ಬ್ಯಾಟಿಂಗ್ ಕ್ರಮಾಂಕದ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಕೋಚ್ ರವಿ ಶಾಸ್ತ್ರಿ

0
749

ಈ ಬಾರಿ ಭಾರತ ವಿಶ್ವ ಕಪ್ ಗೆದ್ದೆ ಗೆಲ್ಲುತ್ತದೆ ಎನ್ನುವ ಭಾವನೆಯಲ್ಲಿ ಕ್ರೀಡಾಭಿಮಾನಿಗಳು ಇದ್ದರು. ಕೊನೆವರೆಗು ಮ್ಯಾಚ್ ತುಂಬಾ ಕುತೂಹಲಕಾರಿಯಾಗಿತ್ತು. ಮ್ಯಾಚ್ ನಡೆಯುವ ವೇಳೆಯಲ್ಲಿ ಧೋನಿ ಮತ್ತು ಜಡೇಜಾ ಅವರ ಆಟವನ್ನು ನೋಡುತ್ತಿದ್ದರೆ ವಿಶ್ವ ಕಪ್ ನಮ್ಮ ಪಾಲಿಗೆ ಇನ್ನು ಜೀವಂತವಾಗಿದೆ ಎಂದು ಅನಿಸುತ್ತಿತ್ತು. ಆದರೆ ಜಡೇಜಾ ಮತ್ತು ಧೋನಿ ಅವರ ವಿಕೆಟ್ಸ್ ಕಳೆದುಕೊಂಡ ಮೇಲೆ ವಿಶ್ವ ಕಪ್ ಕನಸು ನುಚ್ಚು ನೂರಾಗಿ ಹೋಯಿತು. ಮತ್ತೊಂದು ಅಡ್ಡಿ ಉಂಟಾಗಿದ್ದು ಮಳೆರಾಯನಿಂದ. ಹೌದು, ಅಕಸ್ಮಾತ್ ಅದೆ ದಿನ ಆಟವನ್ನು ಆಡಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತು. ಆದರೆ ಮಳೆ ಸುರಿದಿರುವದರಿಂದ ಪಿಚ್ ಚೇಂಜ್ ಆಗಿದ್ದು, ನ್ಯೂಜಿಲ್ಯಾಂಡ್ ಗೆ ಅನುಕೂಲವಾಯಿತು. ಇನ್ನು ಭಾರತ ತಂಡ ಎಡವಿದ್ದು ಯಾವ ಸ್ಥಾನದಲ್ಲಿ ಯಾವ ಬ್ಯಾಟ್ಸ್ಮೆನ್ ಕಲಿಸಬೇಕೆನ್ನುವ ವಿಷಯದಲ್ಲಿ. ಹಿರಿಯ ಆಟಗಾರರಾದ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಪ್ರತಿಕ್ರಯಿಸಿದ್ದಾರೆ.

