ಪ್ರಜಾಕೀಯ ಪಡೆದಿರುವ ಮತಗಳನ್ನ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಉಪೇಂದ್ರ

0
3745
prajaakiya

ಚುನಾವಣೆ ಅಂದ್ಮೇಲೆ ಗೆಲ್ಲೋದು, ಸೋಲೋದು ಸಾಮಾನ್ಯ. ಆದರೆ ನಮನ್ನ ಜನರು ಎಷ್ಟರ ಮಟ್ಟಿಗೆ ಸ್ವೀಕರಿಸಿದ್ದಾರೆ ಅನ್ನೋದು ಆ ಮತಗಳ ಮೂಲಕ ತಿಳಿಯುತ್ತದೆ. ಹೌದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಜನರು ಸ್ಪರ್ಧಿಸಿದ್ದರು. ಆದರೆ ಅವರೆಲ್ಲರನ್ನೂ ಸಹ ಜನರು ಒಪ್ಪಿಲ್ಲ. ಹೌದು. ತಮಗೆ ಯಾರು ನಾಯಕನಾಗಬೇಕೆಂದು ಅವರೇ ನಿರ್ಧಾರ ಮಾಡುತ್ತಾರೆ. ಹಾಗಾಗಿ ಯಾವ ನಾಯಕ ಅಧಿಕಾರಕ್ಕೆ ಬಂದರೆ ನಮ್ಮ ಸಮಾಜ ಉನ್ನತ ಮಟ್ಟಕ್ಕೆ ಬರುತ್ತದೆ ಎಂದು ಯೋಚಿಸಿ, ಮತಯಾಚನೆ ಮಾಡುತ್ತಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳ ಸರಿಸಮನಾಗಿ ಪಕ್ಷೇತರ ಪಕ್ಷಗಳು ಸ್ಪರ್ಧಿಸಿದ್ದವು. ಚುನಾವಣೆಯ ಕಾಳಗದಲ್ಲಿ ಏಟು, ಎದಿರೇಟು ಚೆನ್ನಾಗೆ ನೀಡಿದರು. ಆದರೆ ಸದ್ದಿಲ್ಲದೇ ಇದ್ದ ಒಂದು ಪಕ್ಷ ಅಂದ್ರೆ, ಅದು ಉಪೇಂದ್ರ ಅವರ ಪ್ರಜಾಕೀಯ. ಹೌದು. ಯಾವುದೇ ರೀತಿ ಅಬ್ಬರ, ಕೂಗಾಟ, ಪ್ರಚಾರ, ಪ್ಲೆಕ್ಸ್ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೂ ಜನರು ಇವರನ್ನ ಗುರುತಿಡಿದು ಮತ ಚಲಾಯಿಸಿದ್ದಾರೆ.

ಪ್ರಜಾಕೀಯ

ರಾಜಕೀಯ ಎಂಬ ಪದಕ್ಕೆ ಪರ್ಯಾಯವಾಗಿ ಪ್ರಜಾಕೀಯ ಅನ್ನೋ ಪಕ್ಷವನ್ನ ಉಪೇಂದ್ರ ಅವರು ಸ್ಥಾಪಿಸಿದರು. ಉಪೇಂದ್ರ ಅವರು ಎಷ್ಟು ಸರಳವಾಗಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದರು ಅಂದ್ರೆ, ಯಾವುದೇ ರೀತಿಯ ಪ್ರಚಾರ, ಕೂಗಾಟ ಚೀರಾಟ, ಪ್ಲೆಕ್ಸ್ ಗಳ ಅಬ್ಬರ ಇದ್ಯಾವುದು ಇರಲಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, 27 ಕ್ಷೇತ್ರಗಳಲ್ಲಿ ಪ್ರಜಾಕೀಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ತಮ್ಮ ಸ್ಪರ್ಧಿಗಳ ಬಗ್ಗೆ ಉಪೇಂದ್ರ ಅವರು, ಬಹಳಷ್ಟು ನಂಬಿಕೆ ಇಟ್ಟಿದ್ದರು. ಯಾಕಂದ್ರೆ ನಾವು ಗೆದ್ದಿಲ್ಲ ಅಂದ್ರು ಚಿಂತೆ ಇಲ್ಲ, ಆದರೆ ಯಾವುದೇ ರೀತಿಯ ಅವ್ಯವಹಾರ ನಡೆಯಬಾರದು ಎಂದು, ನಂಬಿಕೆ ಇರುವಂತಹ ವ್ಯಕ್ತಿಗಳನ್ನ ತಮ್ಮ ಪಕ್ಷದ ಮೂಲಕ ಅಖಾಡಕ್ಕೆ ಇಳಿಸಿದ್ದರು.

