ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳಿಲ್ಲದವರಿಗೆ, ಮಕ್ಕಳ ಭಾಗ್ಯ ಲಭಿಸುತ್ತದೆ.

0
1827
makkala devi

ನಮ್ಮಲ್ಲಿ ಊಹಿಸಲಾಗದಂತ ಹಲವು ವಿಸ್ಮಯಗಳಿವೆ. ನೋಡಿದವರು ಅದನ್ನ ನಂಬುತ್ತಾರೆ. ಆದರೆ ಅದರ ಬಗ್ಗೆ ತಿಳಿಯದವರು, ಯಾರೇ ಎಷ್ಟೇ ಹೇಳಿದರು ಅದನ್ನ ನಂಬುವುದಿಲ್ಲ. ಒಂದು ಸಾರಿ ಅದನ್ನ ಕಣ್ಣಿಂದ ನೋಡಿದಾಗ ಮಾತ್ರ ಆ ವಿಸ್ಮಯದ ಬಗ್ಗೆ ಅರಿವಾಗುತ್ತದೆ. ಇದೇ ರೀತಿ ನಮ್ಮಲ್ಲಿ ನಂಬಲಾಗದಂತ ಹಲವು ವಿಸ್ಮಯಕಾರಿ ದೇವಾಲಯಗಳಿವೆ. ಅದರಲ್ಲಿ ಈ ದೇವಾಲಯವು ಸಹ ಒಂದಾಗಿದೆ.

ಹೌದು ಈ ದೇವಾಲಯದ ಶಕ್ತಿ ತಿಳಿದರೆ, ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ. ಈ ದೇವಾಲಯದಲ್ಲಿ ಒಂದು ರಾತ್ರಿ ಮಲಗಿ, ಬೆಳಗಾದರೆ ಸಾಕು, ನೀವು ನಂಬಲಾಗದಂತ ಪವಾಡ ನಡೆಯುತ್ತೆ. ಅಂತ ಶಕ್ತಿಯನ್ನ ಇಲ್ಲಿನ ದೇವರು ಹೊಂದಿದೆ.

ಈ ದೇವಾಲಯದಲ್ಲಿ ಮಕ್ಕಳ ಭಾಗ್ಯ ಲಭ್ಯವಾಗುತ್ತೆ.

ಮಕ್ಕಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳು ಅಂದ್ರೆ ತಂದೆ, ತಾಯಿಗೆ ಪ್ರಾಣ. ಕೆಲವರಿಗೆ ಆ ಅದೃಷ್ಟ ಇರುವುದಿಲ್ಲ. ಯಾಕಂದ್ರೆ ಅವರಲ್ಲಿರುವ ಕೆಲವು ವೈಯಕ್ತಿಕ ಕಾರಣಗಳಿಂದ ಎಷ್ಟು ವರ್ಷಗಳಾದರೂ, ಮಕ್ಕಳನ್ನ ಪಡೆಯುವುದಕ್ಕೆ ಆಗಿರುವುದಿಲ್ಲ. ಇಂಥವರು, ಮೊದಲು ಆಸ್ಪತ್ರೆ ಬಾಗಿಲಿಗೆ ಅಲೆಯುತ್ತಾರೆ. ನಂತರ ಅಲ್ಲೂ ಯಾವ ಪ್ರಯೋಜನವಾಗದಾಗ, ಕೊನೆಗೆ ಬರುವುದು ದೇವರ ಹತ್ತಿರ. ಮಕ್ಕಳಿಗಾಗಿ ಕಂಡ, ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಮಕ್ಕಳಾಗದೆ ಮನನೊಂದವರಿಗೆ ಈ ದೇವಿ ಆಸರೆ ಆಗಿ ನಿಂತಿದ್ದಾಳೆ. ಹೌದು. ಈ ದೇವಿ ಬಳಿ ಬಂದರೆ ಸಾಕು, ಮಕ್ಕಳ ಭಾಗ್ಯ ಲಭಿಸುತ್ತೆ.

