ನಿವೇದಿತ ಗೌಡ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿರುವುದಾದ್ರು ಯಾಕೆ?

0
1057

ಕೆಲವು ವರ್ಷಗಳ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ನಿವೇದಿತಾ ಗೌಡ ಅವರು ಭಾಗವಹಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ವಿಶಿಷ್ಟವಾದ ಶೈಲಿಯಲ್ಲಿ ಮಾತನಾಡುವ ಮೂಲಕ ಜನಪ್ರಿಯರಾಗಿದ್ದರು. ಖ್ಯಾತ ಗಾಯಕರಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಶೋ ನಲ್ಲಿ ಬಹಳ ಆತ್ಮಿಯರಾಗಿದ್ದರು. ನಂತರ ಬಿಗ್ ಬಾಸ್ ನಲ್ಲಿ ನಡೆದ ಕಥೆ ನಿಮಗೆ ಗೊತ್ತೆ ಇದೆ. ಬಿಗ್ ಬಾಸ್ ನಂತರ ನಿವೇದಿತಾ ಗೌಡ ಅವರ ಹವಾ ಕಮ್ಮಿ ಆಗಿ ಹೋಗಿದ್ದು, ಆಗೊಮ್ಮೆ ಹೀಗೊಮ್ಮೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಒಂದು ಶೋ ನಲ್ಲಿ ಇವರನ್ನು ತೀರ್ಪುಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ. ಮುಂದೆ ಓದಿ

ನಿವೇದಿತಾ ಗೌಡ ವಿರುದ್ಧ ಜನರು ಗರಂ

ಕೆಲ ದಿನಗಳ ಹಿಂದೆ ಕನ್ನಡದ ಕೋಟ್ಯಾಧಿಪತಿಯ ಕಾರ್ಯಕ್ರಮದಲ್ಲಿ ನಿವೇದಿತಾ ಭಾಗವಹಿಸಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರ್ತಿಯಾಗಿ ಆಯ್ಕೆ ಮಾಡಿದ್ದಾರೆ. ಒಂದು ಹಾಸ್ಯಮಯವಾದ ಕಾರ್ಯಕ್ರಮಕ್ಕೆ ಈ ಹುಡುಗಿಯನ್ನು ತೀರ್ಪುಗಾರರ ಸ್ಥಾನವನ್ನು ಕೊಟ್ಟಿದ್ದು, ನಾಡಿನ ಜನತೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು ಹಾಸ್ಯಮಯವಾದ ಕಾರ್ಯಕ್ರಮಕ್ಕೆ ಯಾರನ್ನು ಜಡ್ಜ್ ಅನ್ನಾಗಿ ಆಯ್ಕೆ ಮಾಡಬೇಕೆನ್ನುವ ಸಾಮಾನ್ಯ ಪ್ರಜ್ಞೆ ಸಹ ಕಾರ್ಯಕ್ರಮ ನಡೆಸುವವರಿಗೆ ಇಲ್ಲವೆಂದು ಜನರು ಕಿಡಿಕಾರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಾಸ್ಯ ನಟರಿದ್ದಾರೆ, ಅವರಲ್ಲಿ ಯಾರನ್ನು ಒಬ್ಬರನ್ನು ಆಯ್ಕೆ ಮಾಡಬಹುದಿತ್ತು.

ಹಿರಿಯ ಹಾಸ್ಯ ಕಲಾವಿದರಿಗೆ ಪ್ರಾಮುಖ್ಯತೆ ಇಲ್ಲದಂತೆಯಾಗಿದೆ

ಹಾಸ್ಯ ಕಲಾವಿದರಾದ ಚಿಕ್ಕಣ್ಣ, ರಂಗಾಯಣ ರಘು, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ಬುಲೆಟ್ ಪ್ರಕಾಶ್, ಉಮೇಶ್, ಬಿರಾದಾರ್ ಇನ್ನು ಅನೇಕರು ಒಳ್ಳೆಯ ಹಾಸ್ಯ ಕಲಾವಿದರೆಂದು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.. ಇಂತಹ ಕಲಾವಿದರನ್ನು ತೀರ್ಪುಗಾರನ್ನಾಗಿ ಆಯ್ಕೆ ಮಾಡುವುದನ್ನು ಬಿಟ್ಟು, ಕಾಮಿಡಿ ಎನ್ನುವ ವಿಷಯದ ಬಗ್ಗೆ ಎಳ್ಳಷ್ಟು ಗೊತ್ತಿರದ ನಿವೇದಿತಾ ಗೌಡ ಅವರನ್ನು ತಂದು ಕೂರಿಸುವುದಕ್ಕೆ ಜನರು ಕೋಪಗೊಂಡಿದ್ದಾರೆ. ಹಾಸ್ಯ ಕಲಾವಿದರನ್ನು ತೆಗೆದುಕೊಳ್ಳದೆ ಹೋದರೆ ಜನರು ಉಗಿಯುತ್ತಾರೆ ಎಂದು ಜನರೆ ಸಾಮಾಜಿಕ ಜಾಲ ತಾಣಗಳಲ್ಲಿ ನಿಂದಿಸುತ್ತಿದ್ದಾರೆ.

