ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ನಿವೇದಿತಾ. ಯಾವ ಕೆಲಸ?

0
518
niveditha gowda

ಇತ್ತೀಚೆಗೆ ಗೊಂಬೆ ಎನ್ನುವ ಪದ ಕೇಳಿದ ಕೂಡಲೇ ನೆನೆಪಾಗುವುದು ಅಂದ್ರೆ ಅದು ನಿವೇದಿತಾ ಗೌಡ. ಹೌದು. ಚಂದನ್ ಶೆಟ್ಟಿ ಯಾವಾಗ ನಿವೇದಿತಾಗೆ ಗೊಂಬೆ ಅಂದ್ರೋ, ಆಗಿಂದ ನಿವೇದಿತಾ ಗೊಂಬೆ ಎಂದೇ ಪ್ರಸಿದ್ಧಿಯಾಗಿದ್ದಾರೆ. ಇನ್ನು ನಿವೇದಿತಾ ಗೌಡ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿದ್ದು, ಆಗಿಂದ ಎಲ್ಲರಿಗು ಪರಿಚಿತರಾಗಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳು ಹೊರ ಬಂದ ಮೇಲೆ, ಸಿನಿಮಾ ಹಾಗು ಧಾರಾವಾಹಿ ಅಂತ ಬ್ಯುಸಿಯಾಗುತ್ತಾರೆ. ಅಲ್ಲದೆ, ಅವಕಾಶಗಳು ಸಹ ಅವರನ್ನು ಹುಡುಕಿಕೊಂಡು ಬರುತ್ತವೆ. ಅದೇ ರೀತಿ ನಿವೇದಿತಾ ಕೂಡ ದೊಡ್ಮನೆಯಿಂದ ಹೊರಬಂದ ಮೇಲೆ ಸಿನಿಮಾಗೆ ಹೋಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ರೆ ನಿವೇದಿತಾ ತಮ್ಮ ಜೀವನದ ದಾರಿ ಬದಲಾಯಿಸಿಕೊಂಡಿದ್ದಾರೆ.

ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ನಿವೇದಿತಾ

ನಿವೇದಿತಾ ಗೌಡ. ಬಿಗ್ ಬಾಸ್ ನಿಂದ ಬಂದಮೇಲೆ ಅವರಿಗೆ ಸಿನಿಮಾದಿಂದ ಸಾಕಷ್ಟು ಆಫರ್ ಗಳು ಹುಡುಕಿಕೊಂಡು ಬಂದಿದ್ದವು. ಆದರೆ ಅವರು ಅವೆಲ್ಲವನ್ನು ರಿಜೆಕ್ಟ್ ಮಾಡಿ, ತಮ್ಮದೇ ಆದ ಹೊಸ ದಾರಿ ಕಂಡುಕೊಂಡಿದ್ದಾರೆ. ಹೌದು. ಈಗಷ್ಟೆ ಡಿಗ್ರಿ ಮುಗಿಸಿರುವ ನಿವೇದಿತಾ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ್ದಾರೆ. ಹೌದು. ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ (ಬಿ.ಐ.ಎ.ಎಲ್) ನಲ್ಲಿ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇದು ಅವರ ಕನಸಾಗಿತ್ತಂತೆ. ಹೌದು. ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವುದು ನನ್ನ ಕನಸಾಗಿತ್ತು ಎಂದು ತಿಳಿಸಿದ್ದಾರೆ.

ತಮ್ಮ ಕನಸನ್ನು ಈಡೇರಿಸಿಕೊಂಡ ನಿವೇದಿತಾ

ನಿವೇದಿತಾ ಮೂಲತಃ ಮೈಸೂರಿನವರಾಗಿದ್ದು, ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಸಿಎ ಡಿಗ್ರಿ ಮುಗಿಸಿದ್ದಾರೆ. ಮುಂದೆ ವಿದ್ಯಾಭ್ಯಾಸ ಮುಂದುವರೆಸುವ ಯೋಜನೆ ಹೊಂದಿಲ್ಲದ ನಿವೇದಿತಾ ಗೌಡ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೃತ್ತಿ ಆರಂಭಿಸಿದ್ದಾರೆ. ಇದರ ಜೊತೆಗೆ ಅವರ ಮದುವೆ ಕಾರ್ಯ ಕೂಡ ಅದ್ದೂರಿಯಾಗಿ ನಡೆಯುತ್ತಿದೆ. ಹೌದು. ಮುಂದಿನ ತಿಂಗಳು, ಅಂದ್ರೆ ಫೆಬ್ರವರಿ 25 ಮತ್ತು 26 ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ಫಿಕ್ಸ್ ಆಗಿದ್ದು, ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯಲಿದೆ.

ಒಟ್ಟಿನಲ್ಲಿ ಗೊಂಬೆ ನಿವೇದಿತಾ ಗೌಡ ಬಣ್ಣದ ಲೋಕಕ್ಕೆ ಕಾಲಿಡುವ ಬದಲು, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here