ಪೈಲ್ವಾನ್ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ. ಯಾವಾಗ? ಬಂದಾ ನೋಡೋ ಪೈಲ್ವಾನ್

0
1393
pailwaan

ಸ್ಯಾಂಡಲ್ ವುಡ್ ಅಲ್ಲಿ ಕಿಚ್ಚ ಸುದೀಪ್ ಅವರು ನಟಿಸಿರುವ ಚಲನಚಿತ್ರಗಳು ಬಿಡುಗಡೆ ಆಗಲು ತುದಿಗಾಲಿನಲ್ಲಿ ನಿಂತಿವೆ, ಪೈಲ್ವಾನ್ ಚಿತ್ರದ ಟೀಸರ್ ನೋಡಿದ ಜನರು ಸಿನೆಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಟೀಸರ್ ಬಿಡುಗಡೆ ಆಗಿದ್ದೆ ತಡ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಕೇವಲ ಕನ್ನಡ ಭಾಷೆವಲ್ಲದೆ ಇತರ ಭಾಷೆಯ ಸಿನೆಮಾದಲ್ಲಿಯೂ ಇವರು ನಟಿಸಿದ್ದಾರೆ, ಆದರೇ ಈಗ ಸಧ್ಯಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುಂದೆ ಓದಿ

ಪೈಲ್ವಾನ್ ಚಿತ್ರದ ಬಿಡುಗಡೆಯ ದಿನಾಂಕ ಖಚಿತವಾಗಿದೆ

ದಿ ವಿಲ್ಲನ್ ಚಿತ್ರದ ನಂತರ ಕಿಚ್ಚನ ಸಿನೆಮಾಗಳು ಬಿಡುಗಡೆ ಆಗಲೇ ಇಲ್ಲ, ಇದೇ ಇವರ ಕೊನೆ ಸಿನೆಮಾವಾಗಿದ್ದು ಅಭಿಮಾನಿಗಳು ಇವರ ಸಿನೆಮಾವನ್ನು ನೋಡಲು ಕಾತರಿಸುತ್ತಿದ್ದಾರೆ. ಅಭಿನಯ ಚಕ್ರವರ್ತಿಯ ಅಭಿನಯವನ್ನು ನೋಡಲಾರದೇ ಬಹಳ ದಿನಗಳು ಕಳೆದವು ಈಗ ಸುದೀಪ್ ಅವರು ಅಭಿನಯಿಸಿರುವ ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಹೌದೂ ಸುದೀಪ್ ಅವರು ಅಭಿನಯಿಸಿದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರ ನಿಮ್ಮ ಮುಂದೆ ಬರಲಿದೆ. ಕಿಚ್ಚನ ದೇಹಸಿರಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದರು, ಈ ಸಿನೆಮಾಕ್ಕಾಗಿ ಸುದೀಪ್ ಅವರು ಬಹಳ ಕಷ್ಟ ಪಟ್ಟಿದ್ದಾರೆ.

pailwaan

ಕೋಟಿಗೊಬ್ಬ 3 ಚಿತ್ರದ ರಿಲೀಸ್ ಡೇಟ್ ಕೂಡ ಹೊರ ಬಿದ್ದಿದೆ

ಪ್ರತಿನಿತ್ಯ ಜಿಮ್ ಅಲ್ಲಿ ಇವರ ಕಸರತ್ತು ಜೋರಾಗೆ ಸಾಗಿತ್ತು, ಪಾತ್ರಕ್ಕಾಗಿ ಅವರು ತಮ್ಮ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಟೀಸರ್ ಅನ್ನು ನೋಡಿದವರಿಗೆ ಇವರ ಪರಿಶ್ರಮ ಎದ್ದು ಕಾಣುತ್ತದೆ. ಪೈಲ್ವಾನ್ ಬೆನ್ನ ಹಿಂದೆಯೇ ಕಿಚ್ಚ ತೊಡಗಿಸಿಕೊಂಡಿದ್ದ ಕೋಟಿಗೊಬ್ಬ 3 ಚಿತ್ರದ ರಿಲೀಸ್ ಡೇಟ್ ಕೂಡ ಹೊರ ಬಿದ್ದಿದೆ. ಹಾಗಾದರೆ ಯಾವಾಗ ಈ ಎರಡು ಚಿತ್ರಗಳು ತೆರೆ ಕಾಣಲಿವೆ ಮೊದಲು ಯಾವ ಚಿತ್ರ ಬಿಡುಗಡೆ ಆಗುತ್ತದೆ ಎನ್ನುವ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

kotigobba 3

ಆಗಸ್ಟ್ 8 ರಂದು ಪೈಲ್ವಾನ್ ಚಿತ್ರ ದೇಶಾದ್ಯಂತ 8 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ

