ಮೋದಿ ಹಾಗು ಅಮಿತ್ ಶಾ ಅವರನ್ನು ಹತ್ಯೆ ಮಾಡಿ.-ಬರಹಗಾರನ ಹೇಳಿಕೆ. ಯಾರೀತ?

0
441
modi and amit sha

ದೇಶದಲ್ಲಿ ಮೋದಿ ಸರ್ಕಾರ ಬಂದ ನಂತರ ಅನೇಕ ಬದಲಾವಣೆಗಳಾಗಿವೆ. ಹೌದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಅನೇಕ ಬದಲಾವಣೆ ಹಾಗು ಯೋಜನೆ ತಂದಿದ್ದಾರೆ. ಇನ್ನು ಮೋದಿಯ ಬೆನ್ನೆಲುಬಾಗಿ ನಿಂತಿರುವ ಅಮಿತ್ ಶಾ ಅಂದ್ರೆ ಈಗಿನ ಯುವಕರಿಗೆ ಅದೇನೋ ಒಂದು ರೀತಿ ಕ್ರೇಜ್. ಹೌದು. ಚಾಣಾಕ್ಷನ ರೀತಿ ಅವರು ಯೋಚಿಸುವುದು, ಯುವಕರಿಗೆ ಬೇಕಾದ ರೀತಿಯಲ್ಲಿ ಯೋಜನೆಗಳನ್ನು ಬದಲಿಸುವುದನ್ನು ಮಾಡುತ್ತಿರುತ್ತಾರೆ. ಹಾಗಾಗಿ ಕೆಲವರು ಮೋದಿ ಸರ್ಕಾರ ಅಂದ್ರೆ ಬಹಳಷ್ಟು ಇಷ್ಟ ಪಡುತ್ತಾರೆ. ಆದ್ರೆ ಕೆಲವರಿಗೆ ಅವರೆಂದರೆ ಆಗುವುದಿಲ್ಲ. ಅವರಲ್ಲಿ ತಮಿಳುನಾಡಿನ ಬರಹರರೊಬ್ಬರು ಸಹ ಆಗಿದ್ದಾರೆ. ಹೌದು. ಈಗ ಆ ಬರಗಾರರು ನೀಡಿರುವ ಹೇಳಿಕೆಯಂತೂ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಮೋದಿ ಮತ್ತು ಅಮಿತ್ ಶಾ ಅವರನ್ನು ಹತ್ಯೆ ಮಾಡಿ

ಮೋದಿ ಮತ್ತು ಅಮಿತ್ ಶಾ ಅವರಿಗೆ ವಿರೋಧಿಗಳಿದ್ದಾರೆ. ಆದರೆ ಅವರೆಲ್ಲರೂ ಹಿಂದೆಯಿಂದ ಕಟ್ಟಿ ಮಸೆಯುತ್ತಿದ್ದಾರೆ. ಯಾಕಂದ್ರೆ ಅವರನ್ನು ಮುಟ್ಟುವುದು ಅಸಾಧ್ಯದ ಮಾತು ಎಂದು ಎಲ್ಲರಿಗೂ ತಿಳಿದಿದೆ. ಆದರೆ ತಮಿಳುನಾಡಿನ ಬರಹಗಾರರಾದ ನಲ್ಲೈ ಕಣ್ಣನ್, ಮೋದಿ ಹಾಗು ಅಮಿತ್ ಶಾ ಅವರನ್ನು ಹತ್ಯೆ ಮಾಡಿ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ಹೌದು. ಸಿಎಎ ಹಾಗು ಎನ್ ಸಿ ಆರ್ ವಿರೋಧಿಸಿ ತಮಿಳುನಾಡಿನಲ್ಲಿ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಇನ್ನು ಆ ಪ್ರತಿಭಟನೆಯಲ್ಲಿ ನಲ್ಲೈ ಕಣ್ಣನ್ ಭಾಗವಹಿಸಿದ್ದರು. ಆ ಸಮಯದಲ್ಲಿ ಈ ರೀತಿಯ ಮಾತುಗಳನ್ನಾಡಿದ್ದಾರೆ.

ಅಮಿತ್ ಶಾ ದೊಡ್ಡ ಫ್ರಾಡ್

ಇನ್ನು ಪ್ರತಿಭಟನೆಯಲ್ಲಿ ಮಾತನಾಡುವಾಗ ಅಮಿತ್ ಶಾ ಅವರನ್ನು ಫ್ರಾಡ್ ಎಂದಿದ್ದಾರೆ. ಹೌದು. ಪ್ರಧಾನಿ ಮೋದಿ ಅವರು ಮೊದಲು ತಮ್ಮ ಪಾಶ್ ಪೋರ್ಟ್ ನಲ್ಲಿ ಮದುವೆ ಆಗಿಲ್ಲ ಎಂದು ಬರೆದಿದ್ದರು. ನಂತರ ಮದುವೆ ಬಗ್ಗೆ ತಿಳಿಸಿದರು. ಇನ್ನು ಮೋದಿಯ ಮೆದುಳಿನಂತೆ ಇರುವುದು ಅಮಿತ್ ಶಾ. ಆತನೊಬ್ಬ ದೊಡ್ಡ ಫ್ರಾಡ್. ಮೊದಲು ಅವರನ್ನು ಮುಗಿಸಿದರೆ ಸಮಾಜ ನೆಮ್ಮದಿಯಾಗಿರುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇದರ ನಡುವೆ ಮುಸ್ಲಿಂ ಸಮುದಾಯದವರನ್ನು ಸಹ ತಂದಿದ್ದಾರೆ. ಹೋದುವು. ಅವರ ಹತ್ಯೆಯನ್ನು ಮುಸ್ಲಿಮರು ಮಾಡುತ್ತಾರೆ ಎಂದು ನಾನು ತಿಳಿದಿದ್ದೆ. ಆದರೆ ಅವರು ಯಾಕೋ ಅದರಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿದ್ದಾರೆ.

ವಿರೋಧದ ಜೊತೆಗೆ ದೂರು ಸಹ ದಾಖಲಾಗಿದೆ

ಇನ್ನು ನಲ್ಲೈ ಕಣ್ಣನ್ ಈ ರೀತಿಯ ಹೇಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಆ ವಿಡಿಯೋ ನೋಡಿದ ಜನತೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಅವರ ವಿರುದ್ಧ ದೂರು ಸಹ ನೀಡಿದ್ದಾರೆ. ಹೌದು. ದೇಶದ ಪ್ರಮುಖ ವ್ಯಕ್ತಿಗಳ ಹತ್ಯೆಯ ಬಗ್ಗೆ ಮಾತನಾಡಿರುವುದಕ್ಕೆ ಎಲ್ಲರು ವಿರೋಧ ವ್ಯಕ್ತಪಡಿಸುತ್ತಿದ್ದು, ಅವರ ವಿರುದ್ಧ ದೂರು ಸಹ ನೀಡಿದ್ದಾರೆ.

ಒಟ್ಟಿನಲ್ಲಿ ತಮಿಳುನಾಡಿನ ಬರಹಗಾರರಾದ ನಲ್ಲೈ ಕಣ್ಣನ್ ಅವರ ಈ ಮಾತುಗಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಅವರ ವಿರುದ್ಧ ದೂರು ಸಹ ನೀಡಿದ್ದಾರೆ.

LEAVE A REPLY

Please enter your comment!
Please enter your name here