ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹೊಸ ನಿಯಮ ಜಾರಿಗೆ ಮೇಯರ್ ಹೇಳಿಕೆ

0
777

ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಒಂದು ಗಾದೆ ಮಾತಿದೆ. ಕೆಲಸ ಸಿಕ್ಕರೆ ಮಾತ್ರ ಒಬ್ಬ ವ್ಯಕ್ತಿ ತನ್ನ ಜೀವನವನ್ನು ಆರಾಮವಾಗಿ ನಡೆಸಿಕೊಂಡು ಹೋಗಬಹುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಬ್ಯಾಂಕ್ ಗಳಲ್ಲಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಯಾವತ್ತಿಗು ಕನ್ನಡಿಗನೆ ಸಾರ್ವಭೌಮನಾಗಿರಬೇಕು. ಆದರೆ ಉದ್ಯೋಗದ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೇಲೆ ದೌರ್ಜನ್ಯವಾಗುತ್ತಿದೆ, ನಮ್ಮ ರಾಜ್ಯದವರಿಗಾಗಿ ಸೃಷ್ಟಿಯಾದ ಕೆಲಸವನ್ನು ಪರ ರಾಜ್ಯದವರು ಬಂದು ಕಿತ್ತುಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ #jobs for kannadigas ಎನ್ನುವ ಅಭಿಯಾನ ಶುರುವಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕುಮಾರ್ ಸ್ವಾಮಿ ಅವರು ಈ ಅಭಿಯಾನಕ್ಕೆ ಪ್ರೋತ್ಸಾಹಿಸಿದ್ದರು.

ಉದ್ದಿಮೆ ಪರವಾನಗಿ ಕನ್ನಡ ಕಡ್ಡಾಯವಾಗಿ ಇರಲೇಬೇಕು

ನೀವು ಯಾವುದೆ ಹೊಸ ಕಂಪನಿ ಅನ್ನು ಶುರು ಮಾಡಬೇಕೆಂದು ಅಂದುಕೊಂಡಿದ್ದರೆ, ಇನ್ಮುಂದೆ ಈ ನಿಯಮವನ್ನು ನೀವು ಪಾಲಿಸಬೇಕಾಗಿದೆ. ಏನಪ್ಪಾ ಆ ನಿಯಮ ಅಂತೀರಾ? ಹೊಸ ಉದ್ಯಮಿಗಳ ಬೋರ್ಡ್ ನಲ್ಲಿ ಕನ್ನಡ ಅಕ್ಷರದ ಫಲಕ ಇದ್ದರೆ ಮಾತ್ರ ಟ್ರೇಡ್ ಲೈಸೆನ್ಸ್ ನೀಡಲಾಗುತ್ತದೆ. ಉದ್ದಿಮೆ ಪರವಾನಗಿ ಕನ್ನಡ ಕಡ್ಡಾಯವಾಗಿ ಇರಲೇಬೇಕು. ಇನ್ನು ಬೋರ್ಡ್ ನಲ್ಲಿಯೂ ಸಹ ಕನ್ನಡ ಅಕ್ಷರಗಳು ದೊಡ್ಡದಾಗಿ ಇರಬೇಕು. ಇದ್ದರೆ ಮಾತ್ರ ಅವರಿಗೆ ಲೈಸೆನ್ಸ್ ಮಂಜೂರು ಮಾಡುವ ಆದೇಶವನ್ನು ಮೇಯರ್ ಉದ್ಯಮಿಗಳಿಗೆ ಹೊರಡಿಸಿದ್ದಾರೆ. ನವೆಂಬರ್ ತಿಂಗಳಾದ್ಯಂತ ಕನ್ನಡ ನಾಮಫಲಕಗಳು ಅಳವಡಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಮುಂದೆ ಓದಿ

ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ

ಸಂಸ್ಥೆಯ ಹೆಸರಿನ ವಿಚಾರಕ್ಕೆ ಸಂಭಂದ ಪಟ್ಟ ಹಾಗೆ ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಇನ್ನು ನಾಮಫಲಕಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಲಾಗುತ್ತಿದ್ದು, ಆದೇಶವನ್ನು ಪಾಲಿಸದವರ ಲೈಸೆನ್ಸ್ ಅನ್ನು ವಜಾ ಮಾಡಲಾಗುತ್ತಿದೆ. ಈ ನೂತನವಾದ ಯೋಜನೆ ನವೆಂಬರ್ 1 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಮೇಯರ್ ಗೌತಮ್ ಕುಮಾರ್ ಅವರು ತಿಳಿಸಿದ್ದಾರೆ. ಈ ಹಿಂದೆ 2017 ರಲ್ಲಿ ಬಿಬಿಎಂಪಿ ನಾಮಫಲಕದಲ್ಲಿ 80% ರಷ್ಟು ಜಾಗವನ್ನು ಕನ್ನಡಕ್ಕೆ ಸೀಮಿತವಾಗಿರಬೇಕೆಂದು ತಿಳಿಸಿದ್ದರು. ಈ ನಿಯಮವನ್ನು ಒಪ್ಪದ ಕೆಲ ಅಂಗಡಿ ಮಾಲೀಕರು ಕೋರ್ಟ್ ಮೆಟ್ಟಿಲನ್ನು ಏರಿದ್ದು, ಇಂತಹ ಆದೇಶವನ್ನು ಪಾಲಿಸುವ ಹಾಗೆ ಯಾವುದೆ ಕಾನೂನು ಇಲ್ಲ ಎಂದು ನ್ಯಾಯಾಲಯ ತೀರ್ಪನ್ನು ನೀಡಿತ್ತು.

ಕನ್ನಡ ಪರ ಸಂಘಟನೆಗಳು ಬೇಸರವನ್ನು ವ್ಯಕ್ತ ಪಡಿಸಿದ್ದರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ, ಬಿಜೆಪಿ ಪಕ್ಷದ ವತಿಯಿಂದ ಎಂ ಗೌತಮ್ ಕುಮಾರ್ ಜೈನ ಆಯ್ಕೆ ಆಗಿದ್ದರು. ಇವರ ಆಯ್ಕೆಯ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಬೇಸರವನ್ನು ವ್ಯಕ್ತ ಪಡಿಸಿದ್ದರು.

ಇದರ ಹಿನ್ನಲೆಯಲ್ಲಿ ಗೌತಮ್ ಅವರು ಈ ರೀತಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here