ಹೌದೂ ಪೈಲ್ವಾನ್ ಚಿತ್ರ ಆಗಸ್ಟ್ 8 ರಂದು ಬಿಡುಗಡೆ ಆಗಲಿದೆ, ಹೆಬ್ಬುಲಿ ಸಿನೆಮಾ ನಂತರ ಸುದೀಪ್ ಅವರ ಜೊತೆ ನಿರ್ದೇಶಕ ಕೃಷ್ಣ ಅವರು ಪೈಲ್ವಾನ್ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಆರ್ ಆರ್ ಮೋಷನ್ ಪಿಕ್ಚರ್ ಬ್ಯಾನರ್ನಲ್ಲಿ ಸಿನೆಮಾ ನಿರ್ಮಾಣವಾಗುತ್ತಿದೆ. ಇದೇ ಮೊದಲನೇ ಬಾರಿಗೆ ನೀವು ಕಿಚ್ಚ ಸುದೀಪ್ ಅವರನ್ನು ವಿಭಿನ್ನವಾದ ಶೈಲಿ ಅಲ್ಲಿ ನೋಡಬಹುದು ಏಕೆಂದರೆ ಇದುವರೆಗೂ ಕಿಚ್ಚ ಯಾವ ಚಿತ್ರಕ್ಕಾಗಿಯೂ ದೇಹವನ್ನು ದಂಡಿಸಿರಲಿಲ್ಲ, ಆದ್ದರಿಂದ ಕಟ್ಟು ಮಸ್ತಾದ ದೇಹವನ್ನು ನೀವು ಪೈಲ್ವಾನ್ ಅಲ್ಲಿ ನೋಡಬಹುದು. ಪೈಲ್ವಾನ್ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ ಬಾರೊಬ್ಬರಿ 8 ಭಾಷೆಯಲ್ಲಿ ಸಿನೆಮಾ ತೆರೆ ಕಾಣಲಿದೆ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಳಿ, ಭೋಜ್ ಪುರಿ ಸೇರಿದಂತೆ ಮರಾಠಿ ಭಾಷೆಯಲ್ಲೂ ಬಿಡುಗಡೆ ಆಗಲಿದೆ.

ಸುದೀಪ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ದಿನದಂದು ಉಡುಗೊರೆ ನೀಡಲು ಚಿತ್ರತಂಡದವರು ಸಜ್ಜಾಗಿದ್ದಾರೆ

ಕೋಟಿಗೊಬ್ಬ 3 ಸಿನೆಮಾದ ಚಿತ್ರೀಕರಣದಲ್ಲಿ ಸುದೀಪ್ ಅವರು ತೊಡಗಿಸಿಕೊಂಡಿದ್ದರು, ಈ ಚಿತ್ರಕ್ಕೂ ಬಿಡುಗಡೆಯ ಭಾಗ್ಯ ಸಿಕ್ಕಿದೆ, 70 ಪರ್ಸೆಂಟ್ ಅಷ್ಟು ಚಿತ್ರೀಕರಣ ಮುಗಿದಿದ್ದು ನವಂಬರ್ 1 ರಂದು ಬಿಡುಗಡೆ ಮಾಡಲು ಚಿತ್ರ ತಂಡದವರು ಆಲೋಚಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ದಿನದಂದು ಸಿನೆಮಾ ಬಿಡುಗಡೆ ಮಾಡುವ ಮೂಲಕ ಸುದೀಪ್ ಅಭಿಮಾನಿಗಳಿಗೆ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಸೂರಪ್ಪ ಬಾಬು ಅವರು ಬಂಡವಾಳ ಹಾಕಿದ್ದು, ಶಿವ ಕಾರ್ತಿಕ್ ಅವರು ಸಿನೆಮಾ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

kotigobba 3

ನರಸಿಂಹ ರೆಡ್ಡಿ ಮೇ ತಿಂಗಳಿನಲ್ಲಿ ಬಿಡುಗಡೆ ಆದರೆ, ದಬಾಂಗ್ 3 ಚಿತ್ರ ಡಿಸೆಂಬರ್ 20ಕ್ಕೆ ತೆರೆ ಕಾಣಲಿದೆ

ಇನ್ನು ಸುದೀಪ್ ನಟಿಸಿರುವ ತೆಲುಗು ಸಿನೆಮಾ ಸೈರಾ ನರಸಿಂಹ ರೆಡ್ಡಿ ಮುಂದಿನ ವರ್ಷ ಜನವರಿ 18 ರಂದು ಬಿಡುಗಡೆ ಆಗಲಿದೆ. ದಬಾಂಗ್ 3 ಚಿತ್ರ ಡಿಸೆಂಬರ್ 20 ಕ್ಕೆ ತೆರೆಕಾಣಲಿದೆ. ಮೇ 4 ರಂದು ದಬಾಂಗ್ ಚಿತ್ರೀಕರಣಕ್ಕೆ ಕಿಚ್ಚ ಹೊರಡಲಿದ್ದಾರಂತೆ, ಬಾಲೀವುಡ್ ಅಂಗಳದಲ್ಲೂ ಅಭಿನಯ ಚಕ್ರವರ್ತಿಗೆ ಭಾರಿ ಬೇಡಿಕೆ ಇದೇ ಎನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here