ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವ್ಯಕ್ತಿಗೆ ಬಹುಮಾನ ನೀಡಲಿರುವ ಜಗ್ಗೇಶ್

0
546
nirbhaya case

ಅದೊಂದು ದಿನ ನಿಜಕ್ಕೂ ಭಯ ಹುಟ್ಟಿಸಿತ್ತು. ಹೌದು. ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನು ಆ ಪ್ರಕರಣದ ವಿಚಾರವಾಗಿ ಇಡೀ ದೇಶಾದ್ಯಂತ ಅನೇಕ ಹೋರಾಟಗಳು ನಡೆದಿದ್ದವು. ಆದರೆ ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿರಲಿಲ್ಲ. ಆದರೆ ಈಗ ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ನೀಡುವುದಾಗಿ ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಹೌದು. ಇದೇ ತಿಂಗಳ 22ರಂದು ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇನ್ನು ಇವರನ್ನು ಗಲ್ಲಿಗೆ ಏರಿಸುವ ವ್ಯಕ್ತಿ ಬಗ್ಗೆ ಈಗ ಎಲ್ಲೆಡೆ ಸುದ್ದಿ ಕೇಳಿಬರುತ್ತಿದೆ. ಹೌದು. ಈ ಪಾಪಿಗಳನ್ನು ಗಲ್ಲಿಗೆ ಏರಿಸುವ ಜವಾಬ್ದಾರಿ ಒಬ್ಬರು ಹೊತ್ತಿದ್ದಾರೆ. ಈಗ ಆ ವ್ಯಕ್ತಿಗೆ ನಟ ಜಗ್ಗೇಶ್ ಒಂದು ಲಕ್ಷ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ಜೊತೆಗೆ, ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ.

ಪಾಪಿಗಳನ್ನು ಸಂಹರಿಸಿದರೆ, ಒಂದು ಲಕ್ಷ ಹಣ ನೀಡುತ್ತೇನೆ

ಇದೇ ಜನವರಿ 22ರಂದು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೆ ಏರಿಸಲಾಗುತ್ತಿದೆ. ಇನ್ನು ಈ ಕಾರ್ಯವನ್ನು ಪವನ್ ಜಲ್ಲಾದ್ ಮಾಡುತ್ತಿದ್ದಾರೆ. ಹೌದು. ಇವರೇ ಅಪರಾಧಿಗಳನ್ನು ಗಲ್ಲಿಗೆ ಏರಿಸುತ್ತಿರುವುದು. ಇನ್ನು ಈ ವಿಚಾರ ತಿಳಿದ ಕೂಡಲೇ ನಟ ಜಗ್ಗೇಶ್ ಅವರಿಗೆ ಒಂದು ಲಕ್ಷ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಅದರ ಕಾರಣವನ್ನು ಸಹ ಹೇಳಿದ್ದಾರೆ. ಹೌದು. ಈ ಅಪರಾಧಿಗಳನ್ನು ಗಲ್ಲಿಗೆ ಏರಿಸಲು ಕೆಲವರು ಯೋಚಿಸಿದ್ದಾರೆ. ಹಾಗಾಗಿ ಆ ಸಮಯದಲ್ಲಿ ಪವನ್ ಜಲ್ಲಾದ್ ಗೆ ತಿಳಿಸಿದ್ದಾರೆ. ಇನ್ನು ಈ ಕಾರ್ಯ ಮಾಡಿದರೆ, ಒಂದು ಲಕ್ಷ ಹಣ ನೀಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಗಲ್ಲಿಗೇರಿಸಿದರೆ ನನಗೆ ಒಂದು ಲಕ್ಷ ಹಣ ಸಿಗುತ್ತದೆ, ಇದರಿಂದ ನಾನು ನನ್ನ ಮಗಳ ಮದುವೆ ಮಾಡಬಹುದು ಎಂದು ಭಾವುಕರಾಗಿ ತಿಳಿಸಿದ್ದಾರೆ.

ರಾಕ್ಷಸ ಸಂಹಾರಕ್ಕೆ ಮುಂದಾದ ಪವನ್ ಜಲ್ಲಾದ್

ಇನ್ನು ಪವನ್ ಜಲ್ಲಾದ್ ಈ ವಿಚಾರವನ್ನು ಹೇಳಿದಾಗ, ಜಗ್ಗೇಶ್ ಅವರ ಮಾತಿಗೆ ಭಾವುಕರಾಗಿ ತಾವು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಹೌದು. ಇದಕ್ಕೆ ಟ್ಬೀಟ್ ಮಾಡಿರುವ ಜಗ್ಗೇಶ್, ರಾಕ್ಷಸ ಸಂಹಾರ ಮಾಡುವ ಈ ಕಾರ್ಯವನ್ನು ನೀವು ಮಾಡಿದರೆ ಒಂದು ಲಕ್ಷ ನಿಮಗೆ ನೀಡುತ್ತೇನೆ. ಮಗಳ ಮದುವೆ ಮಾಡುವ ಎನ್ನುವ ನಿಮ್ಮ ಮಾತು ನನ್ನನ್ನು ಭಾವುಕನಾಗಿಸಿದೆ. ಇಂದೇ ನಾನು ದುಡಿದ ಹಣದಲ್ಲಿ ನಿಮಗೆ ದುಡ್ಡು ಎತ್ತಿಡುವೆ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಗಲ್ಲಿಗೇರಿಸುವ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ಕೂಡ ಸಿದ್ಧತೆ ನಡೆಸಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಪವನ್ ಜಲ್ಲಾದ್ ಗೆ ಒಪ್ಪಿಸಿದೆ.

ಒಟ್ಟಿನಲ್ಲಿ ಪವನ್ ಜಲ್ಲಾದ್ ತಮ್ಮ ಮಗಳ ಮದುವೆಗಾಗಿ ಈ ಕಾರ್ಯಕ್ಕೆ ಒಪ್ಪಿದ್ದಾರೆ. ಇನ್ನು ಅವರ ಈ ಕಾರ್ಯಕ್ಕೆ ಎಲ್ಲರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ನಟ ಜಗ್ಗೇಶ್ ಕೂಡ ಸಹಾಯವಾಗಿ ಮಾಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here