ಮೋದಿಯವರು ಎಲ್ಲರಂತೆ ಪ್ರಮಾಣ ವಚನ ಸ್ವೀಕರಿಸುವ ಬದಲು, ವಿಶೇಷವಾಗಿ ಸ್ವೀಕರಿಸಲಿದ್ದಾರೆ

0
994
modhi pramana vachana

ಚುನಾವಣೆ ಶುರುವಾದಾಗಿನಿಂದಲೂ ಎಲ್ಲರಿಗೂ ಇದ್ದಂತಹ ಕುತೂಹಲ ಒಂದೆ. ಈ ಬಾರಿ ಯಾರು ಪ್ರಧಾನಿಯಾಗ್ತಾರೆ ಅಂತ. ಆದರೂ ಜನರಲ್ಲಿ ಸಣ್ಣ ಸುಳಿವಿತ್ತು. ಈ ಬಾರಿಯೂ ಮೋದಿಯವರೇ ಅಧಿಕಾರ ಪಡೆಯುತ್ತಾರೆ ಅಂತ. ಅದರಂತೆ ಈ ಬಾರಿಯೂ ಸಹ ಮೋದಿಯವರೇ ಅಧಿಕಾರ ಪಡೆದಿದ್ದಾರೆ. ಹೌದು. ನಿರೀಕ್ಷೆಯನ್ನೇ ಮೀರಿಸುವಂತಹ ಮತಗಳನ್ನ ಪಡೆದು, ಅವರು ಗೆದ್ದಿದ್ದಾರೆ. ಹಾಗಾಗಿ ಇಂದು ಅವರು 2ನೇ ಭಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೌದು. ಇಂದು ಸಂಜೆ ಪ್ರಮಾಣ ವಚನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಫಲಿತಾಂಶ ಬಂದಾಗಿನಿಂದ ಜನರು ಕಾತುರದಿಂದ ಕಾಯುತ್ತಿದ್ದರು. ಮೋದಿಯವರು ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂತ. ಯಾಕಂದ್ರೆ ಪ್ರಮಾಣ ವಚನ ಸ್ವೀಕರಿಸಿದ ಮೇಲೆ, ಅವರು ತಮ್ಮ ಅಧಿಕಾರವನ್ನ ಈ ಬಾರಿ ಯಾವ ರೀತಿ ನಡೆಸುತ್ತಾರೆ, ಹಾಗೆ ಯಾವೆಲ್ಲಾ ಹೊಸ ಯೋಜನೆಗಳನ್ನ ತರುತ್ತಾರೆ ಅಂತ. ಹಾಗಾಗಿ ಇಂದು ಸಂಜೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇಂದು ಸಂಜೆ 7 ಗಂಟೆಗೆ ನಡೆಯಲಿರುವ ಪ್ರಮಾಣ ವಚನ

ಬಿಜಿಪಿಯ ದೊಡ್ಡ ಶಕ್ತಿಯಾಗಿರುವ, ಮೋದಿಯವರು ಇಂದು ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮೊದಲು ಅವರು ಬೆಳಗ್ಗಿನಿಂದಲೂ, ಮಹಾತ್ಮಾರ ಸಮಾಧಿಗಳ ಬಳಿ ಭೇಟಿ ನೀಡುತ್ತಿದ್ದಾರೆ. ಹೌದು. ಇಂದು ಬೆಳಿಗ್ಗೆಯೇ ಮೋದಿಯವರು, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಸಮಾಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಬಳಿ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಅವರ ಸಂಸದರು ಹಾಗೂ ನಾಯಕರು ಅವರಿಗೆ ಸಾಥ್ ನೀಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಭೋದನೆ

ಸಾಮಾನ್ಯವಾಗಿ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಯವರ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚ್ನಾ ಸ್ವೀಕರಿಸುತ್ತಾರೆ. ಆದ್ರೆ ಮೋದಿಯವರು ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬದಲು, ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಸ್ವೀಕರಿಸಲಿದ್ದಾರೆ. ಈಗಾಗಲೆ ಅದಕ್ಕೆ ಬೇಕಾದ ತಯಾರಿಗಳನ್ನ ಮಾಡಲಾಗುತ್ತಿದೆ. ಇಂದು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಸುಮಾರು 8 ಸಾವಿರ ಜನ ಅತಿಥಿಗಳು ಭಾಗಿಯಾಗಲಿದ್ದು,  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನವನ್ನ ಭೋಧಿಸಲಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ವಿವಿಧ ದೇಶದ ಅಧ್ಯಕ್ಷರು ಹಾಗೂ ನಾಯಕರು ಭಾಗಿಯಾಗಲಿದ್ದಾರೆ.

40ಕ್ಕೂ ಅಧಿಕ ಸಚಿವರುಗಳ ಪ್ರಮಾಣ ವಚನ ಇಂದೇ ನಡೆಯಲಿದೆ

ಇಂದು ಸಂಜೆ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವುದರ ಜೊತೆಗೆ, ಅವರ ಜೊತೆ, 40 ಕ್ಕೂ ಹೆಚ್ಚಿನ ಸಚಿವರುಗಳು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಾರೆಲ್ಲಾ ಸಚಿವರಾಗುತ್ತಾರೆ ಅನ್ನೋ ಪಟ್ಟಿಯನ್ನ ಈಗಾಗಲೇ ಅಂತಿಮಗೊಳಿಸಿದ್ದು, ಅದನ್ನ ಸಂಜೆ ಪ್ರಮಾಣ ವಚನದ ಸಮಯದಲ್ಲಿ ಬಹಿರಂಗ ಪಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರುತ್ತಿರೋದಾಗಿದೆ. ಹಾಗಾಗಿ ಈ ಬಾರಿಯ ಪ್ರಮಾಣ ವಚನ ಕಾರ್ಯಕ್ರಮ ಬಹಳ ವಿಶೇಷವಾಗಿದೆಯಂತೆ.

ಒಟ್ಟಿನಲ್ಲಿ ಅನೇಕ ಜನರ ನಿರೀಕ್ಷೆಯಂತೆ ಮೋದಿಯವರು ಗೆದ್ದಿದ್ದರು. ಅದರಂತೆ ಈಗ, ಅವರು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಹಾಗಾಗಿ ಇಂದು ಸಂಜೆ ಎಲ್ಲರ ಚಿತ್ತ ಪ್ರಮಾಣ ವಚನದತ್ತ ಇರುತ್ತದೆ.

LEAVE A REPLY

Please enter your comment!
Please enter your name here