ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿರುವ ನಟ ಹಾಗು ನಿರ್ದೇಶಕ ಮಹೇಂದರ್

0
945
mahendar

ಸ್ಯಾಂಡಲ್ ವುಡ್ ನಲ್ಲಿ ಅನೇಕ ನಿರ್ದೇಶಕರು ನಟರಾಗಿ, ಹಾಗು ಅನೇಕ ನಟರು ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಹೌದು. ಅನೇಕ ನಿರ್ದೇಶಕರು ತೆರೆ ಮೇಲೆ ಬಣ್ಣ ಹಚ್ಚುವುದರ ಮೂಲಕ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರಲ್ಲಿ ನಿರ್ದೇಶಕ ಮಹೇಂದರ್ ಕೂಡ ಒಬ್ಬರಾಗಿದ್ದಾರೆ. ಹೌದು. ಸ್ಯಾಂಡಲ್ ವುಡ್ ನಲ್ಲಿ ಮಹೇಂದರ್ ಒಬ್ಬ ಪ್ರತಿಭಾನ್ವಿತ ನಿರ್ದೇಶಕನಾಗಿದ್ದು, ಅನೇಕ ಸಿನಿಮಾಗಳನ್ನು ಇವರು ತೆರೆ ಮೇಲೆ ತಂದಿದ್ದಾರೆ. ಜೊತೆಗೆ ಅನೇಕ ಸ್ಟಾರ್ ಕಲಾವಿದರಿಗೆ ಇವರು ಆಕ್ಷನ್ ಕಟ್ ಹೇಳಿದ್ದು, ಸ್ವತಃ ಇವರೇ ‘ಗಟ್ಟಿಮೇಳ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಆ ಸಿನಿಮಾ ಆದಮೇಲೆ ನಂತರ ಬೇರೆ ಯಾವ ಸಿನಿಮಾದಲ್ಲೂ ಅವರು ಬಣ್ಣ ಹಚ್ಚಿರಲಿಲ್ಲ. ಆದರೆ ಈಗ ಇಷ್ಟು ವರ್ಷಗಳ ನಂತರ ಮತ್ತೆ ಅವರು ಬಣ್ಣ ಹಚ್ಚಲು ನಿರ್ಧರಿಸಿದ್ದಾರೆ.

ಮತ್ತೆ ಬಣ್ಣ ಹಚ್ಚಲಿರುವ ನಿರ್ದೇಶಕ ಮಹೇಂದರ್

ಕೆಲವು ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿರುವ ನಿರ್ದೇಶಕ ಮಹೇಂದರ್ ಅವರು, ಅನೇಕ ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಲಿದ್ದಾರೆ. ಹೌದು. ಶ್ರುತಿ ಅವರೊಂದಿಗಿನ ಗಟ್ಟಿಮೇಳ ಸಿನಿಮಾ ಅವರು ಅಭಿನಯಿಸಿದ ಮೊದಲ ಹಾಗು ಕೊನೆಯ ಸಿನಿಮಾವಾಗಿದ್ದು, ಮತ್ತೆ ಅವರು ಬಣ್ಣ ಹಚ್ಚಿರಲಿಲ್ಲ. ಆದರೆ ಈಗ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಇನ್ನು ಈ ಸಿನಿಮಾವನ್ನು ಗಡ್ಡ ವಿಜಿ ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ಟರ ತಂಡದಲ್ಲಿ ಇದ್ದ ಗಡ್ಡ ವಿಜಿ, ‘ಪ್ಲಸ್’ ಸಿನಿಮಾದ ಮೂಲಕ ಡೈರೆಕ್ಟರ್ ಆದರು. ಆ ಸಿನಿಮಾದ ನಂತರ ‘ವಾರಸ್ಧಾರ’ ಧಾರಾವಾಹಿ ನಿರ್ದೇಶನ ಮಾಡಿದರು. ಸದ್ಯ, ಗಡ್ಡ ವಿಜಿ ಎಸ್ ಮಹೇಂದರ್ ಜೊತೆಗೆ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ.