ಈ ದೇವಾಲಯದಲ್ಲಿ ಒಂದು ರಾತ್ರಿ ಮಲಗಿದರೆ ಮಕ್ಕಳು ಪಡೆಯೋ ಆಸೆ ಈಡೇರುತ್ತೆ

ಹೆಣ್ಣು ಮಕ್ಕಳು, ಮಗು ಪಡೆಯುವ ಆಸೆಯಿಂದ ಬೇರೆಯವರ ಮಾತನ್ನೆಲ್ಲಾ ಕೇಳುತ್ತಾರೆ. ಆದ್ರೆ ಅದ್ಯಾವುದೂ ಕೈ ಹಿಡಿಯದೇ, ಬೇಸರದಲ್ಲಿ ಜೀವನ ನಡೆಸುತ್ತಾರೆ. ಅಂಥವರು ಈ ದೇವಾಲಯಕ್ಕೆ ಬರಬೇಕು. ಈ ದೇವಾಲಯದ ಪ್ರಾಂಗಣದಲ್ಲಿ ಒಂದು ರಾತ್ರಿ ಮಲಗಿದರೆ ಸಾಕು, ಅವರಿಗೆ ಮಕ್ಕಳ ಭಾಗ್ಯ ಸಿಗುತ್ತದೆ. ಹೌದು. ಈ ದೇವಾಲಯಕ್ಕೆ ಸಾವಿರಾರು ಜನ ಭಕ್ತರು ಬರುತ್ತಾರೆ. ಇನ್ಮುಂದೆ ನಮಗೆ ಮಕ್ಕಳಾಗುವುದೇ ಇಲ್ಲ, ಎಂದುಕೊಂಡವರು ಇಲ್ಲಿ ಮಕ್ಕಳನ್ನ ಪಡೆದಿದ್ದಾರೆ.

ಕನಸಿನಲ್ಲಿ ಬರುತ್ತಾಳೆ ದೇವಿ

ದೇವಸ್ಥಾನದಲ್ಲಿ ಮಲಗುವಾಗ, ಆ ದೇವಿಯ ಧ್ಯಾನವನ್ನ ಮಾಡಿಕೊಂಡು ನಿದ್ರಿಸಬೇಕು. ಸಂಪೂರ್ಣ ನಿದ್ದೆಗೆ ಜಾರಿದಾಗ, ಇಲ್ಲಿನ ದೇವಿ ಕನಸಲ್ಲಿ ಬರುತ್ತಾಳೆ. ದೇವಿ ಕನಸಿನಲ್ಲಿ ಬಂದರೆ ಆಕೆಗೆ ಮಕ್ಕಳಾಗುವುದು ಖಂಡಿತ ಎಂದು ಖಾತ್ರಿಯಾಗುತ್ತೆ. ಇನ್ನೂ ಕನಸಿನಲ್ಲಿ ಹೂ ಹಾಗೂ ಹಣ್ಣಿನ ಪ್ರಸಾದ ನೀಡುವಂತೆ ಬಂದರೆ, ಶೀಘ್ರವೇ ಮಕ್ಕಳಾಗುತ್ತೆ ಎಂದು ಅರ್ಥ. ಈ ರೀತಿ ಕನಸಿನಲ್ಲಿ ಬಂದು ದೇವಿ ಉತ್ತರವನ್ನ ತಿಳಿಸುತ್ತಾಳೆ. ನಮ್ಮ ಜನರಿಗೆ ಇಷ್ಟಾದರೂ ಕೆಲವರಿಗೆ ಆಸೆ ಮುಗಿಯುವುದಿಲ್ಲ. ಹುಟ್ಟುವ ಮಗ ಗಂಡು ಅಥವಾ ಹೆಣ್ಣು ಅನ್ನೋದನ್ನ ತಿಳಿಯೋ ಕುತೂಹಲ ಜಾಸ್ತಿ ಇರುತ್ತೆ. ಅಂಥವರು ಸಹ ಇಲ್ಲಿಗೆ ಬರುತ್ತಾರೆ. ಅವರು ಸಹ ಇಲ್ಲಿ ಒಂದು ರಾತ್ರಿ ಕಳೆಯಬೇಕು. ಆಗ ಕನಸಿನಲ್ಲಿ ಬಂದ ದೇವತೆ, ಹೆಣ್ಣು ಮಗುವಾಗುತ್ತದೋ ಅಥವಾ ಗಂಡು ಮಗುವಾಗುತ್ತದೋ ಎಂದು ತಿಳಿಸುತ್ತದೆ. ಹೌದು. ಚೇಪೆಕಾಯಿ ಬಂದರೆ ಗಂಡುಮಗು ಎಂದರ್ಥ. ಬೆಂಡೆಕಾಯಿ ಬಂದರೆ ಹೆಣ್ಣು ಮಗು ಎಂದರ್ಥ.

