ಇನ್ಮುಂದೆ ಗ್ರಾಹಕರಿಗೆ ಹೊರೆಯನ್ನು ಹಾಕಲು ನಿರ್ಧರಿಸಿದೆ ಜಿಯೋ ಟೆಲಿಕಾಂ ಸಂಸ್ಥೆ

0
721

ಜಿಯೋ ನೆಟ್ವರ್ಕ್ ಕಂಪನಿ ಬಂದ ಮೇಲೆ ಬೇರೆ ನೆಟ್ವರ್ಕ್ ಗಳಿಗೆ ಭಾರಿ ಹೊಡೆತ ಬಿದ್ದಿತ್ತು. ಕಡಿಮೆ ದುಡ್ಡಿಗೆ ಹೆಚ್ಚು ಡೇಟಾ ಪ್ಲಾನ್ ಮತ್ತು ಉಚಿತ ಕರೆಯ ಆಫರ್ ಅನ್ನು ನೀಡಿತ್ತು. ಸಿಮ್ ನಂತರ ಜಿಯೋ ಟಿವಿ ಮತ್ತು ಜಿಯೋ ಮೊಬೈಲ್ ಗಳು ಮಾರುಕಟ್ಟೆಗೆ ಬಂದಿತ್ತು. ಒಟ್ಟಿನಲ್ಲಿ ಜಿಯೋ ಕಂಪನಿ ಅವರು ತಮ್ಮ ಮಾರ್ಕೆಟ್ ಅನ್ನು ಕಡಿಮೆ ಅವಧಿಯಲ್ಲಿ ವಿಸ್ತರಿಸಿದ್ದರು. ಗ್ರಾಹಕರು ಸಹ ಜಿಯೋ ನೀಡುವ ಆಫರ್ಸ್ ಗೆ ಮಾರು ಹೋಗಿದ್ದರು.

ಪ್ರತಿ ನಿಮಿಷಕ್ಕು 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ

ಇಷ್ಟು ದಿನಗಳ ಕಾಲ ಜಿಯೋ ನೆಟ್ವರ್ಕ್, ಬೇರೆ ಬೇರೆ ಡೇಟಾ ಪ್ಲಾನ್ ಗಳ ಮೂಲಕ ಗ್ರಾಹಕರಿಗೆ ಉಚಿತವಾದ ಕರೆ ಮತ್ತು ಇಂಟರ್ನೆಟ್ ಸೌಲಭ್ಯ ಒದಗಿಸಿ ಕೊಡುತ್ತಿತ್ತು. ಆದರೆ ಇನ್ಮುಂದೆ ಕರೆ ಹಾಗು ಡೇಟಾ ಪ್ಲಾನ್ ನಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಜಿಯೋ ಈಗ ಪ್ರತಿ ನಿಮಿಷಕ್ಕೂ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಕೇವಲ ಜಿಯೋ ನೆಟ್ವರ್ಕ್ ನಿಂದ ಬೇರೆ ನೆಟ್ವರ್ಕ್ ಗೆ ಕರೆ ಮಾಡಿದರೆ ಮಾತ್ರ ಅನ್ವಯವಾಗುತ್ತದೆ. ಜಿಯೋದಿಂದ ಬಿಎಸ್ಏನ್ಎಲ್, ಏರ್ಟೆಲ್, ವೊಡಾಫೋನ್ ಗೆ ಕರೆ ಮಾಡಿದರೆ 6 ಪೈಸೆ ಮೊತ್ತದಷ್ಟು ಶುಲ್ಕ ಇರುತ್ತಿತ್ತು. ಮುಂದೆ ಓದಿ

ಜಿಯೋ ನೆಟ್ವರ್ಕ್ ನಿಂದ ಗ್ರಾಹಕರಿಗೆ ಹೊರೆ

ಇನ್ಮುಂದೆ ಗ್ರಾಹಕರು ಕಟ್ಟುವ ಹಣಕ್ಕೆ ಸರಿ ಸಮಾನವಾಗಿ ಜಿಯೋ ಸಂಸ್ಥೆಯವರು ಸೇವೆಯನ್ನು ಒದಗಿಸಲಿದ್ದಾರೆ. 124 ನಿಮಿಷದವರೆಗೂ ಬೇರೆ ನೆಟ್ವರ್ಕ್ ಕಂಪನಿ ಜೊತೆ ಮಾತನಾಡಿದರೆ ಮಾತ್ರ 1 ಜಿಬಿ ಡೇಟಾ ಜಿಯೋ ತನ್ನ ಬಳಕೆದಾರರಿಗೆ ನೀಡಲಿದೆ.

ಇಲ್ಲಿಯವರೆಗೆ ಜಿಯೋ ನೆಟ್ವರ್ಕ್ ಹೊರತು ಪಡಿಸಿ ಇತರ ನೆಟ್ವರ್ಕ್ ಗಳ ಜೊತೆ ಮಾತನಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ಆಗುತ್ತಿತ್ತು. ಆದರೆ ಈ ಮೊತ್ತವನ್ನು ಜಿಯೋ ಸಂಸ್ಥೆಯವರೇ ಭರಿಸುತ್ತಿದ್ದರು. ಇದೆ ರೀತಿ ಜಿಯೋ 13,500 ಕೋಟಿ ರೂಪಾಯಿಯನ್ನು ಇತರ ನೆಟ್ವರ್ಕ್ ಗಳಿಗೆ ಪಾವತಿಸಿದೆ. ಇನ್ಮುಂದೆ ಗ್ರಾಹಕರಿಗೆ ಹೆಚ್ಚಿನ ದುಡ್ಡನ್ನು ಶುಲ್ಕವಾಗಿ ಪಡೆಯಬೇಕೆಂದು ಜಿಯೋ ಸಂಸ್ಥೆಯವರು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here