ದಚ್ಚು ಹಾಗೂ ಕಿಚ್ಚನ ನಡುವೆ ಮತ್ತೆ ವಾರ್ ಆಗೋ ಸಾಧ್ಯತೆ ಇದೆಯಂತೆ. ಏನಿದು ಸ್ಟೋರಿ.

0
861
dachhu hagu kichha

ಶುಕ್ರವಾರ ಆಯಿತು ಅಂದ್ರೆ ಸಾಕು ಸಿನಿರಸಿಕರಿಗೆ ಹಬ್ಬವೋ, ಹಬ್ಬ. ಯಾಕಂದ್ರೆ, ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾ ಬಿಡುಗಡೆಯಾಗುತ್ತೋ ಅಂತ ಕಾಯುತ್ತಿರುತ್ತಾರೆ. ಯಾಕಂದ್ರೆ, ನಮ್ಮಲ್ಲಿ ಸಿನಿಮಾ ಪ್ರಿಯರು ಬಹಳಷ್ಟು ಮಂದಿ ಇದ್ದಾರೆ. ಇನ್ನೂ ಕೆಲವರು ಹೇಗೆ ಅಂದ್ರೆ, ಯಾವ ಸಿನಿಮಾ ಆದ್ರೂ ಪರವಾಗಿಲ್ಲ, ಹೋಗಿ ನೋಡುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ನಾಯಕನ ಸಿನಿಮಾ ತೆರೆ ಮೇಲೆ ಬರುತ್ತೆ ಅಂದ್ರೆ ಸಾಕು, ಇರೋ ಕೆಲಸ ಎಲ್ಲಾ ಬಿಟ್ಟು ಫಸ್ಟ್ ಡೇ, ಫಸ್ಟ್ ಶೋ ಗೆ ಹೋಗ್ತಾರೆ.

ಸಾಮಾನ್ಯವಾಗಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ವಾರ್ ಆಗೋದು ಕಡಿಮೆ. ಅಂದ್ರೆ, ಒಂದೇ ದಿನ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗೋದು ಕಡಿಮೆ. ಎಲ್ಲೋ ಒಂದೊಂದು ಸಾರಿ ಆಗುತ್ತೆ ಅಷ್ಟೇ. ಅಂತ ಸಮಯದಲ್ಲಿ ನಮ್ಮ ಅಭಿಮಾನಿಗಳನ್ನ ಹಿಡಿಯೋಕೆ ಆಗಲ್ಲ. ಜೊತೆಗೆ ಸಿನಿಮಾ ನಾಯಕರಿಗೂ, ಅದು ಒಂದು ರೀತಿ ಬೇಸರವಾಗಿರುತ್ತದೆ. ಯಾಕಂದ್ರೆ, ಎರಡು ಸಿನಿಮಾಗಳು ಒಂದೇ ಸಾರಿ ತೆರೆ ಮೇಲೆ ಬರೋದ್ರಿಂದ, ಸುಮ್ಮನೆ ಎರಡು ಸಿನಿಮಾಗಳು ಯಶಸ್ವಿ ಕಾಣುವುದಿಲ್ಲ ಅಂತ. ಈಗ ಇದೇ ರೀತಿ ಒಂದು ವಾರ್ ಆಗೋ ಸಾಧ್ಯತೆ ಇದೆ. ಅದು ದೊಡ್ಡ ಸ್ಟಾರ್ ನಟರ ಮಧ್ಯೆ.

