ಭಟ್ಟರ ಗಾಳಿಪಟ 2 ಚಿತ್ರಕ್ಕೆ ಮತ್ತಷ್ಟು ರಂಗು ಹೆಚ್ಚಿಸಲಿದ್ದಾರಾ? ನ್ಯಾಷನಲ್ ಸ್ಟಾರ್

0
763

ಬಹಳ ವರ್ಷಗಳ ಹಿಂದೆ ಭಟ್ಟರ ನಿರ್ದೆಶನದಲ್ಲಿ ಗಾಳಿಪಟ ಎನ್ನುವ ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಸೂಪರ್ ಹಿಟ್ ಆಗುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಬಣ್ಣ ಹಚ್ಚಿದ್ದರು. ಚಿತ್ರದ ಕಥೆಯ ಜೊತೆ ಭಟ್ಟರ ಸಂಭಾಷಣೆ ಮತ್ತು ಹಾಡುಗಳು ಅಭಿಮಾನಿಗಳನ್ನು ಚಿತ್ರ ಮಂದಿರದತ್ತ ಸೆಳೆದಿತ್ತು. ಈಗ ಮತ್ತೊಮ್ಮೆ ಯೋಗರಾಜ್ ಭಟ್ಟರು ಗಾಳಿಪಟವನ್ನು ಹಾರಿಸಲು ಸಜ್ಜಾಗಿದ್ದಾರೆ. ಗಾಳಿಪಟ ಎರಡನೆ ಭಾಗದಲ್ಲಿ ಗಣೇಶ್, ದಿಗಂತ್ ಮತ್ತು ಲೂಸಿಯಾ ಪವನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಿಷಿ ಮತ್ತು ಶರಣ್ ಅವರ ಹೆಸರು ಸಹ ಕೇಳಿ ಬರುತ್ತಿದೆ. ಪಂಚತಂತ್ರ ಚಿತ್ರದಲ್ಲಿ ನಾಯಕಿಯಾದ ಸೋನೆಲ್, ಮತ್ತು ಶರ್ಮಿಳಾ ನಾಯಕಿಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ನಟಿಸುತ್ತಾರಾ ಪ್ರಭುದೇವ?

ಚಿತ್ರರಂಗದಲ್ಲಿ ಹೆಸರಾಂತ ಡ್ಯಾನ್ಸರ್ ಮತ್ತು ಕಲಾವಿದರಾಗಿ ಗುರುತಿಸಿಕೊಂಡ ಪ್ರಭುದೇವ್ ಈಗ ಗಾಳಿಪಟ 2 ಚಿತ್ರತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಸದ್ಯಕ್ಕೆ ಪ್ರಭುದೇವ ಅವರು ದಬಾಂಗ್ 2 ಚಿತ್ರ ನಿರ್ದೆಶಿಸುವುದರಲ್ಲಿ ನಿರತರಾಗಿದ್ದು, ಶೀಘ್ರದಲ್ಲೆ ಗಾಳಿಪಟ 2 ಸೆಟ್ ಗೆ ಸೇರ್ಪಡೆಯಾಗಲಿದ್ದರಾ?. ಬಹಳ ವರ್ಷಗಳ ಹಿಂದೆ ಪ್ರಭುದೇವ ಉಪೇಂದ್ರ ನಟಿಸಿದ್ದ h20 ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ಯಾವ ಕನ್ನಡ ಚಿತ್ರಗಳಲ್ಲಿ ಇವರು ನಟಿಸಿರಲಿಲ್ಲ. ಬಹಳ ವರ್ಷಗಳ ನಂತರ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಗಾಳಿಪಟ 2 ಬಹುಬಾಷೆಯಲ್ಲಿ ಬಿಡುಗಡೆಮಾಡಬೇಕೆಂದು ಭಟ್ಟರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಇನ್ನು ನ್ಯಾಷನಲ್ ಸ್ಟಾರ್ ಇಂದ ಯಾವುದೆ ಗ್ರೀನ್ ಸಿಗ್ನಲ್ ದೊರೆತಿಲ್ಲ.

ನ್ಯಾಷನಲ್ ಸ್ಟಾರ್ ನನ್ನ ಭೇಟಿ ಮಾಡಿದ ವಿಕಟ ಕವಿ

ನಿರ್ದೇಶಕರ ಜೊತೆ ಚಿತ್ರತಂಡದವರು ಸಹ ಪ್ರಭುದೇವ್ ಅವರನ್ನು ಭೇಟಿ ಮಾಡಿದ್ದು, ಒಂದು ಸುತ್ತು ಮಾತು ಕಥೆಯನ್ನು ನಡೆಸಿದ್ದಾರಂತೆ. ವಿಕಟ ಕವಿ ಮತ್ತು ಚಿತ್ರದ ನಿರ್ಮಾಪಕರಾದ ಮಹೇಶ್ ಧನ್ವಿರ್ ಇಬ್ಬರು ಪ್ರಭು ಅವರ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

ಸದ್ಯಕ್ಕೆ ಯೋಗರಾಜ್ ಭಟ್ಟರು ಗಾಳಿಪಟ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಭಟ್ಟರು ಮುಂಬೈ ಗೆ ತೆರಳಿ ಪ್ರಭು ಅವರನ್ನು ಭೇಟಿ ಮಾಡಿದ್ದಾರೆ. ಗಾಳಿಪಟ 2 ಚಿತ್ರದಲ್ಲಿ ಭಟ್ಟರ ಕರಾಮತ್ತು ಹೇಗಿರುತ್ತದೆ ಎನ್ನುವುದೆ ಕುತೂಹಲಕಾರಿಯಾಗಿದೆ. ಚಿತ್ರ ಬಿಡುಗಡೆಯಾಗುವವರೆಗು ನಾವು ಕಾಯಲೆಬೇಕಾಗಿದೆ.

LEAVE A REPLY

Please enter your comment!
Please enter your name here