ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ, ಎಲ್ಲಾ ಕಡೆ ಕಮಲ ಪಾಳಯವಾಗಿದೆ

0
903
lokasabha chunavane

ಚುನಾವಣೆ ಅಂದ್ರೆ ರಾಜಕಾರಣಿಗಳಿಗಿಂತ, ಸಾಮಾನ್ಯ ಜನರಿಗೆ ಹೆಚ್ಚಿನ ಆಸಕ್ತಿ ಇರುತ್ತೆ. ಯಾಕಂದ್ರೆ ಪಕ್ಷ ಪಕ್ಷಗಳ ಮಧ್ಯೆ ನಡೆಯೋ ಹೊಡೆದಾಟ, ಕೂಗಾಟ, ರಂಪಾಟ ಎಲ್ಲವನ್ನ ನೋಡೋಕೆ ಅವರಿಗೆ ಒಂದು ರೀತಿ ಖುಷಿಯಾಗುತ್ತೆ. ಅದರ ಜೊತೆಗೆ, ಒಬ್ಬರ ಮೇಲೆ, ಇನ್ನೊಬ್ಬರು ಮಾಡುವ ಆರೋಪ ನೋಡ್ತಿದ್ರೆ, ಜನರಿಗೆ ಒಂದು ರೀತಿ ಉಚಿತ ಮನರಂಜನೆ ಅಂತಾನೆ ಹೇಳಬಹುದು.

ಅದೇ ರೀತಿ ಜನರು ಈ ಬಾರಿಯ ಲೋಕಸಭಾ ಚುನಾವಣೆಯನ್ನ ಒಂದು ರೀತಿ ಮನರಂಜನೆಯಾಗಿ ತೆಗೆದುಕೊಂಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಚುನಾವಣೆಯಂತೂ, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಯಾಕಂದ್ರೆ ದಿನಬೆಳಗಾದ್ರೆ, ಒಬ್ಬರು, ಇನ್ನೊಬ್ಬರ ಮೇಲೆ ಆರೋಪ ಮಾಡೋದು, ಹಾಗೆ ಜಿದ್ದಾಜಿದ್ದಿ ನಡೆಸ್ತಿದ್ರು. ನಿಜಕ್ಕೂ ಅದನ್ನ ನೋಡುವ ಜನರಿಗೆ ಆಶ್ಚರ್ಯದ ಜೊತೆಗೆ, ಕುತೂಹಲವು ಹೆಚ್ಚಾಗುತ್ತಿತ್ತು. ಹೌದು. ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದಾದ್ರು ಯಾರು? ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ. ಆ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ. ಹೌದು. ಇಂದು ಬಂದಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಎಲ್ಲರ ಮನೆ ಮಾತಾಗಿದೆ.

ಮೈತ್ರಿ ಸರ್ಕಾರವನ್ನ ಹೊಡೆದುರುಳಿಸಿದ ಮೋದಿ ಪಡೆ

ಈ ದಿನ ಯಾವಾಗ ಬರುತ್ತೆ ಅಂತ ಎಲ್ಲರೂ ಕಾಯುತ್ತಿದ್ದರು. ಯಾಕಂದ್ರೆ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅಂತ. ಆದರೆ ಆ ವಿಜಯ ಮಾಲೆ ಬಿಜೆಪಿ ತೆಕ್ಕೆಗೆ ಸಿಕ್ಕಾಯ್ತು. ಹೌದು. ತುಂಬಾ ದಿನಗಳಿಂದ ಎಲ್ಲರೂ ಕಾತುರದಿಂದ ಕಾಯುತ್ತಿದ್ದ, ಗೊಂದಲಕ್ಕೆ ಇಂದು ಚುನಾವಣಾ ಆಯೋಗ ತೆರೆ ಎಳೆದಿದೆ. ನಿಜಕ್ಕೂ ಇಂಥ ಫಲಿತಾಂಶವನ್ನ ಎಂದಿಗೂ, ಯಾರು ನೋಡಿರಲಿಲ್ಲ ಎನಿಸುತ್ತೆ. ಯಾಕಂದ್ರೆ, ಇಡೀ ಮತಗಳೇ ಬಿಜೆಪಿ ತೆಕ್ಕೆಗೆ ಬೀಳುತ್ತವೆ ಅಂತ ಯಾರು ಊಹಿಸಿರಲಿಲ್ಲ. ಆದ್ರೆ ಎಲ್ಲಾ ಮತಗಳು ಕೂಡ, ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಸಾಧಿಸಿದೆ. ಅದು ರಾಷ್ಟ್ರದಲ್ಲೂ ಹೌದು. ಹಾಗು ರಾಜ್ಯದಲ್ಲೂ ಹೌದು.

