ಸಹೋದರ ಹಾಗು ಮಗನ ಸೋಲನ್ನು ಸಹಿಸದೆ ಹೊಸ ಪ್ಲಾನ್ ಮಾಡಿದ ಜಗ್ಗೇಶ್

0
686
jaggesh and sons

ಸ್ಯಾಂಡಲ್ ವುಡ್ ನಲ್ಲಿ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ನಟನೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಹೌದು. ಜಗ್ಗೇಶ್ ನಟನೆಗೆ ಮನಸೋಲದೆ ಇರುವವರಿಲ್ಲ. ಇನ್ನು ಅವರ ಹಾಸ್ಯಕ್ಕಂತೂ ಎಲ್ಲರು ಹೊಟ್ಟೆ ನೋವಾಗುವಷ್ಟು ನಗುತ್ತಾರೆ. ಆದ್ರೆ ಇಂತಹ ಕಲಾವಿದ ಈ ವಯಸ್ಸಿನಲ್ಲೂ ತೆಗೆದ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಆದ್ರೆ ಇವರ ಮಕ್ಕಳು ಹಾಗು ಸಹೋದರನ ಸಿನಿಮಾಗಳು ಮೂಲೆಗುಂಪಾಗುತ್ತಿವೆ. ಅಲ್ಲದೆ ಸಿನಿಮಾಗಳು ಅವರನ್ನು ಹುಡುಕಿಕೊಂಡು ಬರುವುದು ಕಡಿಮೆಯಾಗುತ್ತಿವೆ. ಆದ್ರೆ ಇತ್ತ ಜಗ್ಗೇಶ್ ಮಾತ್ರ ಪ್ರೀಮಿಯರ್ ಪದ್ಮಿನಿ ಹಾಗು ಕವಿರತ್ನ ಕಾಳಿದಾಸ ಎನ್ನುವ ಸಿನಿಮಾಗಳಿಂದ ಹಿಟ್ ಆಗುತ್ತಿದ್ದಾರೆ. ಹಾಗಾಗಿ ತನ್ನ ಗೆಲುವಿನ ಜೊತೆಗೆ ಸಹೋದರ ಹಾಗು ಮಗನ ಗೆಲುವು ಮುಖ್ಯ ಎಂದು ಅವರಿಗಾಗಿ ಹೊಸದೊಂದು ಪ್ಲಾನ್ ಮಾಡಿದ್ದಾರೆ.

ಸಹೋದರ ಹಾಗು ಮಗನಿಗಾಗಿ ಹೊಸ ಪ್ಲಾನ್ ಮಾಡಿದ ಜಗ್ಗೇಶ್

ಜಗ್ಗೇಶ್ ತಮ್ಮ ಸಿನಿಮಾಗಳಲ್ಲಿ ಹಾಗು ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ ಅವರ ಮಗ ಗುರುರಾಜ್ ಹಾಗು ಅವರ ಸಹೋದರ ಕೋಮಲ್ ಕುಮಾರ್ ಅವರು ಯಾವುದೇ ಅವಕಾಶಗಳಿಲ್ಲದೆ, ಸುಮ್ಮನಾಗಿದ್ದಾರೆ. ಅಲ್ಲದೆ ತೆಗೆಯುವ ಚಿತ್ರಗಳು ಸಹ ಯಶಸ್ವಿ ಕಾಣುತ್ತಿಲ್ಲ. ಹೌದು. ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಕೋಮಲ್ ಪಾದಾರ್ಪಣೆ ಮಾಡಿದ್ದು, ಮುಂದೆ ನಟನಾಗಲು ಬಯಸುತ್ತಾರೆ. ಅದರಂತೆ ಅವರು ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರೂ, ಅವರ ಸಿನಿಮಾಗಳು ಜನರ ಮನ ಮುಟ್ಟುವಲ್ಲಿ ವಿಫಲವಾದವು. ಅಲ್ಲದೆ ಇತ್ತೀಚಿಗಷ್ಟೇ ತೆರೆ ಕಂಡ ಅವರ ಕೆಂಪೇಗೌಡ 2 ಸಿನಿಮಾ ಕೂಡ ಮೂಲೆಗುಂಪಾಯಿತು. ಇನ್ನು ಜಗ್ಗೇಶ್ ಅವರ ಮಗ ಗುರುರಾಜ್ ಕೂಡ ಗಿಲ್ಲಿ ಎನ್ನುವ ಸಿನಿಮಾ ಮಾಡಿದ್ದು, ಅದು ಸಹ ಯಶಸ್ವಿಯಾಗಲಿಲ್ಲ. ಹಾಗಾಗಿ ಸೋಲಿನ ಛಾಯೆ ಆವರಿಸಿಕೊಂಡಿರುವ ಇವರಿಬ್ಬರ ಬಾಳಿಗೂ ಜಗ್ಗೇಶ್ ಬೆಳಕು ಚೆಲ್ಲಲು ಮುಂದಾಗಿದ್ದಾರೆ.

ಸಹೋದರ ಹಾಗು ಮಗನಿಗಾಗಿ ಆಕ್ಷನ್ ಕಟ್ ಹೇಳಲಿದ್ದಾರೆ

ನಟನಾಗಿ ಹಾಗು ನಿರ್ದೇಶಕನಾಗಿ ಹೆಚ್ಚಿನ ಅನುಭವವನ್ನು ಜಗ್ಗೇಶ್ ಪಡೆದಿರುವುದರಿಂದ ಈಗ ತಮ್ಮ ಸಹೋದರ ಹಾಗು ಮಗನಿಗಾಗಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಹೌದು. ಜಗ್ಗೇಶ್ ಈಗಾಗಲೇ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಂತೆ ಈಗ ಮತ್ತೆ ತನ್ನ ಸಹೋದರ ಹಾಗು ಮಗನಿಗಾಗಿ ನಿರ್ದೇಶನ ಮಾಡಲಿದ್ದಾರೆ. ಹೌದು. ಜಗ್ಗೇಶ್ ತಮ್ಮದೇ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಆ ಸಿನಿಮಾಗೆ ನಾಯಕರಾಗಿ ಕೋಮಲ್ ಹಾಗು ಗುರುರಾಜ್ ನಟಿಸಲಿದ್ದಾರಂತೆ, ವಿಭಿನ್ನವಾದ ಕಥೆಯನ್ನು ಸಿದ್ಧಮಾಡಿ, ಅದರಲ್ಲಿ ನನ್ನ ತಮ್ಮ ಹಾಗು ಮಗ ನಟಿಸುತ್ತಾರೆ ಎಂದು ಸ್ವತಃ ಜಗ್ಗೇಶ್ ಅವರೇ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸೋಲಿನ ಛಾಯೆಯಲ್ಲಿ ಮುಳುಗಿದ್ದ ಕೋಮಲ್ ಹಾಗು ಗುರುರಾಜ್ ಬಳಿಗೆ ಜಗ್ಗೇಶ್ ಬೆಳಕನ್ನು ಚೆಲ್ಲಲಿದ್ದಾರೆ. ಹಾಗಾಗಿ ಅವರಿಗಾಗಿ ಹೊಸದೊಂದು ಸಿನಿಮಾ ಮಾಡುವುದರ ಮೂಲಕ, ಅವರನ್ನು ಕೈ ಹಿಡಿದು ಮೇಲೆ ಎತ್ತಲಿದ್ದಾರೆ.

LEAVE A REPLY

Please enter your comment!
Please enter your name here