ಕನಸು ಬಿದ್ದೊಡನೆ ಅಲ್ಲಿಂದ ಹೊರಡಬೇಕು

ಅಲ್ಲಿಗೆ ಹೋಗುವ ಮಹಿಳೆಯರು, ಒಂದು ದಿನ ಪೂರ್ತಿ ನಿದ್ರೆ ಮಾಡಬೇಕು ಅಂತಲ್ಲ. ದೇವಿ ಕನಸಿನಲ್ಲಿ ಬರುವರೆಗೂ ನಿದ್ರಿಸಬೇಕು. ದೇವಿ ಕನಸಿನಲ್ಲಿ ಬಂದು ಹೇಳಿದ ಕೂಡಲೇ, ಅವರು ಅಲ್ಲಿಂದ ಎದ್ದು ಹೊರಡಬೇಕು. ಒಂದು ಕ್ಷಣ ಹೆಚ್ಚಾಗಿಯೂ ಅಲ್ಲಿ ಇರಬಾರದು. ಯಾಕಂದ್ರೆ ಇಲ್ಲಿನ ಮಹಿಮೆಯ ಪ್ರಕಾರ, ದೇವಿ ಕನಸಿನಲ್ಲಿ ಬಂದು ಹೇಳಿದ ಕೂಡಲೇ, ಅದನ್ನ ಅರಿತು ಹೆಣ್ಣು ಮಕ್ಕಳು ಹೋಗಬೇಕು. ಇಲ್ಲವಾದರೆ, ಅವರ ಮೈ ಮೇಲೆ, ಅಪಾಯಕಾರಿ ಕಲೆ ಹಾಗೂ ಮಚ್ಚೆಗಳು ಆಗುತ್ತವೆ. ಅದು ಅವರ ಮಗುವಿನ ಮೇಲೂ ಪರಿಣಾಮ ಬೀರುತ್ತೆ. ಹಾಗಾಗಿ ಕನಸು ಪೂರ್ಣವಾಗುತ್ತಿದ್ದಂತೆ, ಅಲ್ಲಿಂದ ಹೊರಡಬೇಕು.

ನವರಾತ್ರಿ ಸಮಯದಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ ಭಕ್ತರು

ಈ ದೇವಾಲಯಕ್ಕೆ ನವರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳ ಸಾಲು ಸಾಗರದಂತೆ ಇರುತ್ತೆ. ಯಾಕಂದ್ರೆ ಈ ತಾಯಿಗೆ ಅಪೂರ್ವವಾದ ಶಕ್ತಿ ಬರುವುದು ನವರಾತ್ರಿ ಸಮಯದಲ್ಲಿ. ಹಾಗಾಗಿ ಮಕ್ಕಳಾಗದೆ ಇರುವವರು ವರ್ಷವಿಡೀ ನವರಾತ್ರಿಗಾಗಿ ಕಾಯುತ್ತಾರೆ. ನವರಾತ್ರಿ ಸಮಯದಲ್ಲಿ ಇಲ್ಲಿ ಕೇವಲ ದಂಪತಿಗಳೇ ಇರುತ್ತಾರೆ. ಸಾವಿರಾರು ಭಕ್ತರನ್ನ ತನ್ನತ್ತ ಕರೆಸಿಕೊಳ್ಳುತ್ತಾಳೆ ಈ ತಾಯಿ. ವರ್ಷದ ಬೇರೆ ಸಮಯದಲ್ಲಿ ಹೋದರೆ, ಅಷ್ಟಾಗಿ ಬೇಡಿಕೆಗೆ ಫಲ ಸಿಗುವುದಿಲ್ಲ. ಆದ್ರೆ ನವರಾತ್ರಿ ಸಮಯದಲ್ಲಿ ಯಾವಾಗ ಹೋದರು, ತಾಯಿ ಮಹಿಮೆ ಏನು ಎಂಬುದು ತಿಳಿಯುತ್ತೆ.

