ಮೈಸೂರಿನ ನಂದಿ ವಿಗ್ರದಲ್ಲಿ ಬಿಟ್ಟಿರುವ ಬಿರುಕಿಗೆ ಆತಂಕಗೊಂಡಿರುವ ಅಧಿಕಾರಿಗಳು

0
1162
nandi vigraha

ನಮ್ಮ ಕರ್ನಾಟಕ ಒಂದು ಸುಂದರ ತಾಣ. ಯಾಕಂದ್ರೆ ನಮ್ಮಲ್ಲಿ ಅಂತ ಸುಂದರವಾದ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳನ್ನ ನೋಡಲು ಜನರು ಎಲ್ಲೆಲ್ಲಿಂದಲೋ ಬರುತ್ತಾರೆ. ಹೌದು. ನಮ್ಮ ನಾಡನ್ನ ವೀಕ್ಷಿಸಲು ದೇಶ, ವಿದೇಶಗಳಿಂದಲೂ ಜನರು ಬರುತ್ತಾರೆ. ಅದರಲ್ಲೂ ಜನರು ಹೆಚ್ಚಾಗಿ ಭೇಟಿ ನೀಡುವ ಸ್ಥಳ ಅಂದ್ರೆ ಕರ್ನಾಟಕದ ಸಾಂಸ್ಕೃತಿಕ ನಗರಿಯಾಗಿರುವ ಮೈಸೂರಿಗೆ. ಹೌದು. ಮೈಸೂರನ್ನ ನೋಡಲು ಪ್ರತಿದಿನ ಸಾವಿರಾರು ಜನರು ಬರುತ್ತಾರೆ. ಯಾಕಂದ್ರೆ ಮೈಸೂರು ಎಲ್ಲರಿಗೂ ಅಷ್ಟೊಂದು ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಅಷ್ಟು ಅಚ್ಚುಮೆಚ್ಚಿನ ಜಾಗವೊಂದರಲ್ಲಿ ಈಗ ಬಿರುಕು ಬಿಟ್ಟಿದೆ.

ನಂದಿ ವಿಗ್ರಹದಲ್ಲಿ ಬಿರುಕು

ಮೈಸೂರಿಗೆ ಬಂದವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡದೆ ಹೋಗುವುದಿಲ್ಲ. ಅದರಲ್ಲೂ ನಂದಿ ವಿಗ್ರಹಕ್ಕೆ ಬರದೇ ಹೋಗುವವರು ಯಾರು ಇಲ್ಲ. ಪ್ರತಿಯೊಬ್ಬರೂ ಅಲ್ಲಿಗೆ ಭೇಟಿ ನೀಡುತ್ತಾರೆ. ಆದ್ರೆ ಈಗ ಅಂತ ನಂದಿ ವಿಗ್ರಹದಲ್ಲಿ ಬಿರುಕು ಬಿಟ್ಟಿದೆ. ಹೌದು. ಪ್ರಸಿದ್ಧ ಚಾಮುಂಡಿ ಬೆಟ್ಟದ ಮೇಲಿರುವ ನಂದಿ ವಿಗ್ರಹದಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಕಂಡು ಬಂದಿದ್ದು, ಪಾರಂಪರಿಕ ತಜ್ಞರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ಮೈಸೂರು ಪಾರಂಪರಿಕ ಸಮಿತಿ ಸದಸ್ಯರಾಗಿರುವ ಇತಿಹಾಸ ತಜ್ಞ ಪ್ರೊ. ರಂಗರಾಜು ಅವರು ಬೆಟ್ಟಕ್ಕೆ ತೆರಳಿದ್ದರು. ಆಗ ನಂದಿ ವಿಗ್ರಹ ನೋಡಿದಾದ ಬಿರುಕು ಬಿಟ್ಟಿರುವುದು ಕಂಡು ಆತಂಕ ಪಟ್ಟಿದ್ದರು. ಸದ್ಯಕ್ಕೆ ಮೈಸೂರು ಜಿಲ್ಲಾ ಪಾರಂಪರಿಕ ಸಮಿತಿ ಈ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದು, ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರಿಗೆ ಸದ್ಯದಲ್ಲೇ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಿಗ್ರಹದ ಕಿಬ್ಬೊಟ್ಟೆ ಬಳಿ ಬಿರುಕು

ವಿಷಯ ತಿಳಿದ ತಕ್ಷಣವೇ ಎಲ್ಲರೂ ಬಂದು ನೋಡಿದ್ದರೆ. ಆದರೆ ಎಂದಿಗೂ ಇಂಥ ಅನಾಹುತವಾಗಿರಲಿಲ್ಲ. ಆದ್ರೆ ಈಗ ಇಂತ ಅನಾಹುತವಾಗಿರುವುದರಿಂದ ಅಲ್ಲಿನ ಅಧಿಕಾರಿಗಳಿಗೆ ಆತಂಕ ತರಿಸಿದೆ. ಹಾಗಾಗಿ ಆದಷ್ಟು ಬೇಗ ವಿಗ್ರಹದ ಕಾರ್ಯ ಪೂರ್ಣವಾಗಬೇಕು. ಇರುವ ಕೆಲಸವನ್ನೆಲ್ಲ ಬಿಟ್ಟು, ಆದಷ್ಟು ಬೇಗ ವಿಗ್ರಹದ ಕೆಲಸವಾಗಬೆಕು. ವಿಗ್ರಹದ ಸಂರಕ್ಷಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಪ್ರಮುಖವಾಗಿ ಶಿಫಾರಸ್ಸು ಮಾಡುತ್ತೇವೆ. ವಿಗ್ರಹದಲ್ಲಿ ಬಿರುಕು ಆಗದಂತೆ ತಡೆಯುವ ಕಾರ್ಯವನ್ನು ಪ್ರಾಚ್ಯವಸ್ತು ಇಲಾಖೆ ಮಾಡಲಿದೆ ಎಂದು ಪ್ರೊ. ರಂಗರಾಜು ತಿಳಿಸಿದ್ದಾರೆ.

ಮೈಸೂರಿನಲ್ಲಿ ಭೇಟಿ ನೀಡದೆ ಹೋಗಲಾಗದಿರುವ ಸ್ಥಳ ಅಂದ್ರೆ ಅದು ನಂದಿ ವಿಗ್ರಹ. ಆದ್ರೆ ಈಗ ನಂದಿ ವಿಗ್ರಹದಲ್ಲಿ ಬಿರುಕು ಬಿಟ್ಟಿರುವುದು ಅಧಿಕಾರಿಗಳ ಜೊತೆಗೆ, ಜನರಲ್ಲೂ ಆತಂಕ ಮೂಡಿಸಿದೆ. ಆದರೆ ಆದಷ್ಟು ಬೇಗ ಎಲ್ಲವನ್ನೂ ಸರಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here