ಬೆಂಗಳೂರಿನ ಈ ಹೋಟೆಲ್ , ನಾಟಿ ಸ್ಟೈಲ್ ನಾನ್ ವೆಜ್ ಊಟಕ್ಕೆ ಬಿಂದಾಸ್ ಜಾಗ ಗುರು

0
1239
maratha darshan bengaluru

ನೀವು ತುಂಬಾ ಹೋಟೆಲ್ಗಳಲ್ಲಿ ನಾನ್ ವೆಜ್ ನ ಟೇಸ್ಟ್ ಮಾಡಿರ್ತೀರ, ಲೆಜೆಂಡರಿ ಆಗಿರೋ ರಂಗಣ್ಣ ಮಿಲಿಟರಿ ಹೋಟೆಲ್ ಅಥವಾ ಶಿವಾಜಿ ಮಿಲಿಟರಿ ಹೋಟೆಲ್ಗಳಲ್ಲಿ ಕೊಡೋ ಟೇಸ್ಟ್ ನೋಡಿ ಅಂಟಿಕೊಂಡು ಬಿಟ್ಟಿರ್ತೀರ, ಆದರೆ ನಿಮಗೆ ಬೆಂಗಳೂರಿನ ಕಾಂಕ್ರೀಟ್ ಕಾಡಿನ ಮಧ್ಯದಲ್ಲಿ ಎಲೆಮರೆ ಕಾಯಿಯ ಹಾಗಿರೋ ಎಷ್ಟೊಂದ್ ಸೂಪರ್ ಚಿಂದಿ ನಾನ್ ವೆಜ್ ಹೋಟೆಲ್ಗಳ ಬಗ್ಗೆ ಗೊತ್ತಿರೋದೇಯಿಲ್ಲ , ತುಂಬಾ ಜನರಿಗೆ ಗೊತ್ತಿಲ್ದೆ ಇದ್ರೂ ಸಕ್ಕತ್ತಾಗಿ ಟೇಸ್ಟ್ ಕೊಡೋ ಹೋಟೆಲ್ಗಳನ್ನ ನಾವೂ ಹುಡುಕ್ತಿದ್ದಾಗ ನಮಗೆ ಸಿಕ್ಕಿದ್ದು ಮರಾಠಾ ದರ್ಶನ ಅನ್ನೋ ಹೋಟೆಲ್, ಗುರು!!! ಈ ಹೋಟೆಲ್ ನ ಸ್ಪೆಶಾಲಿಟಿ ಒಂದಲ್ಲ ಎರಡಲ್ಲ.

maratha darshan hotel
maratha darshan hotel

ದೇಸಿ ಮರಾಠಿ ಸ್ಟೈಲ್ ನಾನ್ ವೆಜ್ ಸಿಗೋ ಪಕ್ಕಾ ಉತ್ತರ ಕರ್ನಾಟಕ / ಮಹಾರಾಷ್ಟ್ರ ಟೈಪ್ ಹೋಟೆಲ್ ಇದು. ನಾನ್ ವೆಜ್ ಪ್ರೇಮಿಗಳಿಗಂತೂ ಹೋಟೆಲ್ ಒಳಗೆ ಒಂದ್ ಹೆಜ್ಜೆ ಇಡೋವಾಗ್ಲೇ ತಯಾರಾಗ್ತಿರೋ ಆಹಾರದ್ ಸುಗಂಧ ಮೂಗಿಗ್ ತಾಗಿ ಹಸಿವು ಡಬಲ್ ಆಗೋಗತ್ತೆ.

ಜಾಗ ಅಷ್ಟು ಚನ್ನಾಗಿಲ್ಲ ಆದರೂ ಅಲ್ಲಿನ ಟೆಸ್ಟ್ ಸೂಪರ್ ಫೀಲಿಂಗ್ ಕೊಡತ್ತೆ .

