ಈ ಹನುಮನ ವಿಗ್ರದಿಂದ ಬರುವ ‘ರಾಮ ರಾಮ’ ನಾದವನ್ನು ಕೇಳಿದರೆ ಪಾಪ ಮುಕ್ತರಾಗುತ್ತಾರೆ

0
1575

ನಮ್ಮ ಹಿಂದುಗಳಿಗೆ ದೇವರು ಅಂದ್ರೆ ಅಪಾರ ಭಕ್ತಿ ಹಾಗು ನಂಬಿಕೆ. ಹೌದು. ನಮ್ಮ ಭಾರತೀಯರು ದೇವರ ಮೇಲಿಟ್ಟಿರುವ ನಂಬಿಕೆಯನ್ನು ಬೇರೆ ಯಾವುದರ ಮೇಲೆಯೂ ಇಟ್ಟಿಲ್ಲ. ಹಾಗಾಗಿ ನಮ್ಮಲ್ಲಿ ಗಲ್ಲಿಗೆ ಒಂದರಂತೆ ದೇವಾಲಯಗಳನ್ನು ಕಟ್ಟಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ದೇವಾಲಯಕ್ಕೆ ಹೋಗೋದು ಕೆಲವು ಕಾರಣಗಳಿಂದ ಮಾತ್ರ. ಹೌದು. ಮನಸ್ಸಿನ ನೆಮ್ಮದಿಗಾಗಿ, ಕಷ್ಟಗಳು ನಿವಾರಣೆಯಾಗಲು ಹಾಗು ಅಂದುಕೊಂಡಂತ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಈಡೇರಲಿ ಎಂದು ದೇಶದ ನಾನಾ ದೇವಾಲಯಗಳಿಗೆ ಅಲೆಯುತ್ತಾರೆ. ಆದ್ರೆ ಈಗಿನ ಜನರಿಗೆ ಭಜರಂಗಿ ಅಂದ್ರೆ ಅದೇನೋ ಒಂಥರಾ ಭಕ್ತಿ. ಹಾಗಾಗಿ ರಾಮನ ಭಂಟ ಹನುಮನನ್ನು ಸದಾಕಾಲ ನೆನೆಯುತ್ತಲೇ ಇರುತ್ತಾರೆ. ಅಲ್ಲದೆ ಗಲ್ಲಿಗೆ ಒಂದರಂತೆ ವಜ್ರಕಾಯನ ದೇವಾಲಯಗಳನ್ನು ನಿರ್ಮಿಸಿ, ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಇಲ್ಲೊಂದು ದೇವಾಲಯದಲ್ಲಿ ಆಂಜನೇಯನ ವಿಗ್ರಹ ರಾಮ ರಾಮ ಎಂದು ಜಪಿಸುತ್ತಿರುತ್ತದೆ. ಈ ಶಬ್ದವನ್ನು ಅಲ್ಲಿನ ಜನರೆಲ್ಲಾ ಕೇಳಿಕೊಂಡಿದ್ದಾರಂತೆ.

ರಾಮ ರಾಮ ಎಂದು ಜಪಿಸುತ್ತಿರುವ ಹನುಮನ ವಿಗ್ರಹ

ವಾಯುಪುತ್ರ, ರಾಮನ ಭಂಟ ಎನ್ನುವುದು ಎಲ್ಲರಿಗು ಗೊತ್ತಿರುವ ವಿಷಯ. ತಾನು ನಂಬಿರುವ ದೇವನಿಗಾಗಿ ಹನುಮ, ಏನು ಬೇಕಾದರೂ ಮಾಡಲು ಸಿದ್ಧ. ಹೀಗಿರುವಾಗ ತನ್ನ ಭಕ್ತಿಯನ್ನು ತೋರಿಸಲು ಹನುಮ, ತನ್ನ ವಜ್ರಕಾಯದಂತಹ ಎದೆಯನ್ನು ಬಗೆದು ತೋರಿಸಿತ್ತು. ಯಾಕಂದ್ರೆ ಹನುಮನ ಪ್ರತಿ ಕಣದಲ್ಲೂ ರಾಮನೇ ತುಂಬಿದ್ದಾನೆ. ಹಾಗಾಗಿ ಎಲ್ಲ ಹನುಮನ ದೇವಾಲಯಗಳಲ್ಲೂ ಚಿಕ್ಕದೊಂದು ರಾಮನ ಮೂರ್ತಿಯನ್ನು ಸಹ ಇಟ್ಟಿರುತ್ತಾರೆ. ಆದ್ರೆ ಈ ದೇವಾಲಯದಲ್ಲಿ ಹನುಮ ದೇವರು, ಸದಾಕಾಲ ರಾಮನನ್ನು ಜಪಿಸುತ್ತಿರುತ್ತದಂತೆ. ಹೌದು. ರಾಮ ರಾಮ ಎಂದು ಆಂಜನೇಯನ ವಿಗ್ರಹದಿಂದ ಬರುವ ಶಬ್ದವನ್ನು ಇಲ್ಲಿರುವ ಜನರೆಲ್ಲಾ ಕೇಳಿಸಿಕೊಂಡಿದ್ದಾರಂತೆ.