ಪ್ರಜಾಕೀಯ ಪಡೆದ ಒಟ್ಟು ಮತಗಳು

ನಿನ್ನೆ ಬಂದ ಫಲಿತಾಂಶ ನೋಡಿ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವಾಗಿತ್ತು. ಯಾಕಂದ್ರೆ ರಾಷ್ಟೀಯ ಪಕ್ಷಗಳೇ ಒಂದೆರಡು ಸ್ಥಾನಗಳನ್ನ ಪಡೆದಿರುವಾಗ, ಬೇರೆ ಪಕ್ಷಗಳ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈಗ ಪ್ರಜಾಕೀಯ ಪಕ್ಷ, ತಾನು ಪಡೆದಿರುವ ಮತಗಳ ಬಗ್ಗೆ ಬಹಿರಂಗಪಡಿಸಿದೆ. ಹೌದು. ಬಾಗಲಕೋಟೆ (1905), ಬೆಂಗಳೂರು ಕೇಂದ್ರ (4227), ಬೆಂಗಳೂರು ಉತ್ತರ(6596), ಬೆಂಗಳೂರು ದಕ್ಷಿಣ(6128), ಬೆಂಗಳೂರು ಗ್ರಾಮೀಣ(9882), ಬೆಳಗಾಮ್(979), ಬಳ್ಳಾರಿ(), ಬೀದರ್(1851), ಬಿಜಾಪುರ(8475), ಚಾಮರಾಜನಗರ(9415), ಚಿಕ್ಕಬಳ್ಳಾಪುರ(5092), ಚಿಕ್ಕೋಡಿ(1530), ಚಿತ್ರದುರ್ಗ(4276), ದಕ್ಷಿಣ ಕನ್ನಡ(1628), ಧಾರವಾಡ(1564), ದಾವಣಗೆರೆ(3213), ಗುಲ್ಬರ್ಗಾ(1776), ಹಾಸನ(7007), ಹಾವೇರಿ(7010), ಕೋಲಾರ್(3405), ಕೊಪ್ಪಳ(2244), ಮಂಡ್ಯ(3364), ಮೈಸೂರು(4068), ರಾಯಚೂರು(7154), ಶಿವಮೊಗ್ಗ(4082), ಉಡುಪಿ-ಚಿಕ್ಕಮಗಳೂರು(3478), ಉತ್ತರ ಕನ್ನಡ(3721), ತುಮಕೂರು(4385) ಇಷ್ಟು ಮತಗಳನ್ನ ಪ್ರಜಾಕೀಯ ಪಡೆದಿದೆ.

ಹಲವೆಡೆ ಪ್ರಜಾಕೀಯದ ಸುದ್ದಿಯೇ ಇಲ್ಲ

ಹೌದು. ಎಷ್ಟೋ ಕಡೆ ಪ್ರಜಾಕೀಯ ಅನ್ನೋ ಒಂದು ಪಕ್ಷವಿದೆ ಅನ್ನೋದು ಗೊತ್ತಿಲ್ಲ. ಇನ್ನೂ ಕೆಲವೆಡೆ ಪಕ್ಷ ಗೊತ್ತಿದ್ದರೂ, ಅದರ ಅಭ್ಯರ್ಥಿ ಯಾರಿದ್ದಾರೆ ಅನ್ನೋದು ಗೊತ್ತಿರಲಿಲ್ಲ. ಯಾಕಂದ್ರೆ, ಪ್ರಜಾಕೀಯ ತುಂಬಾ ಸಿಂಪಲ್ ಆಗಿ ಗುರುತಿಸಿಕೊಂಡಿರುವ ಪಕ್ಷವಾಗಿದೆ. ಹಾಗಾಗಿ ಎಷ್ಟೋ ಜನರಿಗೆ ಆ ಪಕ್ಷದ ಬಗ್ಗೆ ಗೊತ್ತೇ ಇಲ್ಲ. ಆದರು ಪ್ರಜಾಕೀಯ ಇಷ್ಟು ಮತಗಳನ್ನ ಪಡೆದಿದೆ. ನನ್ನ ಪಕ್ಷ ಯಾವುದೇ ಮೋಸ, ವಂಚನೆ ಇಲ್ಲದೆ ಇಷ್ಟು ಮತಗಳನ್ನ ಪಡೆದಿರೋದು ನನಗೆ ಸಂತೋಷದ ವಿಷಯವಾಗಿದೆ. ಅದು ಅಲ್ಲದೆ, ಇದು ಸದ್ಯಕ್ಕೆ ನನ್ನ ಮೊದಲ ಗೆಲುವಾಗಿದೆ ಎಂದು ಉಪೇಂದ್ರ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ 118455 ಮತಗಳನ್ನು ನೀಡಿರುವ ಎಲ್ಲರಿಗೂ ನನ್ನ ಕಡೆಯಿಂದ ಅಭಿನಂದನೆ ತಿಳಿಸುತ್ತೇನೆ ಎಂದು ಉಪೇಂದ್ರ ಅವ್ರು ಅಭಿನಂದನೆ ತಿಳಿಸಿದ್ದಾರೆ.

ನಿಜಕ್ಕೂ ಉಪೇಂದ್ರ ಅವರು ಪ್ರಜಾಕೀಯ ಗೆ ನೀಡಿರುವ ಮತಗಳನ್ನ ನೋಡಿ ಬಹಳಷ್ಟು ಖುಷಿ ಪಟ್ಟಿದ್ದಾರೆ. ಯಾಕಂದ್ರೆ, ಜನರಿಗೆ ಸರಿಯಾಗಿ ನಾವು ಯಾರೂ? ಏನು ಎಂಬುದು ಗೊತ್ತಿಲ್ಲ. ಆದರೂ ನಮ್ಮ ಪ್ರತಿಭೆಯನ್ನ ಗುರುತಿಸಿ, ನಮಗೆ ಮತ ಹಾಕಿದ್ದಾರೆ. ಇದು ನನ್ನ ಮೊದಲ ಗೆಲುವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here