ದಚ್ಚು ಹಾಗೂ ಕಿಚ್ಚನ ಮಧ್ಯೆ ನಡೆಲಿದೆಯಾ ವಾರ್

ಹೌದು. ಕನ್ನಡ ಚಿತ್ರರಂಗದಲ್ಲಿ ಕಿಚ್ಚನಿಗೂ ಹಾಗೂ ದಚ್ಚುವಿಗೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಒಬ್ಬರಿಗಿಂತ ಏನು, ಇನ್ನೊಬ್ಬರು ಕಮ್ಮಿ ಇಲ್ಲ. ಇವರಿಬ್ಬರನ್ನ ನೋಡಿದ್ರೆ, ಎಂಥವರಿಗೂ ನಿಜಕ್ಕೂ ಖುಷಿಯಾಗುತ್ತೆ. ಯಾಕಂದ್ರೆ ಇವರಿಬ್ಬರ ತರ, ಸ್ನೇಹಿತರು ಬೇರೆ ಯಾರೂ ಇಲ್ಲ ಅಂತ. ಆದ್ರೆ ಈಗ ಇವರಿಬ್ಬರು ಹೇಗಿದ್ದಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಒಬ್ಬರನ್ನ ಕಂಡರೆ, ಇನ್ನೊಬ್ಬರಿಗೆ ಆಗದೆ ಇರೋ ರೀತಿ ಇದ್ದಾರೆ. ಆದ್ರೆ ಈಗ ಸ್ವಲ್ಪ ದಿನಗಳಿಂದ ಇವರ ನಡುವಿನ ಮಾತಿನ ಚಕಮಕಿ ಕಡಿಮೆ ಆಗಿತ್ತು. ಆದ್ರೆ ಈಗ ತಮ್ಮ ಸಿನಿಮಾಗಳ ಮೂಲಕ ಮತ್ತೆ ವಾರ್ ನಡೆಸಲಿದ್ದಾರೆ ಎನಿಸುತ್ತಿದೆ.

ಒಂದೇ ದಿನದಲ್ಲಿ ತೆರೆ ಮೇಲೆ ಬರಲಿದೆಯಂತೆ ಪೈಲ್ವಾನ್, ಹಾಗೂ ಕುರುಕ್ಷೇತ್ರ

ಮೊನ್ನೆ ತಾನೆ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಫೈಲ್ವಾನ್ ಚಿತ್ರದ ಬಿಡುಗಡೆ ದಿನವನ್ನ ತಿಳಿಸಿದ್ರು. ಇನ್ನೇನು ಅಭಿಮಾನಿಗಳು ಫೈಲ್ವಾನ್ ಚಿತ್ರ ನೋಡ್ಬೇಕಪ್ಪಾ ಅನ್ನೋ ಅಷ್ಟ್ರಲ್ಲಿ, ಈಗ ಕುರುಕ್ಷೇತ್ರ ತಂಡ ದೊಡ್ಡ ಟ್ವಿಸ್ಟ್ ನೀಡುತ್ತಿದೆ. ಹೌದು. ಫೈಲ್ವಾನ್ ಚಿತ್ರದ ದಿನವೇ, ಕುರುಕ್ಷೇತ್ರ ಸಿನಿಮಾ ಕೂಡ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಈಗ ಇದು ನಿಜಕ್ಕೂ ಒಂದು ಆಶ್ಚರ್ಯ ಹಾಗೂ ಕುತೂಹಲದ ವಿಷವಾಗಿದೆ. ಯಾಕಂದ್ರೆ, ಮೊದಲೇ ಈ ಇಬ್ಬರು ನಟರಿಗೆ ಒಬ್ಬರನ್ನ ಕಂಡರೆ, ಇನ್ನೊಬ್ಬರಿಗೆ ಆಗಲ್ಲ. ಹೀಗಿರುವಾಗ ಒಂದೇ ದಿನದಲ್ಲಿ ಇವರ ಚಿತ್ರಗಳು ತೆರೆ ಕಂಡರೆ, ಅದರಿಂದ ಆಗುವ ಅಂಶಗಳನ್ನ ಇವರಿಬ್ಬರು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದೇ ಕುತೂಹಲವಾಗಿದೆ.

