ಕೆಜಿಎಫ್ -2 ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿ ಬಾಯ್

0
1078
kgf trailaer 2

ಸ್ಯಾಂಡಲ್ ವುಡ್ ನಲ್ಲಿ ಕೆಲವೊಂದು ಸಿನಿಮಾಗಳು ಮರೆಯಲಾಗದ ಲಿಸ್ಟ್ ಗೆ ಸೇರುತ್ತವೆ. ಹೌದು. ಚಂದನವನದಲ್ಲಿ ಇಲ್ಲಿಯವರೆಗೂ ಅನೇಕ ಚಿತ್ರಗಳು ತೆರೆ ಕಂಡಿದ್ದು, ಅವುಗಳಲ್ಲಿ ಕೆಲವು ಚಿತ್ರಗಳನ್ನು ಜನರು ಎಂದಿಗೂ ಮರೆಯುವುದಿಲ್ಲ. ಇನ್ನು ಆ ಲಿಸ್ಟ್ ಗೆ ಕೆಜಿಎಫ್ ಸಿನಿಮಾ ಕೂಡ ಸೇರುತ್ತದೆ. ನಿಜಕ್ಕೂ ಕೆಜಿಎಫ್ ಚಿತ್ರ ಸ್ಯಾಂಡಲ್ ವುಡ್ ಗೆ ನೀಡಿದಂತಹ ದೊಡ್ಡ ಸಾಧನೆಯಾಗಿದೆ. ಆಗಿಂದ ಯಶ್ ಕೂಡ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್ 1ನ್ನು ಇಷ್ಟಪಟ್ಟು ಗೆಲ್ಲುವಂತೆ ಮಾಡಿರುವ ಅಭಿಮಾನಿಗಳು, ಈಗ ಚಾಪ್ಟರ್ 2ಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಚಿತ್ರದ ಬಗ್ಗೆ ಯಾವುದೇ ಕೊಂಚ ಮಾಹಿತಿಯು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದು, ಜೊತೆಗೆ ಸಿನಿಮಾದ ಫಸ್ಟ್ ಲುಕ್ ಬಗ್ಗೆಯೂ ಬಹಿರಂಗಪಡಿಸಿದೆ.

ಟೀಸರ್ ಬಿಡುಗಡೆ ದಿನ ಪ್ರಕಟಿಸಿದ ರಾಕಿ ಬಾಯ್

ಕೆಜಿಎಫ್ ಚಿತ್ರದ ಶೂಟಿಂಗ್ ಪ್ರಾರಂಭವಾಗಿ ಅನೇಕ ತಿಂಗಳುಗಳೇ ಕಳೆದವು. ಆದರೂ ಸಹ ಚಿತ್ರದ ಬಗ್ಗೆ ಯಾವುದೇ ರೀತಿಯ ಸಣ್ಣ ಸುಳಿವನ್ನು ಚಿತ್ರತಂಡ ನೀಡಿರಲಿಲ್ಲ. ಹಾಗಾಗಿ ಅಭಿಮಾನಿಗಳು ಚಿತ್ರತಂಡದವರನ್ನು ಹಾಗು ಯಶ್ ಅವರನ್ನು ಪ್ರಶ್ನೆ ಮಾಡುತ್ತಲೇ ಇದ್ದರು. ಆದರೆ ಯಾರೊಬ್ಬರೂ ಸಹ ಯಾವುದೇ ಹೇಳಿಕೆ ನೀಡುತ್ತಿರಲಿಲ್ಲ. ಅಲ್ಲದೆ ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಯಶ್ ಭಾಗಿಯಾಗಿದ್ದಾಗ ಅಭಿಮಾನಿಗಳು ಯಶ್ ಅವರನ್ನು ಚಿತ್ರದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿದ್ದಾರೆ. ಆಗ ಯಶ್ ಸಣ್ಣ ಸುಳಿವನ್ನು ನೀಡಿದ್ದಾರೆ. ಹೌದು. ಮುಂದಿನ ತಿಂಗಳು ಅಂದ್ರೆ ಜನವರಿ 8ಕ್ಕೆ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಯಾಕಂದ್ರೆ ಅಂದು ಯಶ್ ಅವರ ಹುಟ್ಟುಹಬ್ಬ ಇರುವುದರಿಂದ ಅಂದೇ ಟೀಸರ್ ಲಾಂಚ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ಇನ್ನು ಈ ಬಗ್ಗೆ ಯಶ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಇನ್ನು ಈ ಚಿತ್ರದ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡುವುದಾಗಿ ಚಿತ್ರರಂಗ ತಿಳಿಸಿದೆ. ಹೌದು. ಕೆಜಿಎಫ್ ಚಾಪ್ಟರ್ 2 ಹೇಗೆಲ್ಲಾ ಇರಬಹುದು ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಹಾಗಾಗಿ ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಅಲ್ಲದೆ ಇದೇ ದಿನದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿರುವುದರ ಬಗ್ಗೆಯೂ ಚಿತ್ರತಂಡ ತಿಳಿಸಿದೆ. ಹೌದು. ಇದೇ ದಿನ ಕಳೆದ ವರ್ಷ ಕೆಜಿಎಫ್ ಚಾಪ್ಟರ್ 1 ತೆರೆ ಕಂಡು, ಸಕ್ಸಸ್ ಕಂಡಿತ್ತು. ಹಾಗಾಗಿ ಚಿತ್ರತಂಡಕ್ಕೆ ಈ ದಿನದ ಮೇಲೆ ಏನೋ ಒಂದು ರೀತಿಯ ಸೆಂಟಿಮೆಂಟ್. ಹಾಗಾಗಿ ಇಂದು ಸಂಜೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಚಿತ್ರದ ಮುಂದಿನ ಭಾಗವಾದ ಕೆಜಿಎಫ್ ಚಾಪ್ಟರ್ 2ರ ಫಸ್ಟ್ ಲುಕ್ ಇಂದು ಬಿಡುಗಡೆಯಾಗುತ್ತಿದ್ದು, ಮುಂದಿನ ತಿಂಗಳು ಟೀಸರ್ ಲಾಂಚ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

LEAVE A REPLY

Please enter your comment!
Please enter your name here