ಅಲುಗಾಡದ ಕಲ್ಲು

ಈ ದೇವಾಲಯದ ಸಮೀಪದಲ್ಲಿ ಒಂದು ಕಲ್ಲಿದೆ. ನೋಡೋಕೆ ಇದು ಸಾಧಾರಣ ಕಲ್ಲು ಅಂತ ಎನಿಸುತ್ತೆ. ಆದ್ರೆ ಸಂಪೂರ್ಣ ಶಕ್ತಿ ಇರುವುದೇ ಈ ಕಲ್ಲಿನಲ್ಲಿ. ದೊಡ್ಡವರು ಈ ಕಲ್ಲನ್ನ ಎಷ್ಟೇ ಕದಲಿಸಿದರು ಅದು ಕದಲುವುದಿಲ್ಲ. ಆದ್ರೆ ಒಂದು ಚಿಕ್ಕ ಮಗುವಿನ ಒಂದೇ ಕೈಯಲ್ಲಿ ಅದನ್ನ ಕದಲಿಸಿದರೆ, ಸಾಕು ಆ ಕಲ್ಲು ಸುಲಭವಾಗಿ ಕದಲುತ್ತದೆ. ಇಲ್ಲ ನಾವೇ ಕದಲಿಸುತ್ತೇವೆ ಅಂತ, ಯಾರಾದ್ರೂ ದೊಡ್ಡವರು, ಎಷ್ಟು ಪ್ರಯತ್ನಿಸಿದರೂ ಅದು ಕದಲುವುದಿಲ್ಲ. ಇದು ಈ ಕಲ್ಲಿನ ಶಕ್ತಿಯಾಗಿದೆ.

ದೇವಾಲಯ ಇರೋದಾದ್ರೂ ಎಲ್ಲಿ?

ಇಷ್ಟು ಪವಾಡ ಹೊಂದಿರುವ ಈ ದೇವಾಲಯ, ಇರೋದಾದ್ರೂ ಎಲ್ಲಿ ಅನ್ನೋ ಕುತೂಹಲ ಎಲ್ಲರಿಗೂ ಇದೇ. ಈ ದೇವಾಲಯ ಇರೋದು, ಹಿಮಾಚಲ ಪ್ರದೇಶದಲ್ಲಿನ ಮಂಡಿ ಜಿಲ್ಲೆಯಲ್ಲಿನ ಲಡ ಭರೋಲ್ ಸಮೀಪದ ಸಿಮಾಸ್ ಎಂಬ ಗ್ರಾಮದಲ್ಲಿ. ಈ ದೇವಾಲಯದ ಶಕ್ತಿ ದೇವತೆ ಎಂದರೆ ಅದು ಸಿಮ್ಸಾ. ಈ ದೇವಿಯನ್ನ ಇಲ್ಲಿನ ಜನರು ಹೆಚ್ಚಾಗಿ ಸಾನ್ಟಾನ್ಧಾತ್ರಿಅಂತ ಕರೆಯುತ್ತಾರೆ. ಇಲ್ಲಿನ ಜನರಿಗೆ ಈ ದೇವಿಯೇ, ಅಧಿ ದೇವತೆ.

ಇದು ಈ ದೇವಿಯ ಪಾವಡವಾಗಿದೆ. ಈ ದೇವಿಯನ್ನ ನೋಡಲು ಎಲ್ಲೆಲ್ಲಿಂದಲೋ ಭಕ್ತರು ಬರುತ್ತಾರೆ. ಈಕೆಯ ಅನುಮತಿ ಇಲ್ಲದೆ, ಏನೂ ಆಗುವುದಿಲ್ಲ ಅನ್ನೋದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಸಾವಿರಾರು ಜನ ಈ ದೇವಿಯ ದರ್ಶನ ಪಡೆಯಲು ಬರುತ್ತಾರೆ.

LEAVE A REPLY

Please enter your comment!
Please enter your name here