ಭಾರತ ತಂಡ ಸೋತ ನಂತರ ಪ್ರತಿಕ್ರಿಯಿಸಿದ ಸಚಿನ್ ಮತ್ತು ಗಂಗೂಲಿ

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಗೆ ಬರುವ ಮುನ್ನ ಧೋನಿ ಬರಬೇಕಿತ್ತು, ಧೋನಿ ರಿಷಬ್ ಪಂತ್ ಅವರಿಗೆ ಕೆಟ್ಟ ಹೊಡೆತಕ್ಕೆ ಕೈಹಾಕಲು ಬಿಡುತ್ತಿರಲಿಲ್ಲ. ಕಾರ್ತಿಕ್, ಪಾಂಡ್ಯರನ್ನ ಜಡೇಜಾ ಜೊತೆಗೆ ಕೊನೆಗೆ ಆಡಿಸಬೇಕಿತ್ತು. ನನಗೆ ಗೊತ್ತಿಲ್ಲ ಕೋಚ್ ರವಿ ಶಾಸ್ತ್ರಿ ತಲೆಯಲ್ಲಿ ಏನು ಇತ್ತು ಅಂತ. ಶಾಸ್ತ್ರಿ ಬಹಳ ದೊಡ್ದು ತಪ್ಪು ಮಾಡಿಬಿಟ್ಟರು ಎಂದು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಧೋನಿ 5ನೇ ಕ್ರಮಾಂಕದಲ್ಲಿ ಆಡಿದ್ದರೆ, ಏನಾದರೂ ಬದಲಾವಣೆ ಆಗಬಹುದಾಗಿತ್ತು. ಇಂತಹ ಒಂದು ಕಠಿಣವಾದ ಸಂದರ್ಭದಲ್ಲಿ ಧೋನಿಯನ್ನು ಬ್ಯಾಟಿಂಗ್ ಗೆ ಕಳಿಸಿ ಗೇಮ್ ಕಂಟ್ರೋಲ್ ಗೆ ತೆಗೆದುಕೊಂಡು ಬಾ ಎಂದು ಹೇಳುವುದು ತಪ್ಪಾಗುತ್ತದೆ. ಕೊನೆ ಹಂತದಲ್ಲಿ ಜಡೇಜಾ ಹತ್ತಿರ ಮಾತನಾಡಿ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಬಹಳ ಜಾಣ್ಮೆಯಿಂದ ಧೋನಿ ಸ್ಟ್ರೈಕ್ ರೋಟೇಟ್ ಮಾಡುತ್ತಿದ್ದರು ಎಂದು ಸಚಿನ್ ತೆಂಡುಲ್ಕರ್ ತಿಳಿಸಿದ್ದಾರೆ.

ಗೊಂದಲದ ವಿಷಯದಲ್ಲಿ ರವಿ ಶಾಸ್ತ್ರಿ ಸ್ಪಷ್ಟನೆ

ಧೋನಿಯ ಬ್ಯಾಟಿಂಗ್ ವಿಚಾರದಲ್ಲಿ ಹಲವಾರು ಗೊಂದಲದ ಪ್ರಶ್ನೆಗಳು ಎದ್ದಿವೆ. ಇದಕೆಲ್ಲ ಕಾರಣ ರವಿ ಶಾಸ್ತ್ರಿ ಎಂದು ಅವರನ್ನು ದೊಷಿಸುತ್ತಿದ್ದಾರೆ. ಆದರೆ ರವಿ ಶಾಸ್ತ್ರಿ ಇವರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದು ತಂಡದ ನಿರ್ಣಯವಾಗಿದ್ದು, ಎಲ್ಲರು ಸಹ ಇದರಲ್ಲಿ ಭಾಗಿಯಾಗಿದ್ದರು, ಇದು ಬಹಳ ಸಿಂಪಲ್ ಆದ ನಿರ್ಧಾರ ಆಗಿತ್ತು. ಅಕಸ್ಮಾತ್ ಧೋನಿ ಮೊದಲೆ ಬಂದಿದ್ದಾರೆ, ಔಟ್ ಆಗಿದ್ದರೆ, ಮುಂದೆ ಯಾವ ಅನುಭವಿ ಆಟಗಾರರು ಇರುತ್ತಿರಲಿಲ್ಲ.

ಧೋನಿ ಅವರ ಅನುಭವವವನ್ನು ನಾವು ಕೊನೆ ಕ್ಷಣದಲ್ಲಿ ಉಪಯೋಗಿಸಕೊಳ್ಳಬೇಕಾಗಿದೆ. ಧೋನಿ ಗ್ರೇಟೆಸ್ಟ್ ಫಿನಿಶರ್ ಎಂದು ಎಲ್ಲರಿಗೆ ಗೊತ್ತಿದೆ. ಧೋನಿ ಅವರನ್ನು ಮೊದಲೆ ಕಳಿಸಿದ್ದರೆ ಅದು ಕ್ರಿಮಿನಲ್ ಆದ ಕೆಲಸವಾಗುತ್ತಿತ್ತು. ಇಡೀ ತಂಡಕ್ಕೆ ಇದರ ಬಗ್ಗೆ ಸ್ಪಷ್ಟನೆ ಇತ್ತು ಎಂದು ಹೇಳಿದ್ದಾರೆ .

LEAVE A REPLY

Please enter your comment!
Please enter your name here