ಎಲ್ಲಾ ಕ್ಷೇತ್ರಗಳಲ್ಲೂ ಹಾರಾಡುತ್ತಿರುವ ಕಮಲ ಬಾವುಟ

ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋ ನಂಬಿಕೆ ಎಲ್ಲರಿಗೂ ಇತ್ತು. ಆದ್ರೆ ರಾಜ್ಯದಲ್ಲಿ ಸ್ವಲ್ಪ ಗೊಂದಲ ಮಾಡಿತ್ತು., ಯಾಕಂದ್ರೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ. ಅದು ಅಲ್ಲದೆ, ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರೋದ್ರಿಂದ, ಏನು ಬೇಕಾದರೂ ಆಗಬಹುದು ಎಂದು ಎಲ್ಲರೂ ತಿಳಿದಿದ್ದರು. ಜೊತೆಗೆ, ಮೈತ್ರಿ ಸರ್ಕಾರದಲ್ಲಿ ಎಲ್ಲರೂ ದೊಡ್ಡ ದೊಡ್ಡ ಘಟಾನುಘಟಿಗಳೇ ಇದ್ದರು. ಆದರೂ ಬಿಜೆಪಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದರು. ಆದರೆ ಆ ಘಟಾನುಘಟಿ ಅಭ್ಯರ್ಥಿಗಳನ್ನ ಸೋಲಿಸಿ, ರಾಜ್ಯದಲ್ಲೂ ಬಿಜೆಪಿ ಅಧಿಕಾರ ಪಡೆದುಕೊಳ್ಳುವಂತಾಗಿದೆ.

3 ಸ್ಥಾನಗಳನ್ನ ಪಡೆದುಕೊಂಡ ಮೈತ್ರಿ ಸರ್ಕಾರ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಎಲ್ಲರೂ ತಿಳಿದಿದ್ದರು. ಆದರೆ ಮೈತ್ರಿ ಸರ್ಕಾರ ಪಡೆದ ಸ್ಥಾನ ಮಾತ್ರ 3. ಈ 3 ಸ್ಥಾನದಿಂದ, ಅಧಿಕಾರ ಪಡೆಯೋಕಾದ್ರೂ ಆಗುತ್ತಾ? ಖಂಡಿತ ಇಲ್ಲ. ಹಾಗಾಗಿ ಬಿಜೆಪಿ ಅದಿಕಾರಕಕ್ಕೆ ಬರುವುದಕ್ಕೆ ಎಲ್ಲಾ ರೀತಿಯಲ್ಲೂ ತಯಾರಾಗುತ್ತಿದೆ. ಈಗಾಗಲೇ ಕೆಲವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ನಾಳೆ ಒಳಗೆ. ಇನ್ನು ಕೆಲವರು ಎರಡು, ಮೂರೂ ದಿನ ಸಮಯ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಮೋದಿ ಪಡೆ, ಕರ್ನಾಟಕದ ಮೈತ್ರಿ ಸರ್ಕಾರವನ್ನ ಛಿದ್ರಗೊಳಿಸಿದೆ.

ಇಂತ ಫಲಿತಾಂಶವನ್ನ ಎಂದಿಗೂ ನೋಡಿರಲಿಲ್ಲ ಎನಿಸುತ್ತೆ. ಯಾಕಂದ್ರೆ ಒಂದು ಪಕ್ಷ 3 ಸ್ಥಾನ ಪಡೆದಿದೆ ಅಂದ್ರೆ, ನಂಬಬಹುದು. ಆದ್ರೆ, ಮೈತ್ರಿ ಸರ್ಕಾರ 3 ಸ್ಥಾನ ಪಡೆದಿದೆ ಅಂದ್ರೆ, ಎಲ್ಲರಿಗೂ ಆಶ್ಚರ್ಯದ ವಿಷಯವಾಗಿದೆ. ಒಟ್ಟಿನಲ್ಲಿ ರಾಷ್ಟ್ರ ಹಾಗು ರಾಜ್ಯ ಎರಡು ಕಡೆಯೂ ಕಮಲ ಪಾಳಯವಾಗಿದೆ.

LEAVE A REPLY

Please enter your comment!
Please enter your name here