8 ಭಾಷೆಯ ಪೈಲ್ವಾನ್, 5 ಭಾಷೆಯ ಕುರುಕ್ಷೇತ್ರ

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬರೋಬ್ಬರಿ 8 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಬೋಜ್ ಪುರಿ ಮತ್ತು ಮರಾಠಿ ಭಾಷೆಯಲ್ಲಿ ಪೈಲ್ವಾನ್ ಅಬ್ಬರಿಸಲಿದೆ. ಆದ್ರೆ ಈಗ ಇದೇ ಸಮಯಕ್ಕೆ ಕುರುಕ್ಷೇತ್ರ ಕೂಡ 5 ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಕುರುಕ್ಷೇತ್ರಕ್ಕೆ ಇನ್ನೂ ಸಮಯ ಇದೆ ಅಂತ ಎಲ್ಲರೂ ತಿಳಿದಿದ್ದರು. ಆದರೆ ಮೊನ್ನೆ ಮೊನ್ನೆಯಷ್ಟೇ ಚಿತ್ರತಂಡ ಕೆಲವು ಪೋಸ್ಟರ್ ಗಳನ್ನ ಬಿಡುಗಡೆ ಮಾಡಿತ್ತು. ಆಗಲು, ಯಾವುದೇ ಸುಳಿವನ್ನ ನೀಡಿರಲಿಲ್ಲ. ಆದ್ರೆ ಈಗ ಆಗಸ್ಟ್ ತಿಂಗಳಲ್ಲೇ ಸಿನಿಮಾ ರಿಲೀಸ್ ಮಾಡೋಕೆ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.

ಅಧಿಕೃತವಾಗಿ ಘೋಷಣೆ ಮಾಡಲಿರುವ ಕುರುಕ್ಷೇತ್ರ ತಂಡ

ಸದ್ಯಕ್ಕೆ ಚಿತ್ರತಂಡ, ಯಾವಾಗ ಬಿಡುಗಡೆ ಮಾಡಬಹುದು ಎನ್ನುವ ಸುಳಿವು ನೀಡಿದೆ. ಆದ್ರೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದ್ರೆ ಸಿನಿಮಾದ ಎಲ್ಲಾ ಪೋಸ್ಟರ್ ಗಳು ತಯಾರಾಗಿವೆ. ಆದ್ರೆ ಘೋಷಣೆ ಮಾಡುವುದು ಮಾತ್ರ ಬಾಕಿ ಉಳಿದಿದೆ. ಚಿತ್ರ ತಂಡ ಮಾಡಿರುವ ಪ್ಲಾನ್ ಪ್ರಕಾರ, ಪೈಲ್ವಾನ್ ಹಾಗೂ ಕುರುಕ್ಷೇತ್ರ ಒಂದೇ ದಿನ ತೆರೆಗೆ ಬರುವ ಸಾಧ್ಯತೆ ಇದೆ.

ಏನೇ ಹೇಳಿ. ದಚ್ಚು ಹಾಗೂ ಕಿಚ್ಚನ ನಡುವಿನ ಸಂಬಂಧ ಅವಿನಾಭಾವವಾಗಿತ್ತು. ಆದ್ರೆ ಈಗ ಅವರಿಬ್ಬರ ನಡುವೆ ಬಿರುಕುಂಟಾಗಿದೆ. ಆದ್ರೆ ಈಗ ಇವರಿಬ್ಬರ ಸಿನಿಮಾಗಳು ಒಂದೇ ದಿನ ತೆರೆ ಮೇಲೆ ಬಂತು ಅಂದ್ರೆ ಮುಗಿತು, ಇಬ್ಬರು ನಾಯಕರು ಆಗ ಮುಖಾಮುಖಿಯಾಗಲೇ ಬೇಕು. ಆಗ ಅವರಿಬ್ಬರ ಮಾತುಕತೆ ನಡೆಯುತ್ತಾ, ಅಥವಾ ಇಲ್ವಾ ಅನ್ನೋದನ್ನ ಕಾದು ನೋಡಬೇಕು

LEAVE A REPLY

Please enter your comment!
Please enter your name here