ದೇವರ ಬಾಯಿಗೆ ಇಡುವ ಪ್ರಸಾದದ ಬಗ್ಗೆ ಬಹಳಷ್ಟು ರೋಚಕವಾಗಿದೆ

ಇನ್ನು ಈ ದೇವಾಲಯ ಇರೋದು ಉತ್ತರ ಪ್ರದೇಶದ ಇಟಾವಾದಿಂದ ೧೨ ಕಿಮೀ ದೂರದಲ್ಲಿ ರೂರ ಎಂಬ ಹಳ್ಳಿಯ ಬಳಿ ಯಮುನಾ ದಂಡೆಯಲ್ಲಿ ಸ್ಥಾಪಿತವಾಗಿದೆ. ಇನ್ನು ಈ ದೇವಾಲಯದ ಹೆಸರು, ಪಿಲುವ ಮಹಾವೀರ ಆಲಯ. ಈ ದೇವಾಲಯದಲ್ಲಿರುವ ಹನುಮ ಬಹಳಷ್ಟು ಶಕ್ತಿಯುತವಂತೆ. ಜೊತೆಗೆ ಇಲ್ಲಿಗೆ ಬರುವ ಭಕ್ತರು ದೇವರ ಬಾಯಲ್ಲಿ ಪ್ರಸಾದವನ್ನು ಹಾಕುತ್ತಾರೆ. ಆದ್ರೆ ಆ ಪ್ರಸಾದ ಎಲ್ಲಿಗೆ ಹೋಗುತ್ತದೆ ಎಂಬುದು ಇಲ್ಲಿಯವರೆಗೆ ಯಾರಿಗೂ ಸಹ ತಿಳಿದಿಲ್ಲವಂತೆ. ಅಲ್ಲದೆ ವಾಸಿಯಾಗದ ಖಾಯಿಲೆಗಳನ್ನು ಸಹ ಇಲ್ಲಿ ವಾಸಿಯಾಗುವಂತೆ ಮಾಡುತ್ತಾರಂತೆ. ಹಾಗಾಗಿ ಸಾಕಷ್ಟು ಜನ ಭಕ್ತಾಧಿಗಳು ಇಲ್ಲಿಗೆ ಬರುತ್ತಲೇ ಇರುತ್ತಾರೆ.

ಸಾವಿರಾರು ಭಕ್ತರು ಹನುಮ ದರ್ಶನ ಪಡೆಯುತ್ತಾರೆ

ರಾಮನ ಭಕ್ತ ಹನುಮನನ್ನು ನೋಡಲು ಸಾಕಷ್ಟು ಜನ ಭಕ್ತಾಧಿಗಳು ಬರುತ್ತಲೇ ಇರುತ್ತಾರೆ. ಯಾಕಂದ್ರೆ ಬೇಡಿದ ವರಗಳನ್ನು ಕ್ಷಣಮಾತ್ರದಲ್ಲಿ ಈ ಮಾರುತಿ ಈಡೇರಿಸುತ್ತದೆಯಂತೆ. ಹಾಗಾಗಿ ವಾಸಿಯಾಗದ ಖಾಯಿಲೆ ಬಂದಿರುವವರು, ಜೊತೆಗೆ ವಿಶೇಷ ಬೇಡಿಕೆಗಳನ್ನು ಬೇಡುವವರು ಇಲ್ಲಿಗೆ ಬರುತ್ತಾರೆ. ಅಲ್ಲದೆ ಇಲ್ಲಿ ವಿಗ್ರಹದಿಂದ ಬರುವ ರಾಮ ರಾಮ ಎನ್ನುವ ಶಬ್ದ ಯಾವ ಕಾರಣಕ್ಕೂ ಇಲ್ಲಿಯವರೆಗೂ ನಿಂತಿಲ್ಲವಂತೆ. ಹೌದು. ಮಧ್ಯರಾತ್ರಿ ಹೋಗಿ, ಬಾಗಿಲಿಗೆ ಕಿವಿಕೊಟ್ಟು ಕೇಳಿಸಿಕೊಂಡರು, ರಾಮ ರಾಮ ಎನ್ನುವ ಶಬ್ದ ಬರುತ್ತಲೇ ಇರುತ್ತದೆ. ಹಾಗಾಗಿ ಅನೇಕ ಭಕ್ತರು ಇಲ್ಲಿಗೆ ಬಂದು, ಹನುಮನ ದರ್ಶನ ಪಡೆದು, ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದಾರಂತೆ.

ನಿಜಕ್ಕೂ ಹನುಮನ ಮಹಾತ್ಮೆಯನ್ನು ಕೇಳುತ್ತಿದ್ದರೆ, ಎಂಥವರ ಮೈ ಕೂಡ ಒಂದು ಕ್ಷಣ ಜುಮ್ಮೆನ್ನುವಂತೆ ಮಾಡುತ್ತದೆ. ಯಾಕಂದ್ರೆ ವಜ್ರಕಾಯನ ಮಹಾತ್ಮೆ ಅಷ್ಟರ ಮಟ್ಟಿಗೆ ಇದೆ. ಜೈ ಭಜರಂಗಿ.

LEAVE A REPLY

Please enter your comment!
Please enter your name here