ರಾಜ್ಯದ ಮುಖ್ಯಮಂತ್ರಿಗಳಿಂದ ಒದಗಿ ಬಂತು ಪಿ.ವಿ ಸಿಂಧುಗೆ ಉತ್ತಮವಾದ ಆಫರ್

0
588

ಇತ್ತೀಚಿಗಷ್ಟೇ ವಿಶ್ವ ಬ್ಯಾಟ್ ಮಿಟನ್ ಚಾಂಪಿಯನ್ಷಿಪ್ ನಲ್ಲಿ ಪಿವಿ ಸಿಂಧು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದು ಕೊಟ್ಟಿದ್ದರು. ಆದ್ದರಿಂದ ಬಿ ಎಸ್ ಯಡಿಯೂರಪ್ಪನವರು ಪಿ ವಿ ಸಿಂಧು ಅವರಿಗೆ ವಿಶೇಷವಾದ ಆಹ್ವಾನವನ್ನು ನೀಡಿದ್ದಾರೆ. ಪಿ ವಿ ಸಿಂಧು ಅವರಿಗೆ ಸಿಎಂ ಪತ್ರ ಬರೆದಿದ್ದು, ಕರ್ನಾಟಕ ಸರ್ಕಾರವು ನಾಡ ಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಹಬ್ಬದ ಪ್ರಯುಕ್ತ 9 ದಿನಗಳ ಕಾಲ ವೈವಿಧ್ಯಮಯವಾದ ಕಾರ್ಯಕ್ರಮಗಳು ನಡೆಯಲಿದೆ. ದಸರಾ ಹಬ್ಬವನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. 410 ನೇ ದಸರಾ ಹಬ್ಬದ ಸಂಭ್ರಮಕ್ಕೆ ಅನೇಕ ಕ್ಷೇತ್ರದ ಸಾಧಕರು, ರಾಜ್ಯದ ಗಣ್ಯ ವ್ಯಕ್ತಿಗಳು ಹಾಜರಾಗಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಪಿ.ವಿ ಸಿಂಧು ಅವರಿಗೆ ಪತ್ರ ಬರೆದ ಸಿಎಂ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆಹೆಮ್ಮೆ ತಂದು ಕೊಟ್ಟಿದ್ದೀರಿ. ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಿರುವ ನೀವು ಅಕ್ಟೋಬರ್ 1ರಂದು ಯುವ ದಸರಾವನ್ನು ಉದ್ಘಾಟನೆ ಮಾಡಬೇಕು. ನಿಮ್ಮಿಂದ ಯುವ ದಸರಾ ಉದ್ಘಾಟನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸಿಎಂ ಯಡಿಯೂರಪ್ಪ, ಪಿ.ವಿ.ಸಿಂಧು ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಬಾರಿ ದಸರಾ ಹಬ್ಬವನ್ನು ಖ್ಯಾತ ಸಾಹಿತಿಯಾದ ಎಸ್ ಎಲ್ ಭೈರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. 29 ರಂದು ಬೆಳಿಗ್ಗೆ ಸುಮಾರು 9:20 ಕ್ಕೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ದಸರಾ ಹಬ್ಬವನ್ನು ಉದ್ಘಾಟನೆ ಮಾಡಲಾಗುತ್ತಿದೆ.

ಸಾಂಸ್ಕೃತಿಕ ನಗರದಲ್ಲಿ ದಸರಾ ಹಬ್ಬವನ್ನು ನೋಡುವುದೆ ಚೆಂದ

ಸಿಎಂ ಯಡಿಯೂರಪ್ಪ ಅವರು ಸೆಪ್ಟೆಂಬರ್ 29ರಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದು , ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಸಾಂಸ್ಕೃತಿಕ ನಗರದಲ್ಲಿ ದಸರಾ ಹಬ್ಬವನ್ನು ನೋಡುವುದೆ ಚೆಂದ.

ನೊಜೊಮಿ ಒಕುಹಾರ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದರು

ವುಮೆನ್ಸ್ ಸಿಂಗಲ್ ಬ್ಯಾಟ್ ಮಿಟನ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ನೊಜೊಮಿ ಒಕುಹಾರ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದರು.

ಸತತವಾಗಿ ಮೂರನೆ ಬಾರಿ ಫೈನಲ್ ನಲ್ಲಿ ಗೆದ್ದಿದ್ದು, ವಿಶ್ವ ಮಟ್ಟದ ವೇದಿಕೆಯಲ್ಲಿ ಛಾಪು ಮೂಡಿಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಡುಬ್ಲೂ ಎಫ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಜಪಾನ್ ದೇಶದ ನೊಜೊಮಿ ಒಕುಹಾರ ಅವರನ್ನು ಸೋಲಿಸಿದ್ದರು.

LEAVE A REPLY

Please enter your comment!
Please enter your name here