ಕೇವಲ ಟಿ ಆರ್ ಪಿ ಗಾಗಿ ಡಬ್ಬ ಪ್ರೋಗ್ರಾಮ್ ಮಾಡುವುದನ್ನ ನಿಲ್ಲಿಸಿ

ಹಾಸ್ಯ ಕಲಾವಿದರನ್ನು ಕರೆಸಿದರೆ ಕಾರ್ಯಕ್ರಮದಲ್ಲಿ ಸ್ಪರ್ದಿಸುತ್ತಿರುವ ಸ್ಪರ್ದಿಗಳಿಗು ಕಲಿಯುವಂತಹ ಅವಕಾಶ ಸಿಗುತ್ತದೆ, ನಿಮ್ಮ ವಾಹಿನಿಗು ಒಳ್ಳೆದಾಗುತ್ತದೆ ಎನ್ನುವ ಸಲಹೆಯನ್ನು ಜನರು ನೀಡುತ್ತಿದ್ದಾರೆ. ರಂಗಭೂಮಿಯ ಕಲಾವಿದರನ್ನು ಆಯ್ಕೆ ಮಾಡಿ ಎಂದು ಜನ ನಿವೇದಿತ ವಿರುದ್ಧ ಮತ್ತು ಆ ಕಾರ್ಯಕ್ರಮದ ವಿರುದ್ಧ ಧ್ವನಿ ಎತ್ತಿದ್ದಾರೆ. ನಿವೇದಿತಾ ಅವರಿಗೆ ಕನ್ನಡವೆ ಸ್ಪಷ್ಟವಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ಚಿತ್ರರಂಗದಲ್ಲಿ ಇದ್ದ ಹಿರಿಯ ಕಲಾವಿದರನ್ನು ಶೋ ಗೆ ಆಮಂತ್ರಿಸಿ ತೀರ್ಪುಗಾರರ ಸ್ಥಾನ ನೀಡಿ. ಕೇವಲ ಟಿ ಆರ್ ಪಿ ಗಾಗಿ ಡಬ್ಬ ಪ್ರೋಗ್ರಾಮ್ ಮಾಡುವುದನ್ನ ನಿಲ್ಲಿಸಿ ಕನ್ನಡದ ಮಾನ ಉಳಿಸಿ ಎಂದು ಜನ ಟೀಕಿಸುತ್ತಿದ್ದಾರೆ.

ಡಾನ್ಸ್ ಶೋನಲ್ಲು ಹೀಗೆ ಆಗುತ್ತಿದೆ

ಕನ್ನಡ ಚಿತ್ರರಂಗದಲ್ಲಿ ಡಾನ್ಸ್ ಎನ್ನುವ ವಿಷಯ ಬಂದರೆ ವಿನೋದ್ ರಾಜ್ ಪೂರ್ಣಪ್ರಮಾಣದ ಅರ್ಹತೆ ಇರುವ ಅತ್ಯುತ್ತಮವಾದ ಡ್ಯಾನ್ಸರ್. ಆದರೆ ಇಲ್ಲಿಯವರೆಗು ಇವರ ಪ್ರತಿಭೆಯನ್ನು ಯಾವ ಒಂದು ವಾಹಿನಿಯು ಸಹ ಗುರುತಿಸಿಲ್ಲ.

ಒಂದು ಡಾನ್ಸ್ ಶೋಗೆ ಬೇಕಾದ ಎಲ್ಲ ಲಕ್ಷಣಗಳು ಇವರ ಹತ್ತಿರ ಇದ್ದರು ಸಹ ಯಾಕೆ ಇವರನ್ನು ಕಾರ್ಯಕ್ರಮಗಳಿಗೆ ಜಡ್ಜ್ ಸ್ಥಾನಕ್ಕೆ ಆಹ್ವಾನಿಸುತ್ತಿಲ್ಲ ಎಂದು ವಾಹಿನಿಗಳ ವಿರುದ್ಧ ಈ ಹಿಂದೆ ಕಿಡಿ ಕಾರಿದ್ದರು.

LEAVE A REPLY

Please enter your comment!
Please enter your name here