲ ನನಗೆ ಬೇಡ ಎಂದು ಟೀ, ಕಾಫಿ ಕುಡಿಯದೆ, ಹಾಸಿಗೆಯ ಮೇಲೆ ಮಲಗದೆ, ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವ ಆ ಶಪಥವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

LEAVE A REPLY

Please enter your comment!
Please enter your name here