ಹೋಟೆಲ್ ಲೂಕ್ ಅಷ್ಟು ಚನ್ನಾಗಿಲ್ಲ ಅಂತ ಅನ್ನಿಸ್ಬೋದು ನಿಮ್ಗೆ , ಆದ್ರೆ “ಬಾಹ್ಯ ಸೌಂದರ್ಯ ಮುಖ್ಯ ಅಲ್ಲ , ಅಂತರಂಗದ ಸೌಂದರ್ಯ ಮುಖ್ಯ” ಅನ್ನೋಹಾಗೆ ಇಲ್ಲಿ ಒಂದ್ ಸರ್ತಿ ನೀವು ಸೆಟಲ್ ಆಗಿ ತಿನ್ನೋದಕ್ ಶುರುಮಾಡಿದ್ರೆ ನಿಜವಾಗ್ಲೂ ಆತ್ಮತೃಪ್ತಿ ಅನ್ಸತ್ತೆ.
ಗ್ರೌಂಡ್ ಫ್ಲೋರ್ ಅಲ್ಲಿ ಕೂತ್ಕೊಂಡು ತಿನ್ನೋದಕ್ಕೆ ಸೌಲಭ್ಯ ಇಲ್ಲ , ಮಹಡಿ ಮೇಲೆ ಕೂತು ತುನ್ನೋಕೆ ಆಗೋಹಾಗೆ ಬೆಂಚ್ ಗಳನ್ನ ಇಟ್ಟಿದ್ದಾರೆ , ಆದರೆ ಜನ ಹೆಚ್ಚಾಗಿ ಇರೋ ಕಾರಣ ನಿಮಗೆ ಸೀಟ್ ಖಾಲಿ ಇರ್ಬೋದು ಅಂತ ಹೇಳಕ್ಕಾಗಲ್ಲ .

food at maratha hotel bengaluru
food at maratha hotel bengaluru

ಗುರು , ತಿನ್ನೋದಕ್ಕೆ ಏನೇನ್ ಸಿಗತ್ತೆ !!!?

ನಿಜ ಹೇಳ್ಬೇಕಂದ್ರೆ ನೀವು ತಲೆ ಕೆಡಿಸ್ಕೊಂಡ್ ಬಿಡ್ತೀರ ಏನ್ ಆರ್ಡರ್ ಮಾಡದು ಅಂತ , ನಾವ್ ಹೇಳೊದ್ ಏನಂದ್ರೆ ನಿಮ್ಮ ಟೇಸ್ಟ್ ಗೆ ಸರಿಯಾಗಿ ಆರ್ಡರ್ ಮಾಡಿ. ನಮಗೆ ಮಟ್ಟನ್ ಕೈಮ , ರಾಗಿ ಮುದ್ದೆ , ತಾಲಿ , ಚಿಕನ್ ಕಬಾಬ್ ಸಕ್ಕತ್ ಇಷ್ಟ ಆಯ್ತು . ಸೊಪ್ಪಿನ ಸಾರಂತೂ ಸ್ವರ್ಗನೆ , ಆ ರಾಗಿ ಮುದ್ದೆ ಜತೆ ತಿಂತಾಯಿದ್ರೆ ಇಂದ್ರಲೋಕದಲ್ಲಿರೋ ಫೀಲ್ ಬಂದುಬಿಡತ್ತೆ, ಸೊಪ್ಪು , ಮಸಾಲೆ, ಈರುಳ್ಳಿ , ಟಮ್ಯಾಟೋಗಳಿಂದ ಸೃಷ್ಟಿ ಆದ ಜಾದೂ ಈಗ್ಲೂ ನಾಲಿಗೆ ಮೇಲೆ ಉಳ್ಕೊಂಡ್ ಬಿಟ್ಟಿದೆ. ಆ ಮಟನ್ ಕೈಮ ಚಿಂದಿಯಾಗಿತ್ತು . ಮಟನ್ ಲಿವರ್ಗೆ ಚಿಲ್ಲಿ ,ಪೆಪ್ಪರ್ ಮಿಕ್ಸ್ ತುಂಬಾನೇ ಚನ್ನಾಗಿ ಬೆರೆತುಹೀಗಿತ್ತು.

maratha darshan hotel
maratha darshan hotel

ಮರಾಠ ದರ್ಶನ್ಅಲ್ಲಿ ನಾನ್ ವೆಜ್ ತಿಂದಿರೋರು ನಿಜವಾದ ಭಾಗ್ಯಶಾಲಿಗಳು , ಅದ್ರಲ್ಲೂ ಮತ್ತೆ ಮತ್ತೆ ಹೋಗೋಕೆ ಚಾನ್ಸ್ ಸಿಕ್ರಂತೂ ನೀವು ಡಬಲ್ ಭಾಗ್ಯಶಾಲಿಗಳು. ಪಕ್ಕಾ ಪೈಸಾ ವಸೂಲ್ , ಚಿಂದಿ ಟೇಸ್ಟ್

Open: 12:30 – 4 PM (Monday Closed)

Where: Queens Road Cross, Cunningham road.

Nearest Metro Station: Cubbon Park

LEAVE A REPLY

Please enter your comment!
Please enter your name here