28 ವರ್ಷ ಚಿತ್ರರಂಗದ ಅನುಭವ ಹೊಂದಿರುವ ಮಹೇಂದರ್

ಇನ್ನು ಸಿನಿಮಾರಂಗದಲ್ಲಿ ನಿರ್ದೇಶಕ ಮಹೇಂದರ್ ಅವರಿಗೆ ಸುಮಾರು 28 ವರ್ಷಗಳ ಅನುಭವವಿದೆ. ಇನ್ನು ಅವರು ‘ಶೃಂಗಾರ ಕಾವ್ಯ’, ‘ತಾಯಿ ಇಲ್ಲದ ತವರು’, ‘ಕರ್ಪೂರ ಗೊಂಬೆ’, ‘ಕೌರವ’, ‘ಸ್ನೇಹಲೋಕ’, ‘ನಿನಗಾಗಿ’, ‘ವಾಲಿ’, ‘ತಾಯಿಗೆ ತಕ್ಕ ಮಗ’ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅನೇಕ ಸ್ಟಾರ್ ನಟರಿಗೆ ಇವರು ಆಕ್ಷನ್ ಕಟ್ ಹೇಳಿರುವುದರಿಂದ ಅವರ ಎಲ್ಲ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಅದಾದ ಬಳಿಕ ಅವರು 2017 ರಲ್ಲಿ ‘ಒನ್ಸ್ ಮೋರ್ ಕೌರವ’ ಚಿತ್ರ ಮಾಡಿದ್ದರು. ಅದಾದ ಬಳಿಕ ಅವರ ಯಾವ ವಿಚಾರವು ಹೊರ ಬಿದ್ದಿರಲಿಲ್ಲ. ಆದರೆ, ಇದೀಗ ನಿರ್ದೇಶನದ ಬದಲು ಮಹೇಂದರ್ ನಟನೆ ಕಡೆ ಆಸಕ್ತಿ ತೋರಿದ್ದಾರೆ.

ಮಡಿಕೇರಿಯಲ್ಲಿ ನಡೆಯಲಿರುವ ಚಿತ್ರೀಕರಣ

ಮಹೇಂದರ್ ನಟಿಸುತ್ತಿರುವ ಈ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಚಿತ್ರೀಕರಣಕ್ಕೆ ಮಾತ್ರ ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿದೆ. ಹೌದು. ಈ ಹೊಸ ಸಿನಿಮಾದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಸದ್ದಿಲ್ಲದೆ, ಯಾವುದೇ ಸುದ್ದಿ ಮಾಡದೆ ಚಿತ್ರತಂಡ ತಮ್ಮ ಕೆಲಸ ಪ್ರಾರಂಭ ಮಾಡಿದೆ. ವಿಜಯ್ ಎನ್ನುವವರು ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿಯನ್ನು ಚಿತ್ರರಂಗ ತಿಳಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಹಾಗು ಇನ್ನುಳಿದ ವಿಚಾರಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಇಷ್ಟುದಿನ ನಿರ್ದೇಶನ ಮಾಡದೇ ಜೊತೆಗೆ ಯಾವುದೇ ಸುದ್ದಿ ಇಲ್ಲದೆ ಸುಮ್ಮನಿದ್ದ ಮಹೇಂದರ್ ಈಗ ಮತ್ತೆ ಬಣ್ಣ ಹಚ್ಚುವುದರ ಮೂಲಕ ತೆರೆ ಬರುತ್ತಿದ್ದಾರೆ. ಹಾಗಾದ್ರೆ ಅವರ ಸಿನಿಮಾ ಜನರ ಮನಸ್ಸನ್ನು ಎಷ್ಟರ ಮಟ್ಟಿಗೆ ಗೆಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here